ಹುಬ್ಬಳ್ಳಿ: ಮಹಾತಾಯಿಯೊಬ್ಬರು ಮಗನಿಗೆ ಕಿಡ್ನಿ ಕೊಟ್ಟು ತ್ಯಾಗದ ಸಂದೇಶ ಸಾರಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ 22 ವರ್ಷದ, ಯುವಕ ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದರು. ಆದರೆ ಮೊದಮೊದಲು ರೋಗದ ಲಕ್ಷಣ ಕಾಣಿಸಿರಲಿಲ್ಲ ಹೀಗಾಗಿ ಯುವಕ ಆರೋಗ್ಯವಾಗಿರುವಂತೆಯೇ ಕಾಣುತ್ತಿದ್ದ. ಆದರೆ ಏಕಾಏಕಿ ಸೋಂಕು ಉಲ್ಬಣಗೊಂಡ ಹಿನ್ನೆಲೆ ಕಳೆದ 6-7 ತಿಂಗಳಿಂದ ಹುಬ್ಬಳ್ಳಿ ಕಿಮ್ಸ್‍ನಲ್ಲಿ ಡಯಾಲಿಸಸ್ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನೂ ಓದಿ: ರಾಜ್ಯದ ಮೊದಲ ಕಿಡ್ನಿ ಕಸಿಮಾಡಲು ಅನುಮತಿ ಪಡೆದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ
Advertisement
Advertisement
ಯುವಕನ ಕಿಡ್ನಿ ಕೆಲಸ ಮಾಡದ ಹಿನ್ನೆಲೆ ಯುವಕನಿಗೆ ಕಸಿ ಮಾಡುವುದು ಅನಿವಾರ್ಯತೆಯಿತ್ತು. ಆದರೆ ಕಿಡ್ನಿ ದಾನಮಾಡುವವರು ಯಾರೂ ಸಿಗಲಿಲ್ಲ, ಅಲ್ಲದೆ ಯುವಕ ಬಡ ಕುಟುಂಬವನಾಗಿದ್ದು, ಕಿಡ್ನಿ ದಾನ ಪಡೆಯುವಷ್ಟು ಆರ್ಥಿಕ ಶಕ್ತಿಯೂ ಇರಲಿಲ್ಲ. ಹೀಗಾಗಿ ಯುವಕನ ತಾಯಿ ಮುಂದೆ ಬಂದು ತನ್ನ ಮಗನಿಗೆ ಕಿಡ್ನಿ ದಾನ ಮಾಡಿದ್ದಾಳೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬ್ರಾಹ್ಮಣರನ್ನು ಸಿಎಂ ಆಗಿ ನೋಡಲು ಬಯಸುತ್ತೇನೆ: ರಾವ್‍ಸಾಹೇಬ್ ಪಾಟೀಲ್ ದಾನ್ವೆ
Advertisement
Advertisement
ಕಿಮ್ಸ್ ಮೂತ್ರಪಿಂಡಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ್ ಮೊಗೇರ, ಅವರ ನೇತೃತ್ವದ ತಂಡ ಏಪ್ರಿಲ್ 13 ರಂದು ಯಶಸ್ವಿ ಆಪರೇಷನ್ ಮಾಡಿದೆ. ಸದ್ಯ ತಾಯಿ ಮತ್ತು ಮಗ ಇಬ್ಬರು ಸಹ ಆರೋಗ್ಯವಾಗಿದ್ದಾರೆ.