ಹೆಚ್ಚಿನ ಅಮ್ಮಂದಿರಿಗೆ ತಮ್ಮ ಮಕ್ಕಳು ಹೊಟ್ಟೆಗೆ ಸರಿಯಾಗಿ ತಿನ್ನುವುದಿಲ್ಲ, ಏನು ಕೊಟ್ಟರೆ ತಿನ್ನಬಹುದು ಎಂಬ ಯೋಚನೆ ಕಾಡುತ್ತಿರುತ್ತದೆ. ನಿಮ್ಮ ಈ ಚಿಂತೆಗೆ ನಾವು ಇಂದು ಸಣ್ಣ ಮಟ್ಟಿನ ಪರಿಹಾರವನ್ನು ನೀಡುತ್ತಿದ್ದೇವೆ. ಬರೀ ಮಕ್ಕಳು ಮಾತ್ರವಲ್ಲದೆ ದೊಡ್ಡವರು ಕೂಡಾ ಬಾಯಿ ಚಪ್ಪರಿಸಿಕೊಂಡು ತಿನ್ನುವಂತಹ ಒಂದು ರೆಸಿಪಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಹಾಗಿದ್ರೆ ತಡ ಮಾಡದೆ ರುಚಿಯಾದ ವೆಜ್ ರೋಲ್ (Veg Roll) ಮಾಡುವುದನ್ನು ತಿಳಿದುಕೊಳ್ಳೋಣ.
Advertisement
ಬೇಕಾಗುವ ಸಾಮಾಗ್ರಿಗಳು:
ಗೋಧಿ ಹಿಟ್ಟು – 1 ಕಪ್
ಮೈದಾ ಹಿಟ್ಟು – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ಅನುಸಾರ
ನೀರು – ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಲು ಬೇಕಾದಷ್ಟು
ಜೀರಿಗೆ – ಅರ್ಧ ಟೀಸ್ಪೂನ್
ಉದ್ದಕ್ಕೆ ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 1
ಗರಮ್ ಮಸಾಲಾ – 1 ಟೀಸ್ಪೂನ್
ಅರಶಿನ – ಸ್ವಲ್ಪ
ಅಚ್ಚ ಖಾರದ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್
ಉದ್ದಕ್ಕೆ ಹೆಚ್ಚಿದ ಕ್ಯಾರೆಟ್ – ಅರ್ಧ
ಸಣ್ಣಗೆ ಹೆಚ್ಚಿದ ಹಸಿರು ಮೆಣಸು – 1
ಹೆಚ್ಚಿದ ದೊಣ್ಣೆ ಮೆಣಸು – ಅರ್ಧ
ಸಣ್ಣಗೆ ಹೆಚ್ಚಿದ ಪನೀರ್ – ಅರ್ಧ ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಟೊಮೆಟೊ ಸಾಸ್ – ಸ್ವಲ್ಪ ಇದನ್ನೂ ಓದಿ: ಚೈನೀಸ್ ಸ್ಟೈಲ್‌ನ ಯಮ್ಮೀ ಯಮ್ಮೀ ಆರೆಂಜ್ ಚಿಕನ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್‌ಗೆ ಗೋಧಿ ಹಿಟ್ಟು ಹಾಗೂ ಮೈದಾ ಹಿಟ್ಟನ್ನು ಹಾಕಿಕೊಳ್ಳಿ. ಮೈದಾ ಹಿಟ್ಟು ಇಷ್ಟಪಡದವರು 2 ಕಪ್ ಗೋಧಿ ಹಿಟ್ಟನ್ನೇ ಬಳಸಿಕೊಳ್ಳಬಹುದು. ಇದಕ್ಕೆ ಅರ್ಧ ಟೀಸ್ಪೂನ್ ಉಪ್ಪು, 1 ಟೀಸ್ಪೂನ್ ಎಣ್ಣೆ ಹಾಕಿ ಎಲ್ಲವನ್ನೂ ಚೆನ್ನಾಗಿ ಕಲಸಿಕೊಳ್ಳಿ.
* ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟನ್ನು ಕಲಸಿಕೊಂಡ ಬಳಿಕ ಇದಕ್ಕೆ ಮತ್ತೆ 1 ಟೀಸ್ಪೂನ್ ಎಣ್ಣೆ ಹಾಕಿ 7-8 ನಿಮಿಷ ಕಾಲ ಚೆನ್ನಾಗಿ ನಾದಿಕೊಳ್ಳಿ.
* ಬಳಿಕ ಈ ಹಿಟ್ಟನ್ನು 15-20 ನಿಮಿಷಗಳ ಕಾ¯ ಹಾಗೇ ನೆನೆಯಲು ಬಿಡಿ. ನಂತರ ಹಿಟ್ಟನ್ನು ಚಪತಿ ಉಂಡೆಯ ರೀತಿ ಮಾಡಿಕೊಂಡು ಹಸಿ ಹಿಟ್ಟನ್ನು ಬಳಸಿಕೊಂಡು ತೆಳ್ಳಗೆ ಲಟ್ಟಿಸಿಕೊಳ್ಳಿ.
