ಮಾಸ್ಕೋ: ರಷ್ಯಾದ (Russia) ಶಾಲೆಯಲ್ಲಿ ನಡೆದ ಭೀಕರ ಶೂಟ್‍ಔಟ್‍ನಲ್ಲಿ 5 ಮಕ್ಕಳು (Children) ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.
ಮಧ್ಯ ರಷ್ಯಾದ ಇಝೆವ್ಸ್ಕ್ ನಗರದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಬಂದೂಕುಧಾರಿಯೊಬ್ಬ ಏಕಾಏಕಿ ಶಾಲೆಯೊಳಗೆ (School) ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ. ಇದರಿಂದಾಗಿ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ, ಇಬ್ಬರು ಶಿಕ್ಷಕರು ಹಾಗೂ ಐವರು ಅಪ್ರಾಪ್ತರು ಸಾವನ್ನಪ್ಪಿದ್ದು, ದಾಳಿಯಲ್ಲಿ ಸುಮಾರು 20 ಜನರು ಗಾಯಗೊಂಡಿದ್ದಾರೆ. ದಾಳಿ ಬಳಿಕ ಬಂದೂಕುಧಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ರಷ್ಯಾದ ಆಂತರಿಕ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಗೋವಾಕ್ಕೆ ಚೋರ್ಲಾ ಘಾಟ್ ಮೂಲಕ ತೆರಳುವ ರಾಜ್ಯದ ಭಾರೀ ವಾಹನಗಳಿಗೆ ತಡೆ
ತನಿಖಾಧಿಕಾರಿಗಳ ಪ್ರಕಾರ, ಆತ ನಾಜಿ ಚಿಹ್ನೆ ಹಾಗೂ ಬಾಲಾಕ್ಲಾವಾ ಹೊಂದಿರುವ ಕಪ್ಪು ಟೀಶರ್ಟ್‌ನ್ನು ಧರಿಸಿದ್ದನು. ಹಾಗೂ ಯಾವುದೇ ಗುರುತಿನ ಚೀಟಿಯನ್ನು ಹೊಂದಿರಲಿಲ್ಲ. ಜೊತೆಗೆ ಘಟನೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ದೇವಸ್ಥಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ – 10 ಮಂದಿ ದುರ್ಮರಣ