ಬರೋಬ್ಬರಿ 16 ವರ್ಷಗಳ ನಂತರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ನಿರಾಳದ ನಿಟ್ಟುಸಿರಿಟ್ಟಿದ್ದಾರೆ. ಕಿಸ್ಸಿಂಗ್ (Kissing) ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಸೆಷನ್ ಕೋರ್ಟ್ ಅರ್ಜಿ ವಜಾ ಮಾಡಿದ್ದು, ಶಿಲ್ಪಾಗೆ ರಿಲೀಫ್ ಸಿಕ್ಕಿದೆ. ಈ ಮೂಲಕ 2007ರಲ್ಲಿ ನಡೆದ ಘಟನೆ ತಾರ್ಕಿಕ ಅಂತ್ಯಕಂಡಿದೆ.
Advertisement
ರಾಜಸ್ಥಾನದಲ್ಲಿ (Rajasthan) 2007ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿಲ್ಪಾ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ಹಾಲಿವುಡ್ ನಟ ರಿಚರ್ಡ್ ಗಿಯರ್ (Richard Gere) ಬಹಿರಂಗವಾಗಿಯೇ ವೇದಿಕೆಯ ಮೇಲೆ ಶಿಲ್ಪಾ ಶೆಟ್ಟಿಗೆ ಮುತ್ತಿಟ್ಟಿದ್ದ. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಭಾರೀ ಗದ್ದಲ ಸೃಷ್ಟಿ ಮಾಡಿತ್ತು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಶ್ಲೀಲತೆ ಮೆರೆದಿದ್ದಾರೆ ಎನ್ನುವ ಕಾರಣಕ್ಕಾಗಿ ಶಿಲ್ಪಾ ಶೆಟ್ಟಿ ಮೇಲೆ ದೂರು (Case) ದಾಖಲಾಗಿತ್ತು. ಇದನ್ನೂ ಓದಿ:ಇಬ್ರಾಹಿಂ ಅಲಿ ಖಾನ್ ಜೊತೆಗಿನ ಡೇಟಿಂಗ್ ಸುದ್ದಿ ನಿಜಾನಾ? ಪಾಲಕ್ ತಿವಾರಿ ಸ್ಪಷ್ಟನೆ
Advertisement
Advertisement
ಶಿಲ್ಪಾ ಶೆಟ್ಟಿ ಕೆನ್ನೆಗೆ ಮುತ್ತಿಡುವ ದೃಶ್ಯ ಮತ್ತು ಫೋಟೋಗಳು ಕೋಲಾಹಲ ಸೃಷ್ಟಿಯಾಗಿದ್ದರಿಂದ ರಾಜಸ್ಥಾನದಲ್ಲಿ ಎರಡು ಹಾಗೂ ಗಜಿಯಾಬಾದ್ ನಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಮುಂಬೈ ಕೋರ್ಟಿಗೆ ವರ್ಗಾಯಿಸಲು 2017ರಲ್ಲಿ ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಈ ಎಲ್ಲ ಪ್ರಕರಣಗಳನ್ನು ಕೈ ಬಿಡುವಂತೆ ಶಿಲ್ಪಾ ಶೆಟ್ಟಿ ಮನವಿ ಮಾಡಿಕೊಂಡಿದ್ದರು.
Advertisement
ಕಳೆದ ವರ್ಷವಷ್ಟೇ ಈ ಪ್ರಕರಣವನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೇತಕಿ ಚವಾಣ್ ಅವರು ರದ್ದು ಮಾಡಿದ್ದರು. ಇದನ್ನು ಸೆಷನ್ ಕೋರ್ಟ್ ನಲ್ಲಿ ಮತ್ತೆ ಪ್ರಶ್ನೆ ಮಾಡಲಾಗಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.