ಮನೆಯಲ್ಲಿ ಏನೇ ಅಡುಗೆ ಮಾಡಿದರೂ ಮಕ್ಕಳ ಮನವೊಲಿಸಿ ಅದನ್ನು ಅವರಿಗೆ ತಿನ್ನಿಸೋದು ಕಷ್ಟವೇ ಸರಿ. ಆದರೆ ನಾನ್‌ವೆಜ್ ವಿಷಯ ಬಂದಾಗ ಮಕ್ಕಳು ಅದನ್ನು ಬೇಡ ಎನ್ನೋದೇ ವಿರಳ. ಅದರಲ್ಲೂ ಇತ್ತೀಚಿನ ಮಕ್ಕಳು ವೆಸ್ಟರ್ನ್ ಸ್ಟೈಲ್‌ನ ರೆಸಿಪಿಗಳನ್ನು ಇನ್ನಷ್ಟು ಇಷ್ಟಪಟ್ಟು ತಿನ್ನುತ್ತಾರೆ. ಇಂತಹ ಮಕ್ಕಳಿಗಾಗಿ ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಕ್ರೀಮಿ ಗಾರ್ಲಿಕ್ ಚಿಕನ್. ಮಕ್ಕಳೇ ಏಕೆ, ವೆಸ್ಟರ್ನ್ ಟಚ್ ಇರೋ ದೇಸೀ ಚಿಕನ್ ರೆಸಿಪಿ ಇದಾಗಿರೋದ್ರಿಂದ ದೊಡ್ಡವರಿಗೂ ಇದು ಖಂಡಿತಾ ಇಷ್ಟವಾಗುತ್ತದೆ.
Advertisement
ಬೇಕಾಗುವ ಪದಾರ್ಥಗಳು:
ಮ್ಯಾರಿನೇಟ್ ಮಾಡಲು:
ಚಿಕನ್ – 1 ಕೆಜಿ (ಬ್ರೆಸ್ಟ್, ತೊಡೆ ಭಾಗಗಳು ಉತ್ತಮ)
ಬೆಳ್ಳುಳ್ಳಿ ಪುಡಿ – 1 ಟೀಸ್ಪೂನ್
ಕರಿ ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬೆಣ್ಣೆ – 1 ಟೀಸ್ಪೂನ್
ಆಲಿವ್ ಎಣ್ಣೆ – 1 ಟೀಸ್ಪೂನ್
ಗ್ರೇವಿ ತಯಾರಿಸಲು:
ಬೆಣ್ಣೆ – 1 ಟೀಸ್ಪೂನ್
ಆಲಿವ್ ಎಣ್ಣೆ – 1 ಟೀಸ್ಪೂನ್
ಹೆಚ್ಚಿದ ಈರುಳ್ಳಿ – 1 ಕಪ್
ತುರಿದ ಬೆಳ್ಳುಳ್ಳಿ – 6
ದಪ್ಪಗೆ ಕತ್ತರಿಸಿದ ಮಶ್ರೂಮ್ – 2 ಕಪ್
ಚಿಕನ್ ಸ್ಟಾಕ್ – ಒಂದೂವರೆ ಕಪ್
ಹೆವಿ ಕ್ರೀಮ್ – 500 ಮಿ.ಲೀ
ತುರಿದ ಚೀಸ್ – ಕಾಲು ಕಪ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಒರಿಗಾನೋ – 1 ಟೀಸ್ಪೂನ್ ಇದನ್ನೂ ಓದಿ: ಫಿಶ್ ಫ್ರೈಗೆ ಟ್ವಿಸ್ಟ್ – ಪೆಪ್ಪರ್ ಫ್ರೈ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬೆಳ್ಳುಳ್ಳಿ ಪುಡಿ, ಕರಿ ಮೆಣಸಿನ ಪುಡಿ, ಉಪ್ಪು ಹಾಗೂ ಎಣ್ಣೆಯನ್ನು ಒಂದು ಬಟ್ಟಲಿಗೆ ಹಾಕಿ, ಅದಕ್ಕೆ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಲೇಪಿಸಿಕೊಳ್ಳಿ.
* ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಅದರಲ್ಲಿ ಚಿಕನ್ ತುಂಡುಗಳನ್ನು ಹಾಕಿ ಹುರಿದುಕೊಳ್ಳಿ.
* ಚಿಕನ್ ತುಂಡುಗಳ ಪ್ರತಿ ಭಾಗ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 4-5 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ. ಬಳಿಕ ಅದನ್ನು ಪಕ್ಕಕ್ಕಿಡಿ.
* ಈಗ ಅದೇ ಪ್ಯಾನ್ ಅನ್ನು ಸ್ವಚ್ಛಗೊಳಿಸಿ, ಅದರಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ಈರುಳ್ಳಿ ಸೇರಿಸಿ ಮೃದುವಾಗುವವರೆಗೆ ಹುರಿದುಕೊಳ್ಳಿ.
* ಅದಕ್ಕೆ ಬೆಳ್ಳುಳ್ಳಿ ಸೇರಿಸಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ.
* ನಂತರ ಮಶ್ರೂಮ್ ಸೇರಿಸಿ, 2-3 ನಿಮಿಷ ಬೇಯಿಸಿಕೊಳ್ಳಿ.
* ಚಿಕನ್ ಸ್ಟಾಕ್, ಕ್ರೀಮ್, ಚೀಸ್, ಓರಿಗಾನೋ, ಕೊತ್ತಂಬರಿ ಸೊಪ್ಪು ಸೇರಿಸಿ ಬೆರೆಸಿಕೊಳ್ಳಿ. ಅದನ್ನು 5 ನಿಮಿಷ ಕುದಿಸಿಕೊಳ್ಳಿ.
* ಈಗ ಉರಿಯನ್ನು ಮಧ್ಯಮಕ್ಕೆ ತಂದು ಹುರಿದ ಚಿಕನ್ ಅನ್ನು ಸೇರಿಸಿ 10 ನಿಮಿಷ ಕುದಿಸಿಕೊಳ್ಳಿ.
* ಇದೀಗ ಕ್ರೀಮಿ ಗಾರ್ಲಿಕ್ ಚಿಕನ್ ತಯಾರಾಗಿದ್ದು, ಅನ್ನ ಅಥವಾ ಪಾಸ್ತಾದೊಂದಿಗೆ ಸವಿಯಿರಿ. ಇದನ್ನೂ ಓದಿ: ಬಿರಿಯಾನಿಗೆ ಸೂಪರ್ ಸೈಡ್ ಡಿಶ್ – ಮಟನ್ ದಾಲ್ಚಾ ರೆಸಿಪಿ