ಬೆಂಗಳೂರು: ಸೌಂದರ್ಯವನ್ನು ಪಡೆಯುವುದಕ್ಕೆ ಮಹಿಳೆಯರು ನಾನಾ ಕ್ರೀಂಗಳನ್ನು ಬಳಸುತ್ತಾರೆ. ಆದರೆ ಈ ಸೌಂದರ್ಯವರ್ಧಕಗಳನ್ನು ಖರೀದಿಸುವ ಮುನ್ನ ಹುಷಾರಾಗಿರಿ. ಏಕೆಂದರೆ ನೀವು ಬಳಸುವ ಕಾಸ್ಮೆಟಿಕ್ಸ್ ನಕಲಿ ಆಗಿರಬಹುದು. ನಿಮ್ಮ ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಡುಪ್ಲಿಕೇಟ್/ ಕಿಲ್ಲರ್ ಕಾಸ್ಮೆಟಿಕ್ಸ್‌ಗಳ ಮಾರಾಟ ಬಯಲಾಗಿದೆ.
ಚಿಕ್ಕಪೇಟೆ:
ಬೆಂಗಳೂರಿಗರ ಫೆವರೆಂಟ್ ಶಾಪಿಂಗ್ ಅಡ್ಡ ಎಂದರೆ ಅದು ಚಿಕ್ಕಪೇಟೆ. ಇಲ್ಲಿ ದಾರಿ ದಾರಿಯಲ್ಲಿ, ತಳ್ಳುವ ಗಾಡಿಯಲ್ಲಿ ಮೇಕಪ್ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಡೇಟ್ ಬಾರ್ ಆಗಿರುವ, ಗಡುವು ದಿನಾಂಕ(ಎಕ್ಸ್‌ಪೈರಿ ಡೇಟ್) ಇಲ್ಲದ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡಲಾಗುತ್ತಿದೆ. ಅದು ಕಾನೂನು ಇಲಾಖೆಯ ಕಣ್ಣು ತಪ್ಪಿಸಿ, ಪೊಲೀಸರು ಬಂದ ತಕ್ಷಣ ಮೇಕಪ್ ವಸ್ತುಗಳನ್ನು ಮುಚ್ಚಿಡುತ್ತಾರೆ.
Advertisement
Advertisement
ಪ್ರತಿನಿಧಿ: ಯಾಕೆ ಎಲ್ಲಾ ಪ್ರಾಡಕ್ಟ್ ಕ್ಲೋಸ್ ಮಾಡಿದ್ರಿ?
ವ್ಯಾಪಾರಿ: ಟ್ರಾಫಿಕ್ ನವ್ರು ಬರ‍್ತಾರಲ್ಲ ಅದ್ಕೆ
ಪ್ರತಿನಿಧಿ: ಮಾರಾಟ ಮಾಡಂಗಿಲ್ವಾ..?
ವ್ಯಾಪಾರಿ: ಅವನನ್ನು ಹೊಡೀತಾರೆ, ಇರೋ ಐಟಂ ಎಲ್ಲಾ ಹೊತ್ತುಕೊಂಡು ಹೋಗುತ್ತಾರೆ
ಪ್ರತಿನಿಧಿ: ಮಾರೋ ಹಾಗೆ ಇಲ್ವಾ.
ವ್ಯಾಪಾರಿ: ಇಲ್ಲ
Advertisement
ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್
ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ನ ಮಾರ್ಕೆಟ್ ಗಳಲ್ಲಿಯೂ ದೊಡ್ಡ ದೊಡ್ಡ ಕಂಪನಿಗಳ ನಕಲಿ ಬ್ರಾಂಡ್‌ಗಳ ಹೆಸರಿನಲ್ಲಿ ಕಾಸ್ಮೆಟಿಕ್ಸ್‌ಗಳು ಮಾರಾಟವಾಗುತ್ತಿದೆ.
