ಬಳ್ಳಾರಿ: ಇಂದಿನ ನಮ್ಮ ಪಬ್ಲಿಕ್ ಹೀರೋ ತುಂಬಾನೆ ಸ್ಪೆಷಲ್. ಕಾರಣ ನಮ್ಮ ಪಬ್ಲಿಕ್ ಹೀರೋಗಳಿಗೆ ಮಾತು ಬರಲ್ಲ, ಕಿವಿಯೂ ಸಹ ಕೇಳಲ್ಲ. ಆದ್ರೆ, ಅವರಿಬ್ಬರು ಒಬ್ಬರಿಗೊಬ್ಬರು ಮೌನವಾಗಿಯೇ ಕೆಲಸ ಮಾಡ್ತಾರೆ. ಅವರ ಕೃಷಿ ಕ್ರಾಂತಿ ಕಂಡವರು ಮಾತ್ರ ನಿಬ್ಬೆರಗಾಗುತ್ತಾರೆ.
ಹೌದು. ಕೃಷಿ ಮಾಡಿ ಸೈ ಅನ್ನಿಸಿಕೊಂಡ ಬಳ್ಳಾರಿಯ ಮೂಕ ಸೋದರರ ಸ್ಟೋರಿ. ಜಿಲ್ಲೆಯ ನಿಂಬಳಗೇರಿಯ ಕಿರಣ್ ಮತ್ತು ಮಂಜುನಾಥ್‍ಗೆ ಹುಟ್ಟಿನಿಂದಲೇ ಮಾತು ಬಾರದು. ಕಿವಿಯೂ ಕೇಳಿಸದು. ಆದ್ರೂ ಈ ಸೋದರರು ಮಾತು ಬರುವವರನ್ನು ಬೆರಗಾಗುವಂತೆ ರೇಷ್ಮೆ ಕೃಷಿ ಮಾಡಿದ್ದಾರೆ.
Advertisement
ಒಬ್ಬರಿಗೊಬ್ಬರು ಕೈ ಸನ್ನೆ ಬಾಯಿ ಸನ್ನೆಯಿಂದ ಮಾತನಾಡಿಕೊಳ್ಳುತ್ತಾ ರೇಷ್ಮೆ ಬೆಳೆಯೋ ಈ ಮೂಕ ಸೋದರರು ಪ್ರತಿ ತಿಂಗಳು ಒಂದೂವರೆ ಲಕ್ಷದಿಂದ 2 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ರೇಷ್ಮೆ ಗೂಡುಗಳನ್ನು ರಾಮನಗರಕ್ಕೆ ತಂದೆ ಜೊತೆ ತೆಗೆದುಕೊಂಡು ಹೋಗಿ ಮಾರಾಟ ಸಹ ಮಾಡ್ತಾರೆ.
Advertisement
ಕಿರಣ್ ಎಸ್‍ಎಸ್‍ಎಲ್‍ಸಿ ಓದಿದ್ರೆ, ಮಂಜುನಾಥ ಓದಿರೋದು 6ನೇ ಕ್ಲಾಸ್ ಅಷ್ಟೇ. ಇಬ್ಬರೂ ದಿನಪ್ರತಿಕೆಗಳಲ್ಲಿ ಬರೋ ಕೃಷಿ ಪುರವಣಿಗಳನ್ನು ತಪ್ಪದೇ ಓದಿ, ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಸದ್ಯ ಈ ಮೂಕ ಹಕ್ಕಿಗಳ ಮೌನ ಕೃಷಿ ಕ್ರಾಂತಿ ಸಹ ಎಲ್ಲರಿಗೂ ಮಾದರಿಯಾಗುವಂತಿದೆ.
Advertisement
https://www.youtube.com/watch?v=eTUyFjXF7TM