_ ದಾಸನಿಗೆ ಸೆರೆಮನೆಯಲ್ಲಿ ಅರಮನೆವಾಸ
ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ (Darshan) ರೌಡಿಶೀಟರ್ಸ್ ಗಳ ಜೊತೆ ಬಿಂದಾಸ್ ಆಗಿ ಕುಳಿತುಕೊಂಡಿರುವ ಫೋಟೋ, ಸಹ ಕೈದಿಯ ಸ್ನೆಹಿತನ ಜೊತೆ ವೀಡಿಯೋ ಕಾಲ್ ಮುಖಾಂತರ ಮಾತನಾಡುತ್ತಿರುವ ಸ್ರೀನ್ ಶಾಟ್ ಫೋಟೋಗಳು ವೈರಲ್ ಆಗುತ್ತಿರುವುದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ನಟ ದರ್ಶನ್ ಹೊರಗೆ ಯಾವ ರೀತಿ ಬಿಂದಾಸ್ ಜೀವನ ನಡೆಸುತ್ತಿದ್ದರೋ, ಅದೇ ರೀತಿ ಜೈಲಿನಲ್ಲಿಯೂ ದರ್ಶನ್ ಇರುವಂತೆ ಕಾಣಿಸುತ್ತಿದೆ. ದರ್ಶನ್‌ಗೆ ಬೇಕಿರೋ ವ್ಯವಸ್ಥೆಗಳೆಲ್ಲಾ ಮಾಡುತ್ತಿರುವ ಶಂಕೆಗೆ ಜೈಲಿಂದ ಸೋರಿಕೆ ಆಗಿರುವ ಫೋಟೋಗಳು ಕಾರಣವಾಗಿದೆ. ದಾಸನಿಗೆ ಸೆರೆಮನೆಯಲ್ಲಿ ಅರಮನೆವಾಸ ಕಲ್ಪಿಸಿಕೊಟ್ಟವರು ಯಾರು ಎಂಬುದರ ಹಿಂದೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ದರ್ಶನ್ ಜೊತೆ ಕುಳಿತ ನಟೋರಿಯಸ್ ರೌಡಿಶೀಟರ್‌ಗಳು ಯಾರು?
ಜೈಲು ನಿಯಮ ಏನು ಹೇಳುತ್ತದೆ?
* ವಿಚಾರಣಾಧೀನ ಕೈದಿಗೆ ಅಗತ್ಯ ವಸ್ತು ಹೊರತುಪಡಿಸಿ ಉಳಿದ ಸೌಲಭ್ಯ ನೀಡುವಂತಿಲ್ಲ.
* ಕೋರ್ಟ್ ಅನುಮತಿಯಿಲ್ಲದೇ ಮನೆಯೂಟ ಸೇರಿ ಇತರೆ ಸೌಲಭ್ಯಗಳಿಗೆ ಅವಕಾಶ ಇಲ್ಲ.
* ಜೈಲಿನ ಲಾನ್‌ನಲ್ಲಿ ಚೇರ್-ಟೀಪಾಯಿ ಹಾಕಿಕೊಂಡು ಕುಳಿತು ಮಾತನಾಡುವ ವ್ಯವಸ್ಥೆ ಮಾಡುವಂತಿಲ್ಲ.
* ಜೈಲಿನ ಎಲ್ಲೆಂದರಲ್ಲಿ ಕುಳಿತು ಸಿಗರೇಟ್, ಬೀಡಿ ಸೇವನೆ ಮಾಡುವಂತಿಲ್ಲ.
* ಜೈಲಿಗೆ ಸಿಗರೇಟು, ಮಾದಕ ವಸ್ತು, ಮದ್ಯ ಸರಬರಾಜು, ಸೇವನೆ ಶಿಕ್ಷಾರ್ಹ ಅಪರಾಧ.
* ವಿಚಾರಣಾಧೀನ ಕೈದಿ ವಿಐಪಿ ಸೆಲ್‌ನಲ್ಲಿದ್ದರೂ ಸ್ಪೆಷಲ್ ಸೆಕ್ಯೂರಿಟಿ ಕೊಡುವಂತಿಲ್ಲ. ಇದನ್ನೂ ಓದಿ: ಇಂದು ಮಂಡ್ಯದಲ್ಲಿ ಹೆಚ್‌ಡಿಕೆ ಮೊದಲ ದಿಶಾ ಸಭೆ
ದರ್ಶನ್ ಒಂದು ಕೈಯಲ್ಲಿ ಟೀ ಕಪ್ ಇನ್ನೋದು ಕೈಯಲ್ಲಿ ಸಿಗರೇಟು ಹಿಡಿದು, ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಹಾಗೂ ಸಹ ಆರೋಪಿ ಆಪ್ತ ನಾಗರಾಜ್ ಜೊತೆ ಕುರ್ಚಿಯಲ್ಲಿ ಆರಾಮವಾಗಿ ಕುಳಿತುಕೊಂಡು ಯಾವುದೇ ತಪ್ಪಿನ ಅರಿವಿಲ್ಲದಂತೆ ರಾಜವೈಭೋಗ ಅನುಭವಿಸುತ್ತಿರುವ ಫೋಟೋ, ವೀಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಬೆನ್ನಲ್ಲೇ ಆತಿಥ್ಯ ಕೊಟ್ಟ ಅಧಿಕಾರಿಗಳಿಗೆ ನಡುಕ ಉಂಟಾಗಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ – ಇಬ್ಬರು ಐಜಿಪಿಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