– ಯುದ್ಧ ಕಾರ್ಮೋಡ – ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆತಂಕ
ಟೆಹ್ರಾನ್/ಟೆಲ್ ಅವಿವ್: ಮಧ್ಯಪ್ರಾಚ್ಯದಲ್ಲಿ ಬಹುತೇಕ ಯುದ್ಧ ಶುರುವಾದಂತೆ ಕಾಣ್ತಿದೆ. ಖಮೇನಿ ಹತ್ಯೆ ಬಳಿಕವೂ ಇಸ್ರೇಲ್ – ಅಮೆರಿಕದಿಂದ (Israel And US) ಮಿಸೈಲ್‌ಗಳ ದಾಳಿ ಮುಂದುವರಿದಿದ್ದು, ಇರಾನ್‌ನ (Iran) ಟಾಪ್ ಕಮಾಂಡರ್‌ಗಳೇ ಹತ್ಯೆಯಾಗಿದ್ದಾರೆ.
ಇಸ್ರೇಲ್-ಅಮೆರಿಕ ಮಿಸೈಲ್ ದಾಳಿಯಲ್ಲಿ (Missiles Strikes) ಇರಾನ್‌ನ ರಕ್ಷಣಾ ಸಚಿವ ಅಜೀಜ್ ನಾಸಿರ್‌ಝಾದೆ, ಕಮಾಂಡರ್ ಚೀಫ್ ಮೊಹಮದ್ ಪಕ್ಪೋರ್, ಮಿಲಿಟರಿ ಸಲಹೆಗಾರ ಅಲಿ ಶಮ್ಖಾನಿ, ಸೇನಾ ಮುಖ್ಯಸ್ಥ ಮೇಜರ್ ಜನರಲ್ ಸಯ್ಯದ್ ಅಬ್ದುಲ್ರಹೀಮ್ ಮೌಸಾವಿ ಮತ್ತು ಸೇನಾ ಕಮಾಂಡರ್ ಅಮೀರ್ ಹತಾಮಿ ಹತ್ಯೆಗೀಡಾಗಿದ್ದಾರೆ.

ಟಾಪ್ ಕಮಾಂಡರ್‌ಗಳನ್ನ (Top Commanders) ಕಳೆದುಕೊಂಡ ಹೊರತಾಗಿಯೂ ಇರಾನ್ ಸೇನಾಪಡೆಗಳು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ದಾಳಿಯನ್ನ ಮುಂದುವರಿಸಿವೆ. ಅಮೆರಿಕ ನೌಕಾ ನೆಲೆಗಳನ್ನ ಗುರಿಯಾಗಿಸಿ ಮಿಸೈಲ್ ದಾಳಿಗಳನ್ನ ನಡೆಸಿವೆ.
ಕುವೈತ್‌ನ ಅಮೆರಿಕ ವಾಯುನೆಲೆ ಮೇಲೆ ಎರ್‌ಸ್ಟ್ರೈಕ್
ಖಮೇನಿ ಹತ್ಯೆ ಬಳಿಕ ಅಮೆರಿಕ ವಾಯುನೆಲೆ ಮೇಲೆ ಇರಾನ್ ಪ್ರತೀಕಾರದ ವಾಯುದಾಳಿ ನಡೆಸಿದೆ. ಕುವೈತ್‌ನ ಅಮೆರಿಕ ವಾಯುನೆಲೆ ಗುರಿಯಾಗಿಸಿ ದಾಳಿ ಮಾಡಲಾಗಿದೆ. ಕುವೈತ್‌ನಲ್ಲಿರುವ ಅಲಿ ಅಲ್-ಸಲೇಮ್ ವಾಯುನೆಲೆ ಉಡೀಸ್ ಆಗಿದೆ. ಕುವೈತ್ ಹಲವು ಪ್ರದೇಶದಲ್ಲಿ ಸೈರನ್ ಮೊಳಗಿದೆ.
ಇರಾನ್ ಸೇಡಿನ ಪ್ರತಿಜ್ಞೆ
ಇನ್ನೂ ಖಮೇನಿ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ. ಅಮೆರಿಕ-ಇಸ್ರೇಲ್‌ಗೆ ತಕ್ಕಪಾಠ ಕಲಿಸೋದಾಗಿ ಸಂದೇಶ ರವಾನಿಸಿದೆ. ಖಮೇನಿ ಹತ್ಯೆ ಪ್ರತೀಕಾರವಾಗಿ ದಾಳಿ ಖಚಿತ ಎಂದಿದೆ. ಅಮೆರಿಕ-ಇಸ್ರೇಲ್ ನೆಲೆ ಗುರಿಯಾಗಿಸಿ ದಾಳಿ ಎಚ್ಚರಿಕೆ ನೀಡಲಾಗಿದೆ.

ಭಾರತದ ಮೇಲೆ ಏನು ಪರಿಣಾಮ?
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರವಾದರೆ ಭಾರತದ ಮೇಲೆ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಕಚ್ಚಾ ತೈಲ ಬೆಲೆ ಏರಿಕೆ ಆಗಲಿದ್ದು, ಭಾರತ ಬಹುತೇಕ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುವ ಸಾಧ್ಯತೆ ಇದೆ. ತೈಲ ಆಮದು ವೆಚ್ಚ ಹೆಚ್ಚದರೆ ಡಾಲರ್ ಬೇಡಿಕೆ ಹೆಚ್ಚಾಗಿ ರೂಪಾಯಿ ದುರ್ಬಲವಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಇನ್ನು, ಗಲ್ಫ್ ರಾಷ್ಟçಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಭಾರತೀಯರ ಭದ್ರತೆಗೂ ಸಾವಾಲಾಗಬಹುದು.

