ಯಾದಗಿರಿ: ಮಾಜಿಯಾಗಿದ್ದರು ತಾನೇ ಎಸ್‍ಡಿಎಂಸಿ ಹಾಲಿ ಅಧ್ಯಕ್ಷನೆಂದು ಯಾವುದೇ ಅನುಮತಿ ಇಲ್ಲದೇ ಶಾಲೆಯ ಅಡುಗೆ ಕೋಣೆಯನ್ನು ಜೆಸಿಬಿ ಮೂಲಕ ನೆಲಸಮ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ: ಭಕ್ತರಿಗೆ ಘಾಸಿಯಾಗಿದೆ, ಸರಿದೂಗಿಸುವ ಪ್ರಯತ್ನ ಮಾಡುತ್ತೇನೆ: ಬೊಮ್ಮಾಯಿ
Advertisement
ಗುರುಮಠಕಲ್ ತಾಲೂಕಿನ ಪುಟಪಾಕ್ ತಾಂಡಾದಲ್ಲಿ ಈ ಘಟನೆ ಜರುಗಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯನ್ನು ಏಕಾಏಕಿ ಯಾರಿಗೂ ಮಾಹಿತಿ ನೀಡದೇ ಎಸ್‍ಡಿಎಂಎಸಿ ಮಾಜಿ ಅಧ್ಯಕ್ಷ ಕಿಶಾನ್ ರಾಠೋಡ ನೆಲಸಮ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ
Advertisement
Advertisement
ಶಿಕ್ಷಣ ಇಲಾಖೆಯು ಅಡುಗೆ ಕೋಣೆ ನಿರ್ಮಾಣ ಮಾಡಲು 4 ಲಕ್ಷ ರೂ. ಅನುದಾನ ಮಂಜೂರು ಮಾಡಿತ್ತು, ಆದರೆ ಹಳೇ ಅಡುಗೆ ಕೋಣೆಯು 2009ರ ಸಾಲಿನಲ್ಲಿ ನಿರ್ಮಾಣ ಮಾಡಲಾಗಿದ್ದು, ಕಟ್ಟಡ ಸುಸಜ್ಜಿತವಾಗಿದ್ದ ಹಿನ್ನೆಲೆ ತಾಲೂಕು ಪಂಚಾಯತಿ ಇಂಜಿನಿಯರ್ ಅಧಿಕಾರಿಯವರು ಹಳೆಯ ಅಡುಗೆ ಕೋಣೆ ತೆರವು ಮಾಡಲು ಯಾವುದೇ ಅನುಮತಿ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಕಿಶಾನ್ ರಾಠೋಡ ಅಡುಗೆ ಕೋಣೆ ಡೆಮಾಲಿಷ್ ಮಾಡಲು ಯಾವುದೇ ಅನುಮತಿ ನೀಡದಿದ್ದರು, ಜೆಸಿಬಿ ಮೂಲಕ ಅಡುಗೆ ಕೋಣೆ ಡೆಮಾಲಿಷ್ ಮಾಡಿ ದರ್ಪ ಮೆರೆದಿದ್ದಾರೆ. ಅಡುಗೆ ಕೋಣೆ ಡೆಮಾಲಿಷ್ ಮಾಡಿದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement