ಉತ್ತರ ಕನ್ನಡ: ಹೆಂಡತಿಯನ್ನು ಕೊಲೆ (Murder) ಮಾಡಿ ನೀರಿನ ಬ್ಯಾರಲ್‍ನಲ್ಲಿ ಮುಚ್ಚಿಟ್ಟಿದ್ದ ಆರೋಪಿಯನ್ನು ಹಳಿಯಾಳ (Haliyal) ಹಾಗೂ ರಾಮನಗರ (Ramnagar) ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಶಾಂತಕುಮಾರಿ ಮಡಿವಾಳ (38) ಕೊಲೆಯಾದ ಮಹಿಳೆ. ತುಕಾರಾಮ್ ಮಡಿವಾಳ ಕೊಲೆ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಿನ್ ವೋಟ್ ಯಾವಾನಿಗ್ ಬೇಕು ಹೋಗು- ಬಿಜೆಪಿ ಕಾರ್ಯಕರ್ತನಿಗೆ ಚಿಂಚನಸೂರ್ ಕ್ಲಾಸ್
ತುಕಾರಾಮ್ ತನಗಿಂತ ಹತ್ತು ವರ್ಷ ದೊಡ್ಡವಳಾದ ಶಾಂತಕುಮಾರಿಯನ್ನು ಮದುವೆಯಾಗಿದ್ದ. ಈ ವಿಚಾರವಾಗಿ ಅವರಿಬ್ಬರ ನಡುವೆ ಮನಸ್ತಾಪಗಳಿದ್ದವು ಎನ್ನಲಾಗಿದೆ. ಇದಲ್ಲದೆ ಆರೋಪಿ ಬೇರೆ ಹುಡುಗಿಯರೊಂದಿಗೆ ಮಾತನಾಡುತ್ತಾನೆ ಎಂದು ಶಾಂತಕುಮಾರಿ ಸಂಶಯ ವ್ಯಕ್ತಪಡಿಸಿ ಗಲಾಟೆ ಮಾಡಿದ್ದಾಳೆ. ಗಲಾಟೆಯ ಅಂತ್ಯ ಕೊಲೆಯಲ್ಲಿ ಮುಕ್ತಾಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.