– ನೀನ್ ಮೊದಲು ಕ್ಯಾಪ್ಟನ್ ಆಗಿ ತೋರ್ಸು ಎಂದ ಗಿಲ್ಲಿ
ಕಳೆದೊಂದು ವಾರದಿಂದ ತಣ್ಣಗಾಗಿದ್ದ ಬಿಗ್‌ಬಾಸ್ (BBK12) ಮನೆಯಲ್ಲಿ ಇದೀಗ ಮತ್ತೆ ಕಿಚ್ಚು ಹೊತ್ತಿಕೊಂಡಿದೆ. ಕ್ಯಾಪ್ಟನ್ ಗಿಲ್ಲಿ (Gilli) ಹಾಗೂ ಅಶ್ವಿನಿ ಗೌಡ (Ashwini Gowda) ನಡುವೆ ಗಲಾಟೆ ಶುರುವಾಗಿದ್ದು, ಕೆಲಸ ಮಾಡ್ಸಿಯೇ ತೀರುತ್ತೇನೆ ಎಂದು ಗಿಲ್ಲಿ ಶಪಥ ಮಾಡಿಕೊಂಡಂತಿದೆ.
ಫ್ಯಾಮಿಲಿ ರೌಂಡ್ ಶುರುವಾದಾಗಿನಿಂದ ಮನೆಯಲ್ಲಿ ಸಂಭ್ರಮ, ಸಡಗರ ಜೋರಾಗಿತ್ತು. ಜೊತೆಗೆ ಮೇಲಿಂದ ಮೇಲೆ ಮನೆಗೆ ಗೆಸ್ಟ್‌ಗಳು ಬರುತ್ತಿದ್ದರಿಂದ ಆಟ, ತುಂಟಾಟದಲ್ಲಿಯೇ ಸ್ಪರ್ಧಿಗಳು ಕಾಲಕೆಳದಿದ್ದರು. ಅಶ್ವಿನಿ ಹಾಗೂ ಗಿಲ್ಲಿ ಅಂತೂ ಅತ್ತೆ ಮಗಳು ಅಂತಾನೇ ಮಾತನಾಡುತ್ತಾ ತರ್ಲೆ ಮಾಡಿದ್ದರು. ಇದೀಗ ಮನೆಯಲ್ಲಿ ಮತ್ತೆ ಕಿಚ್ಚು ಹೊತ್ತಿಕೊಂಡಿದೆ. ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು, ಗಿಲ್ಲಿ ಹಾಗೂ ಅಶ್ವಿನಿ ಮಧ್ಯೆ ಕಿಚನ್ ವಾರ್ ಶುರುವಾಗಿದೆ. ಇದನ್ನೂ ಓದಿ: BBK 12 | ಬೆಂಗ್ಳೂರಿಗೆ ಬಂದಾಗ ಇರೋಕೆ ಜಾಗ ಇರಲಿಲ್ಲ – ದೊಡ್ಮನೆಯಲ್ಲಿ ಕಣ್ಣೀರಿಟ್ಟ ಸ್ಪಂದನಾ
ಕೆಲ್ಸ ಮಾಡದೆ ಇರೋರ್ಗೆ ಕೆಲ್ಸ ಮಾಡ್ಸೋಕೆ ಬರುತ್ತಾ? ಓವರ್ ಟು ಕ್ಯಾಪ್ಟನ್ ಗಿಲ್ಲಿ!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/jeKAhBAG1q
— Colors Kannada (@ColorsKannada) December 29, 2025
ಕಿಚನ್ ಕ್ಲೀನ್ ಮಾಡಿ ಕೆಲಸ ಮುಗಿಸಿ ಎಂದು ಗಿಲ್ಲಿ ಹೇಳುತ್ತಾನೆ. ಅದಕ್ಕೆ ಅಶ್ವಿನಿ ಬೆಳಿಗ್ಗೆ ಮಾಡ್ತೀವಿ.. ಈಗ ಸುಸ್ತಾಗಿದೆ ಆಗಲ್ಲ ಎನ್ನುತ್ತಾರೆ. ಅದಕ್ಕೆ ಗಿಲ್ಲಿ.. ಯಾಕೆ ಹಾರೆ ತಗೊಂಡು ಅಗಿಯಕ್ಕೆ ಹೋಗಿದ್ರಾ, ಈಗ ಮಾಡಲೇಬೇಕು ಎಂದು ಆರ್ಡರ್ ಮಾಡುತ್ತಾನೆ. ರೊಚ್ಚಿಗೆದ್ದ ಅಶ್ವಿನಿ, ನಿಧಾನಕ್ಕೆ ಮಾತಾಡೋ.. ಕ್ಯಾಪ್ಟನ್ ಆದ ಮೇಲೆ ನಿನಗೇನು ಎರಡು ಕೊಂಬು ಬಂದಿರುತ್ತಾ ಎಂದು ಕೇಳುತ್ತಾರೆ. ಅದಕ್ಕೆ ಗಿಲ್ಲಿ ಮೊದಲು ನೀನ್ ಕ್ಯಾಪ್ಟನ್ ಆಗಿ ತೋರ್ಸು.. ಎಂದು ಏಕವಚನದಲ್ಲಿ ಮಾತಾಡುತ್ತಾನೆ.
ಅದಕ್ಕೆ ಅಶ್ವಿನಿ.. ನೀನು, ತಾನು ಅಂತ ಮಾತಾಡ್ಬೇಡ.. ಎನ್ನುತ್ತಾರೆ. ಅದಕ್ಕೆ ಗಿಲ್ಲಿ ನೀನು ಕೆಲಸ ಮಾಡಿಲ್ಲ ಅಂದ್ರೆ ನಾನು ಹೀಗೆ ಮಾತಾಡೋದು ಎಂದು ಇಬ್ಬರು ವಾಗ್ಯುದ್ಧಕ್ಕೆ ಇಳಿದಿದ್ದಾರೆ.ಇದನ್ನೂ ಓದಿ: BBK 12: ಬಿಗ್‌ಬಾಸ್ ಮನೆಯಿಂದ ಮಾಳು ಔಟ್ – ಸ್ಪಂದನಾ ಸೇಫ್!

