– ಶಾರೂಖ್ ಪುತ್ರಿ ಸುಹಾನಾ ಅಮ್ಮನ ಪಾತ್ರದಲ್ಲಿ ‘ರಾಣಿʼ
2000ರ ದಶಕದಲ್ಲಿ ಚಲ್ತೇ ಚಲ್ತೇ, ಕುಚ್ ಕುಚ್ ಹೋತಾ ಹೈ, ಕಭಿ ಅಲ್ವಿದಾ ನಾ ಕೆಹನಾ, ಕಭಿ ಖುಷಿ ಕಭಿ ಗಮ್ ಸೇರಿದಂತೆ ಸಾಲುಸಾಲು ಹಿಟ್ ಚಿತ್ರಗಳನ್ನು ಕೊಟ್ಟಿದ್ದ ರಾಣಿ ಮುಖರ್ಜಿ (Rani Mukerji) ಮತ್ತು ಶಾರೂಖ್ ಖಾನ್ (Shah Rukh Khan) ಜೋಡಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ ಶಾರೂಖ್ ಖಾನ್, ಸಿದ್ಧಾರ್ಥ್ ಆನಂದ್ ನಿರ್ದೇಶನದ ʻಕಿಂಗ್ʼ (King) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಣಿ ಮುಖರ್ಜಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ, ಸುಹಾನಾ ಖಾನ್ (Suhana Khan) ಅವರ ತಾಯಿಯ ಪಾತ್ರಕ್ಕೆ ರಾಣಿ ಮುಖರ್ಜಿಯವರನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ಕೇವಲ 5 ದಿನಗಳು ಮಾತ್ರ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್
ʻಕಿಂಗ್ʼ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಜಾಕಿ ಶ್ರಾಫ್, ಜೈದೀಪ್ ಅಹ್ಲಾವತ್, ಅಭಯ್ ವರ್ಮಾ ಮತ್ತು ಅರ್ಷದ್ ವಾರ್ಸಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮೇ 20 ರಿಂದ ಮುಂಬೈನಲ್ಲಿ ಆರಂಭವಾಗಲಿದೆ. ನಂತರ ಯುರೋಪ್‌ನಲ್ಲಿ ಚಿತ್ರೀಕರಣ ನಡೆಯಲಿದೆ. 2026 ರ ಅಕ್ಟೋಬರ್ – ಡಿಸೆಂಬರ್ ನಡುವೆ ಈ ಚಿತ್ರ ರಿಲೀಸ್ ಆಗುವ ನಿರೀಕ್ಷೆಯಿದೆ.
ರಾಣಿ ಮುಖರ್ಜಿ ಪ್ರಸ್ತುತ ಮರ್ದಾನಿ 3 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಶಾರೂಖ್ ಖಾನ್ 2023 ರಲ್ಲಿ ಪಠಾಣ್, ಜವಾನ್ ಮತ್ತು ಡುಂಕಿಯಂತಹ ಮೂರು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದರು. ಇದನ್ನೂ ಓದಿ: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರದ ರಿಲೀಸ್ ಡೇಟ್ ಅನೌನ್ಸ್