ಬೆಳಗಾವಿ: ಕಳೆದ ಮೂರು ಶತಮಾನಗಳ ಹಿಂದೆ ನಡೆದಿದ್ದ ಜಿಲ್ಲೆಯ ಕಿತ್ತೂರಿನ ಐತಿಹಾಸಿಕ ಚನ್ನಮ್ಮಾಜಿ ಕೋಟೆ ಆವರಣದ ಗ್ರಾಮದೇವಿ ಜಾತ್ರಾ ಮಹೋತ್ಸವವನ್ನು ಮತ್ತೆ ಆಯೋಜಿಸಲಾಗುತ್ತಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಶಾಸಕ ಮಹಾಂತೇಶ್ ದೊಡಗೌಡರ, ಅಧ್ಯಕ್ಷ ಈರಣ್ಣಾ ಮಾರಿಹಾಳ, ಮಾಜಿ ಶಾಸಕ ಸುರೇಶ ಮಾರಿಹಾಳ ಸೇರಿದಂತೆ ಹಲವು ಮುಖಂಡರು ಇಂದು ಪೂರ್ವಭಾವಿ ಸಭೆಯ ನಡೆಸಿ ಸಿದ್ಧತೆ ಆರಂಭಸಿದ್ದಾರೆ.
ಜಾತ್ರಾ ಮಹೋತ್ಸವ ಏಪ್ರಿಲ್ 27 ರಿಂದ 11 ದಿನಗಳವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಐತಿಹಾಸಿಕ ಕಿತ್ತೂರು ಪಟ್ಟಣದಲ್ಲಿನ ಗ್ರಾಮದೇವಿ ಜಾತ್ರೆಗೆ ಎಲ್ಲ ಸಹಕಾರ ನೀಡುವುದರ ಮೂಲಕ ಯಶಸ್ಸಿಗೆ ಶಕ್ತಿ ಮೀರಿ ಪ್ರಯತ್ನಿಸುವುದಾಗಿ. ತೇರು ಸರಾಗವಾಗಿ ಸಾಗಲು ಪಟ್ಟಣದಲ್ಲಿನ ರಸ್ತೆಗಳನ್ನು ಸಿದ್ಧಗೊಳಿಸಲಾಗುವುದು. ಅಧಿಕಾರಗಳ ಜೊತೆ ಸಭೆ ನಡೆಸಿ ಜಾತ್ರೆ ಯಶಸ್ಸಿಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದ್ದಾರೆ.
Advertisement
Advertisement
ಕಳೆದ ಮೂರು ಶತಮಾನದಿಂದಲೂ ಕಿತ್ತೂರಲ್ಲಿ ಗ್ರಾಮದೇವಿ ಜಾತ್ರೆ ನಡೆದ ಇತಿಹಾಸವಿಲ್ಲ. ಈಗ ಜಾತ್ರೆ ನಡೆಯುತ್ತಿದ್ದು ಪಟ್ಟಣದ ಹಾಗೂ ಸುತ್ತಲಿನ ಗ್ರಾಮಗಳ ಎಲ್ಲ ಜನರ ಸಹಕಾರ ಅವಶ್ಯವಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಜೃಂಭಣೆಯಿಂದ ಜಾತ್ರೆಯನ್ನು ಮಾಡೋಣ. ಪಟ್ಟಣದ ರಸ್ತೆ ಅಭಿವೃದ್ಧಿ, ನೀರು, ವಿದ್ಯುತ್ ಸೇರಿದಂತೆ ಅವಶ್ಯವಿರುವ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಶಾಸಕರು ತಿಳಿಸಿದರು.
Advertisement
ಜಾತ್ರಾ ಮಹೋತ್ಸವದ ಅಧ್ಯಕ್ಷ ಈರಣ್ಣಾ ಮಾರಿಹಾಳ ಮಾತನಾಡಿ, ಗ್ರಾಮದೇವಿ ಜಾತ್ರೆಯು ನೂರಾರು ವರ್ಷಗಳಿಂದ ನಡೆದ ಇತಿಹಾಸವಿಲ್ಲ. ಈಗಿನ ತಲೆಮಾರಿನಿಂದ ಈ ಜಾತ್ರೆಯು ನಡೆಯುವಂತಾಗಿದೆ. ಏಪ್ರಿಲ್ 27 ರಿಂದ ಪ್ರಾರಂಭವಾಗಿ 11 ದಿನಗಳವರೆಗೆ ವಿಜೃಂಭಣೆಯಿಂದ ಜಾತ್ರೆ ನಡೆಯಲಿದೆ. ಜಾತ್ರೆಯ ಹೆಚ್ಚಿನ ಜವಾಬ್ದಾರಿಯು ಶಾಸಕ ಮಹಾಂತೇಶ ದೊಡಗೌಡರ ಹಾಗೂ ಮಾಜಿ ಶಾಸಕ ಸುರೇಶ ಮಾರಿಹಾಳ ಇವರ ಮೇಲಿದೆ. ಜಾತ್ರೆ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸುವುದಾಗಿ ಹೇಳಿದರು.
Advertisement
ಮಾಜಿ ಶಾಸಕ ಸುರೇಶ ಮಾರಿಹಾಳ, ಜಾತ್ರಾ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಭಜನಾ ಸಮಿತಿ ಸದಸ್ಯರು, ಕಿತ್ತೂರಿನ ಹಾಗೂ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಜಾತ್ರೆಯ ಯಶಸ್ಸಿಗೆ ಬೇಕಾಗುವ ಹಲವು ಬೇಡಿಕೆಗಳನ್ನು ಮನವಿ ಮೂಲಕ ಅಧಿಕಾರಿಗಳಿಗೆ ಸಲ್ಲಿಸಿದರು.