ನವದೆಹಲಿ: ದೆಹಲಿ ಹೊಸ ಮದ್ಯ ನೀತಿ ಪ್ರಕರಣದಲ್ಲಿ (Delhi Liquor Policy Case) ಡಿಸಿಎಂ ಮನೀಶ್ ಸಿಸೊಡಿಯಾ ಸೇರಿ ಹಲವು ನಾಯಕರು ಬಂಧನಕ್ಕೊಳಪಟ್ಟಿದ್ದಾರೆ. ಪ್ರಕರಣದ ಕಿಂಗ್‌ಪಿನ್ ಇನ್ನೂ ಹೊರಗಿದ್ದು ಅವರ ಸರದಿಯೂ ಬರಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ವಾಗ್ದಾಳಿ ನಡೆಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ಪರೋಕ್ಷವಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ.
Advertisement
ಛತ್ತೀಸ್‌ಗಢದ ರಾಯ್‌ಪುರದಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, ಭ್ರಷ್ಟಾಚಾರದ ವಿರುದ್ಧ ಭಾರತ ಎನ್ನುವ ಘೋಷಣೆಯ ಮೇಲೆ ಅಧಿಕಾರಕ್ಕೆ ಬಂದವರು ಈಗ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಎಎಪಿಯನ್ನ (AAP) ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: Bigg Boss Kannada 10: ದೊಡ್ಮನೆಗೆ ಜಗ್ಗೇಶ್ ಎಂಟ್ರಿ: ನಟ ಹೇಳಿದ್ದೇನು?
Advertisement
Advertisement
ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿಕೆ ನೋಡಿ ಜನರು ನಗುತ್ತಿದ್ದಾರೆ. ಇದೇ ವ್ಯಕ್ತಿಗಳು ಆರಂಭದಲ್ಲಿ ಭ್ರಷ್ಟಾಚಾರದ ವಿರುದ್ಧ ಭಾರತ ಎಂಬ ಘೋಷಣೆಯನ್ನು ಪ್ರತಿಪಾದಿಸಿದ್ದರು. ಆದರೀಗ ಅದೇ ಭ್ರಷ್ಟ ಅಭ್ಯಾಸಗಳಲ್ಲಿ ಸಿಲುಕಿಕೊಂಡಿದ್ದಾರೆ. ಪಂಜಾಬ್‌ನಲ್ಲಿ, ಆಪ್ ಅಧಿಕಾರಕ್ಕೆ ಬಂದಿತು, ಆದರೆ ಎರಡು ತಿಂಗಳೊಳಗೆ ರಾಜ್ಯದ ಆರೋಗ್ಯ ಸಚಿವರು ಭ್ರಷ್ಟಾಚಾರದ ಕಾರಣದಿಂದ ಕೆಳಗಿಳಿಯಬೇಕಾಯಿತು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಇಸ್ಪೀಟ್ ಅಡ್ಡೆಯ ಮೇಲೆ ದಾಳಿ – 1.78 ಲಕ್ಷ ರೂ. ಜಪ್ತಿ
Advertisement
ಕೇಜ್ರಿವಾಲ್ ಅವರು ತಮ್ಮ ಖ್ಯಾತಿಗೆ ಕಳಂಕ ತಂದಿರುವ ಮದ್ಯದ ಹಗರಣದ ಬಗ್ಗೆ ವಿವರಣೆ ನೀಡಲು ವಿಫಲರಾಗಿದ್ದಾರೆ. ದೆಹಲಿಯ ಉಪಮುಖ್ಯಮಂತ್ರಿ ಮತ್ತು ಇತರರು ಜೈಲುವಾಸದಲ್ಲಿದ್ದಾಗ, ಅದರ ಹಿಂದಿನ ಮಾಸ್ಟರ್ ಮೈಂಡ್ ತಲೆಮರೆಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಮತ್ತು ಮಾಸ್ಟರ್ ಮೈಂಡ್ ಕೂಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಠಾಕೂರ್ ಪರೋಕ್ಷವಾಗಿ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
Web Stories