ಬೆಂಗಳೂರು: ಇತ್ತೀಚೆಗೆ ಯಂಗ್ ಯೇಜ್ ನಲ್ಲಿ ಕಿಡ್ನಿ ವೈಫಲ್ಯದ ಸಮಸ್ಯೆ ಕಾಡುತ್ತಿದೆ. ಕಿಡ್ನಿ ದಾನಕ್ಕೆ (Kidney Transplant) ಕೆಲವೊಮ್ಮೆ ಕುಟುಂಬಸ್ಥರು ತಯಾರಿದರೂ ರಕ್ತದ ಗುಂಪು ಮ್ಯಾಚ್ ಆಗದೇ ಜೀವನ್ಮರಣದ ಹೋರಾಟ ಮಾಡುವ ರೋಗಿಗಳಿದ್ದಾರೆ. ಆದರೆ ಇನ್ಮುಂದೆ ಈ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಬ್ಲಡ್ ಗ್ರೂಪ್ ಯಾವುದಾದರೂ ಕಿಡ್ನಿ ಕಸಿ ಮಾಡಬಹುದಾಗಿದೆ.
ಮಗನಿಗೆ 16 ವರ್ಷವಿದ್ದಾಗ ಅಮ್ಮನಿಗೆ ಕಿಡ್ನಿ ವೈಫಲ್ಯವಾಗಿತ್ತು. ಕಿಡ್ನಿ ಕೊಡಲು ಮಗ ಮುಂದಾದರೂ 18 ವರ್ಷ ತುಂಬದೇ ಕಿಡ್ನಿ ಕೊಡುವಂತಿರಲಿಲ್ಲ. 19 ವರ್ಷಕ್ಕೆ ಕಿಡ್ನಿ ಕೊಟ್ಟು ಅಮ್ಮನ ಉಳಿಸಲು ಮುಂದಾದ ಮಗನಿಗೆ ರಕ್ತದ ಗುಂಪು ಹೊಂದಾಣಿಕೆಯಾಗದ ಸತ್ಯ ಗೊತ್ತಾಗಿದೆ. ಇನ್ನೊಂದು ಕೇಸ್‍ನಲ್ಲಿ 75 ವರ್ಷದ ಬೆನ್ನು ಬಾಗಿದ ಸ್ಥಿತಿಯಲ್ಲಿರುವ ಅಜ್ಜಿ ತನ್ನ ಮಗನ ಉಳಿಸಲು ಕಿಡ್ನಿ ಕೊಡಲು ತಯಾರಾಗಿದ್ದರೂ, ಇಲ್ಲೂ ಬ್ಲಡ್ ಗ್ರೂಪ್ ಮಗನ ಹಾಗೂ ತಾಯಿಯದ್ದು ಮ್ಯಾಚ್ ಆಗಿಲ್ಲ. ಆದರೂ ಹೊಂದಾಣಿಕೆಯಾಗದ ರಕ್ತದ ಗುಂಪು ಇದ್ದರೂ ಮಣಿಪಾಲ ಆಸ್ಪತ್ರೆಯ (Manipal Hospital) ವೈದ್ಯರು ರಿಸ್ಕ್ ತೆಗೆದುಕೊಂಡು ಕಿಡ್ನಿ ಕಸಿ ಮಾಡಿ ಮರು ಜೀವ ಕೊಟ್ಟಿದ್ದಾರೆ. ಈ ರೀತಿ ಸುಮಾರು 27 ಅಪರೂಪದ ಕಿಡ್ನಿ ಕಸಿಯೂ ಯಶಸ್ವಿಯಾಗಿದೆ. ಈಗ ಕಿಡ್ನಿ ಕಸಿ ಮಾಡಿಕೊಂಡವರು ಹಾಗೂ ಅವರ ಕುಟುಂಬಸ್ಥರ ಮೊಗದಲ್ಲಿ ನಗುವಿನ ಹೊನಲು ತುಂಬಿದೆ.
ಇನ್ನು ಬೇರೆ ಬೇರೆ ಬ್ಲಡ್ ಗ್ರೂಪ್‍ನ ಕಿಡ್ನಿ ಕಸಿ ಪ್ರಕ್ರಿಯೆ ಕೊಂಚ ಸಂಕೀರ್ಣ. ಕಸಿ ಕ್ರಮದ ಮುನ್ನ ಹಾಗೂ ನಂತರ ರಕ್ತದಲ್ಲಿನ ಪ್ರತಿಕಾಯ ಮಟ್ಟವನ್ನು ಕಡಿಮೆ ಮಾಡಲು ಸಾಕಷ್ಟು ಔಷಧಗಳನ್ನು ನೀಡಲಾಗುತ್ತದೆ. ಮೂರು ತಿಂಗಳವರೆಗೆ ರೋಗಿಗಳನ್ನು ಯಾವುದೇ ಸೋಂಕು ತಾಕದಂತೆ ಎಚ್ಚರ ವಹಿಸಬೇಕು ಎಂದು ಮೂತ್ರಪಿಂಡ ತಜ್ಞ ಡಾ. ದೀಪಕ್ ಕುಮಾರ್ ಚಿತ್ರಹಳ್ಳಿ ಹೇಳುತ್ತಾರೆ. ಇದನ್ನೂ ಓದಿ: `ಗಂಧದಗುಡಿ’ ಚಿತ್ರಕ್ಕೆ ಟ್ಯಾಕ್ಸ್ ಫ್ರೀಗೆ ಒತ್ತಾಯ – ಅಪ್ಪು ಅಭಿಮಾನಿಗಳಿಂದ ಸರ್ಕಾರಕ್ಕೆ ಮನವಿ
ಡಯಾಲಿಸಿಸ್‍ನಲ್ಲಿ ಬದುಕು ತಳ್ಳುವ ರೋಗಿಗಳಿಗೆ ಈ ಪ್ರಕ್ರಿಯೆ ನಿಜಕ್ಕೂ ಆಶಾದಾಯಕವಾಗಿದೆ. ಹೊಸ ಪ್ರಯೋಗದಲ್ಲಿ ಸಕ್ಸಸ್ ಕಂಡ ಮಣಿಪಾಲ ಆಸ್ಪತ್ರೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದೇ ಹೇಳಬಹುದು. ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಕಾರ್ಯವೈಖರಿ ಹೊಗಳಿದ ಕಾಂಗ್ರೆಸ್ ನಾಯಕ, ರಾಜಸ್ಥಾನ ಸಿಎಂ ಗೆಹ್ಲೋಟ್