ಚಿಕ್ಕಮಗಳೂರು: ಗೃಹಜ್ಯೋತಿ ಯೋಜನೆ (Gruhajyothi Scheme) ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸೋಕೆ ಜುಲೈ 25ರ ವರೆಗೂ ಸಮಯವಿದೆ. ಅರ್ಜಿ ಹಾಕದವರಿಗೆ ವಿದ್ಯುತ್ ಉಚಿತ (Free Electricity) ಸಿಗುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ (KJ George) ಹೇಳಿದ್ದಾರೆ.
Advertisement
ನಗರದ ಐಡಿಎಸ್‌ಜಿ ಕಾಲೇಜು ಗ್ರೌಂಡ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಗೃಹಜ್ಯೋತಿ ಯೋಜನೆ ಕೆಲಸ ಚೆನ್ನಾಗಿ ಆಗುತ್ತಿದೆ. 86.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಜುಲೈ 1ರಿಂದಲೇ ಎಲ್ಲರಿಗೂ ಫ್ರೀ ಕರೆಂಟ್ ಸಿಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ, ಗೃಹಜ್ಯೋತಿ ಇಂದಿನಿಂದ ಜಾರಿ
Advertisement
Advertisement
ಈ ತಿಂಗಳ ಕೊನೆಯಲ್ಲಿ ಎಲ್ಲರಿಗೂ ಬಿಲ್ ಬರುತ್ತೆ. ಜೂನ್ ತಿಂಗಳಿನದ್ದು ಜುಲೈಗೆ ಬರಲಿದೆ. ಎಲಿಜಬಲ್ ಇರೋ ಎಲ್ಲರಿಗೂ ಆಗಸ್ಟ್ 1ಕ್ಕೆ ಬಿಲ್ ಬರಲಿದ್ದು. ಉಚಿತ ಕರೆಂಟ್ ಸಿಗಲಿದೆ. ಈವರೆಗೆ ಅರ್ಜಿ ಸಲ್ಲಿಕೆ ಮಾಡದವರು ಕೂಡಲೇ ಅರ್ಜಿ ಸಲ್ಲಿಸಬೇಕು. ಸರ್ವರ್ ಬ್ಯೂಸಿ ಇದ್ದರೆ, ಕೆಇಬಿ ಆಫೀಸಿಗೂ ಹೋಗಿ ಅರ್ಜಿ ಕೊಡಬಹುದು. ಮೊದಲಿನಂತೆ ಈಗ ಸರ್ವರ್ ಸಮಸ್ಯೆಯಿಲ್ಲ. ಒಂದು ವೇಳೆ ಅರ್ಜಿ ಸಲ್ಲಿಸದಿದ್ದರೆ ಉಚಿತ ಕರೆಂಟ್ ಸೌಲಭ್ಯ ಸಿಗಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ವಿರೋಧ ಪಕ್ಷದ ನಾಯಕರು ಬೇಕಾಗಿದ್ದಾರೆ – ಟ್ವೀಟ್‌ನಲ್ಲೇ ಕಾಲೆಳೆದ ಕಾಂಗ್ರೆಸ್
Advertisement
ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿದವರಗೆ ಮಾತ್ರ ಆಗಸ್ಟ್ ತಿಂಗಳಿಂದ ಕರೆಂಟ್ ಬಿಲ್ ಫ್ರೀ ಇರಲಿದೆ. ಇಲ್ಲದಿದ್ದರೆ, ಉಚಿತ ಇರಲ್ಲ. ಅರ್ಜಿ ಹಾಕೋದು ತಡ ಮಾಡಿದ್ರೆ, ಸೌಲಭ್ಯ ಸಿಗೋದು ಕೂಡ ತಡವಾಗುತ್ತೆ. ಆದ್ದರಿಂದ ಎಲ್ಲರೂ ಆದಷ್ಟು ಬೇಗ ಅರ್ಜಿ ಹಾಕೋದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
Web Stories