ಸಿದ್ದಗಂಗಾ ಮಠದ ಅಡುಗೆಮನೆಯ ಒಲೆಯ ಬೆಂಕಿ ಒಂದು ದಿನವೂ ಆರಿಲ್ಲ. ಅದು ಎಂದಿಗೂ ಆರಿಲ್ಲ. ಆರುವುದು ಇಲ್ಲ. ಯಾಕೆಂದ್ದರೆ ಅದು ಬರಿಯ ಒಣಸೌದೆಯ ಉರಿಯಲ್ಲ, ಮಹಾ ತಪಸ್ವಿಗಳ ಸತ್ಸಂಕಲ್ಪದ ನಿತ್ಯ ಜ್ಯೋತಿ.
ಸಿದ್ದಗಂಗಾ ಮಠದ ದಾಸೋಹ ಶ್ರೀ ಅಟವಿ ಸ್ವಾಮಿಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ಶಿವಕುಮಾರ ಸ್ವಾಮೀಜಿಗಳ ಕಾಲಕ್ಕೆ ದಾಸೋಹ ಸೇವೆ ಲೋಕಸೋಜಿಗದ ಮಹಾಮನೆಯಾಗಿ ಬದಲಾಗಿದೆ. ದಾಸೋಹದ ಅಡಿಗೆಯ ಮನೆಯ ಒಲೆಯ ಉಜ್ವಲವಾಗಿ ಉರಿಯುತ್ತಿದೆ ಹಸಿದ ಹೊಟ್ಟೆಯ ತಣಿಸಲು. ಪವಾಡ ಎಂದರೆನು ಅಂದ್ರೆ ಸಿದ್ಧಗಂಗಾ ಮಠದ ದಾಸೋಹ ದೃಶ್ಯವನ್ನು ತೋರಿಸಿಬಿಡುವಷ್ಟು ಮಟ್ಟಿಗೆ ಇದೆ. ಅನ್ನದೇವರ ಬಿಟ್ಟು ಇನ್ನು ದೇವರಿಲ್ಲ ಅನ್ನುವ ಅನುಭವವಾಣಿಯ ಸತ್ಯವನ್ನು ಕಂಡುಕೊಂಡ ಶ್ರೀಗಳು ದಾಸೋಹಸೇವೆಯನ್ನು ದೇವರ ಸೇವೆ ಅಂತಾ ಭಾವಿಸಿದ್ರು.
Advertisement
Advertisement
ಪ್ರತಿ ನಿತ್ಯ ದಾಸೋಹಕ್ಕೆ (ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ) 40 ಕ್ವಿಂಟಾಲ್ ಅಕ್ಕಿ, 20 ಕ್ವಿಂಟಾಲ್ ರಾಗಿ, ಸುಮಾರು 10 ಕ್ವಿಂಟಾಲ್ ಕಾಳು ಬೇಳೆ, ಇವುಗಳ ಪ್ರಮಾಣಕ್ಕೆ ಅನುಗುಣವಾಗಿ ಸಾಂಬಾರುಪುಡಿ, ತೆಂಗಿನಕಾಯಿ, ಈರುಳ್ಳಿ, ಎಣ್ಣೆ ಹಾಲು, ಬೆಲ್ಲ ಸಕ್ಕರೆ, ಹೀಗೆ ನೂರಾರು ಕೆಜಿ ಲೆಕ್ಕದಲ್ಲಿ ಪದಾರ್ಥಗಳು ಬೇಕಾಗುತ್ತದೆ. ಇದನ್ನೂ ಓದಿ: ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ದೇವರು!
Advertisement
Advertisement
ಮಠದ ದಾಸೋಹ ಕೇಂದ್ರ ಅಕ್ಷಯ ಪಾತ್ರೆಯಾಗಿ ಸೋಜಿಗವಾಗಿ ಬದಲಾಗಿದೆ. ಆದ್ರೆ ಆರಂಭದಲ್ಲಿ ಸಾಕಷ್ಟು ಕಷ್ಟಪಟ್ಟು ಸ್ವಾಮೀಜಿ ದಾಸೋಹ ಕೇಂದ್ರದ ಅಭಿವೃದ್ಧಿಗೆ ಕಟಿಬದ್ಧರಾಗಿ ನಿಂತಿದ್ದಾರೆ. ಸಿದ್ದಗಂಗಾದ ಮಠದಲ್ಲಿ ನಿತ್ಯ ಎಂಟುಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಇಲ್ಲಿ ನಿತ್ಯ ದಾಸೋಹ, ಜೊತೆಗೆ ಯಾತ್ರಿಕರಿಗೂ ಅನ್ನದಾನ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು
ಸಿದ್ದಗಂಗಾ ಮಠದ ದಾಸೋಹದ ಮನೆಗೆ ಭಕ್ತರು ಸ್ವಯಂ ಇಚ್ಛೆಯಿಂದ ಬಂದು ತಮ್ಮ ಪಾಲಿನ ಅಳಿಲು ಸೇವೆ ಸಲ್ಲಿಸುವುದು ನಿಜಕ್ಕೂ ಊಹೆಗೂ ನಿಲುಕದ ಸೇವೆ. ಬಡರೈತರು ಸಹ ತಾವು ಬೆಳೆದಿದ್ದರಲ್ಲಿ ಮೊದಲ ಪಾಲು ದಾಸೋಹದ ಕೊಪ್ಪರಿಗಾಗಿ ಮೀಸಲಿಡುತ್ತಾರೆ. ಕಾಣಿಕೆಯಂತೆ ಸಮರ್ಪಿಸುತ್ತಾರೆ. ಶ್ರೀಮಠದ ಹಿಂದಿರುವ ಕಟ್ಟಿಗೆ ರಾಶಿ ತಾನು ಉರಿದು ಸಹಸ್ರಾರು ಮಕ್ಕಳಿಗೆ ಪ್ರಸಾದ ಅಣಿಮಾಡಿ ಪ್ರಸನ್ನತೆ ನೀಡುತ್ತದೆ. ಸಾಮೂಹಿಕ ಭೋಜನ ಅನ್ನುವುದೇ ಒಂದು ಭಾವಪೂರ್ಣ ಸೇತುವೆ.
https://www.youtube.com/watch?v=2lK_EgaS96U
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv