ಚಂಡೀಗಢ: ಬಿಜೆಪಿ ನಾಯಕಿ, ಸಂಸದೆ ಕಿರಣ್ ಖೇರ್ ಮತದಾನದ ದಿನ ಮತಗಟ್ಟೆಗೆ ಆಗಮಿಸುವ ವೇಳೆ ಎಡವಿ ಬಿದ್ದಿದ್ದಾರೆ.
ಚಂಡೀಗಢ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕಿರಣ್ ಖೇರ್ ಭಾನುವಾರ ತಮ್ಮ ಮತ ಚಲಾಯಿಸಲು ಮತಗಟ್ಟೆ ಬಳಿ ಬಂದಿದ್ದರು. ಇದ್ದಕ್ಕಿದ್ದಂತೆ ಕಿರಣ್ ಖೇರ್ ಎಡವಿದರು. ಸಂಸದೆ ಬೀಳುತ್ತಿದ್ದಂತೆ ಬೆಂಬಲಿಗರು ಮೇಲೆತ್ತಿದರು. ಸ್ವಲ್ಪ ಸಮಯದ ಬಳಿಕ ಸುಧಾರಿಸಿಕೊಂಡ ಕಿರಣ್ ಖೇರ್, ಈ ದೃಶ್ಯಗಳನ್ನು ಸೆರೆ ಹಿಡಿಯಬೇಡಿ ಎಂದು ಹೇಳಿ ಮತಗಟ್ಟೆಯತ್ತ ಹೆಜ್ಜೆ ಹಾಕಿದರು.
ಕಿರಣ್ ಖೇರ್ ಎಡವಿ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಫಲಿತಾಂಶಕ್ಕೂ ಮುನ್ನವೇ ಬಿದ್ದ ಸಂಸದೆ ಎಂದು ಹೇಳಿ ಕಾಲೆಳೆಯುತ್ತಿದ್ದಾರೆ.
2014ರ ಚುನಾವಣೆಯಲ್ಲಿ ಚಂಡೀಗಢ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಿರಣ್ ಖೇರ್ ಗೆಲುವು ದಾಖಲಿಸಿದ್ದರು. ಈ ಬಾರಿ ಮತ್ತೊಮ್ಮೆ ಕಣದಲ್ಲಿದ್ದು, ಕಾಂಗ್ರೆಸ್‍ನಿಂದ ಪವನ್ ಬನ್ಸಾಲ್ ಎದುರಾಳಿಯಾಗಿದ್ದಾರೆ. ಲೋಕಸಮರದ ಚುನಾವಣೋತ್ತರ ಸಮೀಕ್ಷೆ ಹೊರ ಬಂದಿದ್ದು 10 ರಲ್ಲಿ 9 ಸರ್ವೇಗಳು ಕೇಂದ್ರದಲ್ಲಿ ಎನ್‍ಡಿಎ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿವೆ ಎಂದು ಹೇಳಿವೆ.
BJP sarkar to Result se phle hi gir Gyi..@abpnewstv @dhruv_rathee @akashbanerjee #KirronKher pic.twitter.com/hah20gEaQ1
— Rahul Dhiman (@enggdhiman) May 19, 2019