ಕಿಚ್ಚ ಸುದೀಪ್ ಅವರ ಸಹೋದರಿ ಮಗ ಸಂಚಿತ್ ಸಂಜೀವ್ (Sanchit Sanjeev) ಅವರ ಹೊಸ ಸಿನಿಮಾದ ಟೈಟಲ್ (Title) ಲಾಂಚ್ ಕಾರ್ಯಕ್ರಮ ನಿನ್ನೆಯಷ್ಟೇ ನಡೆದಿದೆ. ‘ಜಿಮ್ಮಿ’ ಎನ್ನುವ ಟೈಟಲ್ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಷ್ಟಕ್ಕೂ ಜಿಮ್ಮಿ ಎಂದರೇನು? ಇಂಥದ್ದೊಂದು ಟೈಟಲ್ ಇಡುವುದಕ್ಕೆ ಕಾರಣವೇನು? ಯಾರು ಈ ಟೈಟಲ್ ಅನ್ನು ಸಜೆಸ್ಟ್ ಮಾಡಿದ್ದು ಎನ್ನುವ ಕುರಿತು ಕುತೂಹಲ ಮೂಡಿತ್ತು. ಅದೆಲ್ಲದಕ್ಕೂ ಉತ್ತರ ನೀಡಿದ್ದಾರೆ ಕಿಚ್ಚ ಸುದೀಪ್.
Advertisement
ಸಂಚಿತ್ ಸಂಜೀವ್ ನಿರ್ದೇಶಿಸಿ, ನಟಿಸುತ್ತಿರುವ ಜಿಮ್ಮಿ ಚಿತ್ರದ ಟೈಟಲ್ ಅನ್ನು ಕೊಟ್ಟಿದ್ದು ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ (Anoop Bhandari) ಎನ್ನುವುದನ್ನು ಸ್ವತಃ ಸುದೀಪ್ ಅವರೇ ಬಹಿರಂಗ ಪಡಿಸಿದ್ದಾರೆ. ಕಥೆಗೂ, ಚಿತ್ರದ ಹೀರೋಗೂ ಮತ್ತು ಜಿಮ್ಮಿ ಟೈಟಲ್ ಗೂ ಒಂದಕ್ಕೊಂದು ಸಂಬಂಧವಿದೆಯಂತೆ. ಅದೇನು ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್
Advertisement
Advertisement
ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಅಳಿಯನಿಗೆ ನಟ ಕಿಚ್ಚ ಸುದೀಪ್ (Kichcha Sudeep) ಕಿವಿಮಾತು ಹೇಳಿದ್ದಾರೆ. ಹಿರಿಯರು ನಡೆಸಿಕೊಂಡು ಬಂದ ದೊಡ್ಡ ಕೋಟೆ ಸ್ಯಾಂಡಲ್ವುಡ್ (Sandalwood) ಅದಕ್ಕೆ ನೀವು ಕಾಲಿಡುತ್ತಿದ್ದೀರಿ. ಬೆಳೆಸಲಾಗದಿದ್ರೂ ಕಾಪಾಡಿಕೊಂಡು ಹೋಗಿ ಎಂದು ಅಳಿಯ ಸಂಚಿತ್ಗೆ ಹೇಳಿದ್ದಾರೆ.
Advertisement
ಸುದೀಪ್ ಸಹೋದರಿಯ ಮಗ ಸಂಚಿತ್ ಸಂಜೀವ್ ‘ಜಿಮ್ಮಿ’ (Jimmy) ಯಾಗಿ ಚಂದನವನದ ಅಡ್ಡಾಗೆ ಎಂಟ್ರಿ ಕೊಡುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸಂಜೆ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ವೇಳೆ ಮಾತನಾಡಿದ ಸುದೀಪ್, ಚಿತ್ರರಂಗದ ನಿಮ್ಮ ಸಮಕಾಲೀನ ನಟರೆಲ್ಲರ ಜೊತೆ ಚೆನ್ನಾಗಿರಿ, ಸ್ನೇಹ ಬೆಳೆಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ.
ಜಿಮ್ಮಿ ಚಿತ್ರದಲ್ಲಿ ಪುತ್ರಿ ಸಾನ್ವಿ ಹಿನ್ನೆಲೆ ಗಾಯನ ಮಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಿಚ್ಚ, ಮಗಳು ಹಾಡಿದ್ದು ಖುಷಿಯಾಯ್ತು. ನನ್ನ ಮಗಳು ಚೆನ್ನಾಗಿ ಹಾಡ್ತಾಳೆ ಅಂತ ಗೊತ್ತಿತ್ತು. ಇಷ್ಟು ಚೆನ್ನಾಗಿ ಅಂತ ಇವತ್ತೇ ಗೊತ್ತಾಗಿದ್ದು. ವಾಸುಕಿ ವೈಭವ್ ಧ್ವನಿಯನ್ನ ಇನ್ನೂ ತಿದ್ದಿ ಇಂಪಾಗಿ ಹಾಡುವಂತಾಯ್ತು ಎಂದರು.
ಇದೇ ವೇಳೆ ನಟ ಸಂಚಿತ್ ಸಂಜೀವ್ ಮಾತನಾಡಿ, ಮಾತು ಬರ್ತಿಲ್ಲ. ಒಂದ್ಕಡೆ ಭಯ, ನರ್ವಸ್ ಇದೆ. ಹಾಗೆಯೇ ಎಕ್ಸೈಟ್ಮೆಂಟ್ ಕೂಡ ಇದೆ. ಒಂದು ಮಾತು ಹೇಳಬೇಕಂದರೆ ನಿಮ್ಮ ನಂಬಿಕೆ ಉಳಿಸಿಕೊಳ್ತೀನಿ. ಸುದೀಪ್ ಮಾಮರಿಂದ ಬಹಳ ಕಲಿತಿದ್ದೇನೆ. ಅವರ ಶ್ರಮ, ಪ್ರೀತಿ ನೋಡಿದ್ದೀನಿ. ಏನೇ ಮಾಡಿದ್ರೂ 100% ಎಫರ್ಟ್ ಹಾಕಬೇಕು ಅನ್ನೋದನ್ನು ಮಾಮ ಹೇಳುತ್ತಿರುತ್ತಾರೆ. ಜಿಮ್ಮಿ ಯಾರಿಗೂ ಇಲ್ಲ ಕಮ್ಮಿ ಎಂದು ಹೇಳಿದರು.