ನಿಮ್ಮ ದೇಹ ನಿಮ್ಮ ಆಸ್ತಿ ಎಂದು ದೇಹ ಪ್ರದರ್ಶಿಸಿದ ಸಂಯುಕ್ತಾ ಹೆಗ್ಡೆ

Public TV
2 Min Read
samyuktha hegde

ಸ್ಯಾಂಡಲ್‌ವುಡ್‌ನ ‘ಕಿರಿಕ್ ಪಾರ್ಟಿ’ಯ (Kirik Party) ಕಿರಿಕ್ ಸುಂದರಿ ಸಂಯುಕ್ತಾ ಹೆಗ್ಡೆ (Samyuktha Hegde) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಟಾಪ್‌ಲೆಸ್ ವೀಡಿಯೋವೊಂದನ್ನ ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ನಿಮ್ಮ ದೇಹ, ನಿಮ್ಮ ಆಸ್ತಿ ಎಂದು ನಟಿ ವೀಡಿಯೋದಲ್ಲಿ ಪಾಠ ಮಾಡಿದ್ದಾರೆ.

samyuktha hegde

‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿಗೆ (Rakshit Shetty) ನಾಯಕಿಯಾಗುವ ಮೂಲಕ ಬಣ್ಣದ ಬದುಕಿಗೆ ಲಗ್ಗೆಯಿಟ್ಟರು. ರಕ್ಷಿತ್, ರಶ್ಮಿಕಾ ಜೊತೆ ಸಂಯುಕ್ತಾ ಕೂಡ ಮೊದಲ ಚಿತ್ರದಲ್ಲೇ ಗಮನ ಸೆಳೆದರು. ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾದಲ್ಲೂ ನಟಿ ಮಿಂಚಿದ್ರು. ಜಯಂರವಿ, ಪ್ರಭುದೇವ, ಅಂತಹ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡರು. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ

samyuktha hegde

ಕೆಲ ತಿಂಗಳುಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣದಲ್ಲಿ ಸಂಯುಕ್ತಾ ಕಾಲಿಗೆ ಪೆಟ್ಟಾಗಿತ್ತು. ಬಳಿಕ ಸೂಕ್ತ ಚಿಕಿತ್ಸೆಯ ನಂತರ ನಟಿ ಚೇತರಿಸಿಕೊಂಡಿದ್ದಾರೆ. ೫ ತಿಂಗಳ ಬೆಡ್ ರೆಸ್ಟ್ ನಂತರ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಕಿರಿಕ್ ಬೆಡಗಿ ಸಂಯುಕ್ತಾ, ದೇಹ ಪ್ರದರ್ಶಿಸಿರುವ ವೀಡಿಯೋ ಶೇರ್ ಮಾಡುವ ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೆಟ್ ಮಾಡಿದ್ದಾರೆ. ನಟಿ ಟಾಪ್‌ಲೆಸ್ ಆಗಿರುವ ವೀಡಿಯೋ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.

samyukta hegde

ನಿಮ್ಮ ದೇಹ, ನಿಮ್ಮ ಆಸ್ತಿ. ನೀವು ಯಾವುದೇ ಸಾಮಾಜಿಕ ಮಾನದಂಡಗಳ ಮಾಲಿಕತ್ವ ಹೊಂದಿಲ್ಲ. ಮಹಿಳೆಯರು ಫ್ರಿಡಮ್, ಆತ್ಮವಿಶ್ವಾಸಕ್ಕೆ ಅವಕಾಶವಿದೆ. ಶಕ್ತಿ ಎನ್ನುವುದು ಪುರುಷ ಮತ್ತು ಸ್ತ್ರಿ ಎನ್ನುವುದು ಅಲ್ಲ ಎಂದು ಸಂಯುಕ್ತಾ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ನಟಿ ಸಂಯುಕ್ತಾ ಹೆಗ್ಡೆ ಕೈಯಲ್ಲಿ ಹೇಳಿಕೊಳ್ಳುವಂತಹ ಸಿನಿಮಾಗಳೇನು ಇಲ್ಲ. ‘ಕ್ರೀಮ್’ (Cream) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಸಂಯುಕ್ತಾ ಒಂದೇ ಸಿನಿಮಾದಿಂದ ಲಾಂಚ್ ಆದ್ರೂ ಕೂಡ ರಶ್ಮಿಕಾ ಅವರಿಗೆ ಸಿಕ್ಕಂತಹ ಯಶಸ್ಸು ಸಂಯುಕ್ತಾಗೆ ಸಿಗಲಿಲ್ಲ. ಒಳ್ಳೆಯ ಕಥೆಗಾಗಿ ನಟಿ ಎದುರು ನೋಡ್ತಿದ್ದಾರೆ.

Share This Article