ಬೆಳಗಾವಿ: ಕಿತ್ತೂರು ತಹಶೀಲ್ದಾರ್ (Kittur Tahsildar) ಸೇರಿ ಇಬ್ಬರು ಲೋಕಾಯುಕ್ತ(Lokayukta) ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿರುವ ದೂರುದಾರನ ತಂದೆ ಹೃದಯಾಘಾತದಿಂದ(Heart Attack) ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಜಿಲ್ಲೆಯ ಕಿತ್ತೂರು ತಾಲೂಕಿನ ಖೋದಾನಪುರ ಗ್ರಾಮದ ಬಾಪುಸಾಹೇಬ್ ಇನಾಮದಾರ್ ಹೃದಯಘಾತದಿಂದ ಮೃತಪಟ್ಟಿದ್ದಾರೆ.
Advertisement
Advertisement
ಮೃತರ ಪುತ್ರ ರಾಜೇಂದ್ರ ಇನಾಮದಾರ 10 ಎಕರೆ ಜಮೀನಿನ ಖಾತಾ ಬದಲಾವಣೆ ಅರ್ಜಿ ಸಲ್ಲಿಸಿದ್ದರು. ಇತ್ತ ಬಾಪುಸಾಹೇಬ್ ಹೆಸರಲ್ಲಿದ್ದ ಜಮೀನನ್ನು ಮಗ ರಾಜೇಂದ್ರ ಹೆಸರಿಗೆ ಖಾತಾ ಬದಲಾವಣೆಗೆ ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ 5 ಲಕ್ಷ ರೂ. ಲಂಚ ಹಾಗೂ ಶ್ಯೂರಿಟಿಗಾಗಿ 20 ಲಕ್ಷ ರೂ. ಮೌಲ್ಯದ ಖಾಲಿ ಚೆಕ್ ಕೇಳಿದ್ದರು.
Advertisement
ಇದರಿಂದ ಬೇಸತ್ತಿದ್ದ ರಾಜೇಂದ್ರ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ತಡರಾತ್ರಿ ನಡೆಸಿದ ದಾಳಿಯಲ್ಲಿ 2 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಭೂಸುಧಾರಣಾ ನಿರ್ವಾಹಕ ಪ್ರಸನ್ನ ಜಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಇದನ್ನೂ ಓದಿ: ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತ ಬಲೆಗೆ
Advertisement
ಮಗ ರಾಜೇಂದ್ರ ಇನಾಮದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿರುವ ಸುದ್ದಿ ತಿಳಿದ ಬಳಿಕ ರಾಜೇಂದ್ರ ತಂದೆ ಬಾಪುಸಾಹೇಬ್ ಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಪ್ರಕರಣದ ಆರೋಪಿಗಳಾದ ತಹಶೀಲ್ದಾರ್, ಭೂಸುಧಾರಣಾ ನಿರ್ವಾಹಕ ಹಿಂಡಲಗಾ ಜೈಲು ಸೇರಿದ್ದಾರೆ.