ಕೀವ್: ತೊಟ್ಟಿಲಲ್ಲಿ ಮಲಗಿದ್ದ 9 ತಿಂಗಳ ಕಂದಮ್ಮನ ಮುಖದ ಮೇಲೆ ಮನೆಯಲ್ಲಿ ಸಾಕಿದ್ದ ಬೆಕ್ಕು ಮಲಗಿದ ಪರಿಣಾಮ ಉಸಿರುಗಟ್ಟಿ ಮಗು ಸಾವನ್ನಪ್ಪಿದ ಘಟನೆ ಉಕ್ರೇನ್‍ನಲ್ಲಿ ನಡೆದಿದೆ.
ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳದಿದ್ದರೆ ಯಾವ ರೀತಿಯಲ್ಲಾದರೂ ಅಪಾಯ ಬರಬಹುದು. ಉಕ್ರೇನ್‍ನಲ್ಲಿ ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಮೇಲೆ ಬೆಕ್ಕು ಕುಳಿತ ಪರಿಣಾಮ ಪುಟ್ಟ ಕಂದಮ್ಮ ಸಾವನ್ನಪ್ಪಿದೆ. 9 ತಿಂಗಳ ಅಲೆಗ್ಸಾಂಡ್ರಾ ಮನೆಯೊಳಗೆ ತೊಟ್ಟಿಲಲ್ಲಿ ಮಲಗಿತ್ತು. ಮಗುವಿನ ತಾಯಿ ಸ್ನೇಝಾನಾ(22) ಮನೆಯ ಕೆಲಸಗಳನ್ನು ಮುಗಿಸಿ, ಮಗುವನ್ನು ತೊಟ್ಟಿಲ್ಲಲ್ಲಿ ಮಲಗಿಸಿ ಮನೆ ಹಿತ್ತಲಿನಲ್ಲಿ ಕೆಲಸ ಮಾಡುತ್ತಿದ್ದರು. ಮಗು ಮಲಗಿದೆ ಎಂದು ತಾಯಿ ತನ್ನ ಕೆಲಸಗಳನ್ನು ಮಾಡುತ್ತಿದ್ದರು. ಈ ವೇಳೆ ತೊಟ್ಟಿಲಿನಲ್ಲಿ ಎರಡು ಬೆಕ್ಕುಗಳು ಹತ್ತಿ, ಮಗುವಿನ ಮುಖದ ಮೇಲೆ ಕುಳಿತಿತ್ತು. ಕೆಲ ಸಮಯದ ನಂತರ ಕೆಲಸ ಮುಗಿಸಿಕೊಂಡು ತಾಯಿ ಮನೆ ಒಳಗೆ ಬಂದಾಗ ಮಗುವಿನ ತೊಟ್ಟಿಲಿನಲ್ಲಿ ಬೆಕ್ಕು ಕುಳಿತಿರುವುದು ನೋಡಿದ್ದಾರೆ. ತಕ್ಷಣ ಬೆಕ್ಕನ್ನು ಓಡಿಸಿ, ಮಗುವನ್ನು ಎಚ್ಚರಿಸಲು ಪ್ರಯತ್ನಿಸಿದ್ದಾರೆ.
Advertisement
Advertisement
ಆದರೆ ಮಗು ಉಸಿರಾಡುತ್ತಿರಲಿಲ್ಲ ಎಂದು ಅರಿತು ಆತಂಕಗೊಂಡು ತಾಯಿ ಅರೆ ವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತಕ್ಷಣ ಸಿಬ್ಬಂದಿ ಮನೆಗೆ ಬಂದು ಚಿಕಿತ್ಸೆ ನೋಡಿ ಸುಮಾರು 40 ನಿಮಿಷಗಳ ಕಾಲ ಮಗು ಮರು ಉಸಿರಾಟ ಮಾಡುವಂತೆ ಪ್ರಯತ್ನಿಸಿದರು. ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ, ಅಷ್ಟೊತ್ತಿಗೆ ಪುಟ್ಟ ಜೀವ ಪ್ರಾಣ ಬಿಟ್ಟಿತ್ತು. ಮಗುವಿನ ಮುಖದ ಮೇಲೆ ಬೆಕ್ಕು ಕುಳಿತಿದ್ದಕ್ಕೆ ಉಸಿರುಗಟ್ಟಿ ಕಂದಮ್ಮ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
Advertisement
ಮನೆಯಲ್ಲಿ ಸಾಕಿದ್ದ ಬೆಕ್ಕುಗಳಿಂದ ಮಗು ಸಾವನ್ನಪ್ಪಿರುವ ಪ್ರಕರಣಗಳು ಈ ಹಿಂದೆ ಕೂಡ ನಡೆದಿತ್ತು. 2000 ಡಿಸೆಂಬರ್ ನಲ್ಲಿ ಕಿಂಗ್‍ಸ್ಟೈಟ್‍ಗಾನ್ ಪ್ರದೇಶದಲ್ಲಿ ಆರು ವಾರಗಳ ಮಗು ಮಲಗಿದ್ದಾಗ ಅದರ ಮೇಲೆ ಬೆಕ್ಕು ಕುಳಿತ ಪರಿಣಾಮ ಮಗು ಮೃತಪಟ್ಟಿತ್ತು. ಇದೇ ರೀತಿ ರಷ್ಯಾದ ಜ್ಲಟೋಸ್ಟ್ ನಲ್ಲಿ ಕೂಡ ಒಂದು ತಿಂಗಳ ಕಂದಮ್ಮ ಬೆಕ್ಕಿನಿಂದ ಜೀವ ಕಳೆದುಕೊಂಡಿತ್ತು.