Advertisement
ಕೆ.ಆರ್ ಮಾರ್ಕೆಟ್:
ಕೆ.ಆರ್ ಮಾರ್ಕೆಟ್‌ನ ರೋಡ್‌ಗಳಲ್ಲಿ ಹಣ್ಣು, ಹೂವುಗಳ ರೀತಿ ಡುಪ್ಲಿಕೇಟ್ ಬ್ಯೂಟಿ ಪ್ರಾಡಕ್ಟ್ ಗಳು ಸೇಲ್‌ಗಳಿವೆ. ಇವುಗಳಿಗೆ ಯಾವುದೇ ಉತ್ಪಾದಿಸಿದ ದಿನಾಂಕ ಹಾಗೂ ಗಡುವು ದಿನಾಂಕ ಇಲ್ಲ. ಇವುಗಳನ್ನು ಅರ್ಧ ರೇಟ್‌ಗೆ ಕೊಡುತ್ತೇವೆ ಎಂದು ವ್ಯಾಪಾರಿಗಳು ಒಪ್ಪಿಕೊಳ್ಳುತ್ತಾರೆ.
ವ್ಯಾಪಾರಿ : ನೋಡಿ ಎಲ್ಲಾ ಆಫರ್ ಇವೆ
ಪ್ರತಿನಿಧಿ: ದಿಪಾವಳಿ ಆಫರ್
ವ್ಯಾಪಾರಿ: ಹಾಫ್ ರೇಟ್ ಗೆ ಕೊಡ್ತೇವೆ
ಪ್ರತಿನಿಧಿ: ಯಾವ ಯಾವ ಬ್ರಾಂಡ್ ಇವೆ
ವ್ಯಾಪಾರಿ: ಪ್ರಮುಖ ಬ್ರಾಂಡ್ ಗಳನ್ನು ವಿವರಿಸತ್ತಾನೆ
ಜಯನಗರ:
ಇಲ್ಲಿಯೂ ಸಹ ಕಣ್ಣಿಗೆ ಆಕರ್ಷಿಸುವ ಬ್ರಾಂಡ್ ಕಂಪನಿಗಳಿಗೆ ಸೆಡ್ಡು ಹೊಡೆಯುವ ಕೆಮಿಕಲ್ ಕಾಸ್ಮೆಟಿಕ್ಸ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.
ಈ ಕಿಲ್ಲರ್ ಕಾಸ್ಮೆಟಿಕ್ಸ್‌ಗಳ ಅನುಭವ ತಮಗೂ ಆಗಿದೆ. ಇದರಿಂದ ಸಂಪೂರ್ಣವಾಗಿ ಸ್ಕಿನ್ ಹಾಳಾಗುತ್ತೆ. ಇವುಗಳನ್ನು ಬಳಸಬೇಡಿ ಎಂದು ಮಾಡೆಲ್ ಮತ್ತು ಮೇಕಪ್ ಆರ್ಟಿಸ್ಟ್‌ಗಳು ಸಲಹೆ ನೀಡುತ್ತಾರೆ.
ಈ ಫೇಕ್ ಬ್ಯೂಟಿ ಪ್ರಾಡಕ್ಟ್ ಗಳ ಬಳಕೆಯಿಂದಾಗುವ ಎಫೆಕ್ಟ್ ಗಳನ್ನು ನೋಡುವುದಾದರೆ;
* ಮುಖದ ಮೇಲೆ ತುರಿತ, ಗುಳ್ಳೆಗಳು, ಕಲೆಗಳು ಉಂಟಾಗುತ್ತವೆ
* ನಿಮ್ಮ ಸೌಂದರ್ಯ ಕಳೆಗುಂದಬಹುದು
* ಬ್ಯಾನ್ ಬಣ್ಣಗಳು ನಿಮ್ಮ ದೇಹ ಸೇರುವ ಸಾಧ್ಯತೆಯಿದೆ
* ವಿವಿಧ ರೀತಿಯ ಚರ್ಮರೋಗಗಳು ಬರುತ್ತವೆ
ಇವುಗಳನ್ನು ಹಚ್ಚಿದ್ದರೆ ಫೇಸ್ ಡ್ಯಾಮೇಜ್ ಆಗುತ್ತೆ. ಅನೇಕ ರೋಗಗಳು ಬರುತ್ತವೆ ಎಂದು ವೈದ್ಯರು ಹೇಳುತ್ತಾರೆ.