* ಪ್ಯಾನ್ ಅನ್ನು ಬಿಸಿ ಮಾಡಿ, ಲಟ್ಟಿಸಿಕೊಂಡ ಚಪಾತಿಯನ್ನು ಹಾಕಿ ಎರಡೂ ಕಡೆ ಕಾಯಿಸಿಕೊಳ್ಳಿ. ಚಪಾತಿಯನ್ನು ಕಾಯಿಸಿಕೊಳ್ಳುವಾಗ ಎರಡೂ ಬದಿ ಸ್ವಲ್ಪ ಎಣ್ಣೆಯನ್ನು ಸವರಿಕೊಳ್ಳಿ. ಇದೇ ರೀತಿ ಉಳಿದ ಚಪಾತಿಗಳನ್ನು ಮಾಡಿ ಇಟ್ಟುಕೊಳ್ಳಿ.
* ಒಂದು ಬಾಣಲೆಗೆ 2 ಟೀಸ್ಪೂನ್ ಎಣ್ಣೆ ಹಾಕಿ ಬಿಸಿಯಾದ ಬಳಿಕ ಜೀರಿಗೆಯನ್ನು ಹಾಕಿಕೊಳ್ಳಿ. ಇದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಂಡು 2 ನಿಮಿಷದವರೆಗೆ ಫ್ರೈ ಮಾಡಿಕೊಳ್ಳಿ.
* ಟೊಮೆಟೊ ಬೀಜವನ್ನು ತೆಗೆದು ಉದ್ದುದ್ದವಾಗಿ ಹೆಚ್ಚಿಕೊಂಡು ಬಾಣಲೆಗೆ ಹಾಕಿ. ಈಗ ಇದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ. ನಂತರ ಗರಮ್ ಮಸಾಲಾ, ಅರಶಿನ ಪುಡಿ, ಅಚ್ಚ ಖಾರದ ಪುಡಿ, ಕೊತ್ತಂಬರಿ ಪುಡಿ ಹಾಕಿಕೊಳ್ಳಿ.
* ಬಳಿಕ ಇದಕ್ಕೆ ಕ್ಯಾರೆಟ್ ಅನ್ನು ಹಾಕಿಕೊಳ್ಳಿ. ಎಲ್ಲವನ್ನು ಚೆನ್ನಾಗಿ ಫ್ರೈ ಮಾಡಿ. ನಂತರ ಇದಕ್ಕೆ ಹಸಿರು ಮೆಣಸಿನಕಾಯಿ ಹಾಗೂ ದೊಣ್ಣೆ ಮೆಣಸನ್ನು ಹಾಕಿಕೊಳ್ಳಿ. ಇದನ್ನು 2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ.
* ಬಳಿಕ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಅಥವಾ ಪುಡಿ ಮಾಡಿಕೊಂಡ ಪನೀರ್ ಅನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದರ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಗ್ಯಾಸ್ ಆಫ್ ಮಾಡಿಕೊಳ್ಳಿ.
* ಈಗ ಕಾಯಿಸಿ ಇಟ್ಟಿದ್ದ ಚಪಾತಿಯನ್ನು ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಟೊಮೆಟೊ ಸಾಸ್ ಹಾಕಿಕೊಂಡು ಸವರಿಕೊಳ್ಳಿ.
* ಇದರ ಮೇಲೆ ಈರುಳ್ಳಿ ಹಾಗೂ ಇದಕ್ಕೆ ರೆಡಿ ಮಾಡಿದ್ದ ಮಿಶ್ರಣವನ್ನು ಹಾಕಿಕೊಳ್ಳಿ. ನಂತರ ಇದನ್ನು ನಿಧಾನವಾಗಿ ರೋಲ್ ಮಾಡಿಕೊಳ್ಳಿ.
* ಇದೇ ರೀತಿ ಉಳಿದ ಚಪಾತಿಗಳನ್ನು ರೋಲ್‌ಗಳನ್ನಾಗಿ ಮಾಡಿಕೊಳ್ಳಿ. ಇಲ್ಲಿಗೆ ನಮ್ಮ ವೆಜ್ ರೋಲ್ ರೆಡಿ ಆಯಿತು.
* ಇದು ತರಕಾರಿಗಳನ್ನು ಒಳಗೊಂಡು ತುಂಬಾ ಟೇಸ್ಟಿಯಾಗಿ ಇರುತ್ತದೆ. ಅಲ್ಲದೇ ಮಕ್ಕಳು ಕ್ಷಣಮಾತ್ರದಲ್ಲಿ ಇದನ್ನು ತಿಂದು ಖಾಲಿ ಮಾಡುತ್ತಾರೆ. ಇದನ್ನೂ ಓದಿ: ಬ್ರೆಡ್ ಇಲ್ಲದೇ ಮಾಡಿ ರುಚಿರುಚಿಯಾದ ಆಲೂ ಚಿಲ್ಲಾ ಸ್ಯಾಂಡ್‌ವಿಚ್