ಬೆಳಗಾವಿ: ಹಲವಾರು ದೇಶಿ ತಳಿಗಳು ನಶಿಸುತ್ತಿರುವ ಸಂದರ್ಭದಲ್ಲಿ 95 ದಿನ ತುಂಬಿದ ಕಿಲಾರಿ ಜಾತಿಯ ಕರು (Kilari Calf) ಬರೋಬ್ಬರಿ 1.51 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ್ ಗ್ರಾಮದ ರೈತ ಅಶೋಕ ನಿಂಗಪ್ಪಾ ಜಂಬಗಿ ಎಂಬವರ ಕರುವನ್ನು ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ರೈತ ಕರಿಯಪ್ಪ ಭರ್ಮಪ್ಪ ಲಾಳಿ ಎಂಬುವರು ಖರೀದಿಸಿ ಎಲ್ಲರಿಗೂ ಬಣ್ಣವನ್ನು ಹಚ್ಚಿ ಖುಷಿಪಟ್ಟಿದ್ದಾರೆ.
ಒಂದು ವರ್ಷದ ಕರುವಾಗಿದ್ದರೆ ಸರಿಸುಮಾರು ಐದಾರು ಲಕ್ಷ ರೂಪಾಯಿ ಬೆಲೆಬಾಳುತ್ತಿತ್ತು. ಸದ್ಯಕ್ಕೆ ಕೃಷ್ಣಾ ಅವರ ಕುಟುಂಬದಲ್ಲಿ ಜಾನುವಾರಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅದರ ಪೋಷಣೆ ಅಷ್ಟೊಂದು ಸುಲಭವಲ್ಲದ ಕಾರಣ ಕರುವನ್ನು ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರೇರಿತ ಕೇಸ್ ವಾಪಸ್ ಪಡೆದಿದ್ದೇವೆ: ಪ್ರಿಯಾಂಕ್ ಖರ್ಗೆ ಸಮರ್ಥನೆ
ಕರುವಿನ ವಿಶೇಷ ಏನು ಅಂದರೆ ಇದರ ತಾಯಿ ತಿಕ್ಕುಂಡಿ ಮನೆತನದ (ವಂಶ) ಆಕಳು. ಕರುವಿನ ಮುಖ ತುಂಬಾ ಉದ್ದವಾಗಿದೆ. ಕೊಂಬುಗಳು ಅತಿ ಸಣ್ಣವಾಗಿ ಬರುತ್ತದೆ. ಗಂಗಿ ತೊಗಲು ಇಲ್ಲ. ಬೀಜದ ಹೋರಿಗೆ ಅತಿ ಉತ್ತಮವಾದ ತಳಿಯಾಗಿದ್ದರಿಂದ ನಾವು ಖರೀದಿ ಮಾಡಿದ್ದೇವೆ. ನಮ್ಮ ನೆಲದ ಗೋವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಪ್ರತಿ ಮನೆಯಲ್ಲೂ ಕೂಡ ದೇಸಿ ಹಸುಗಳನ್ನು ಸಾಕುವಂತೆ ರೈತರು ಮನವಿ ಮಾಡಿದ್ದಾರೆ.