– ಮಧ್ಯಮ ವರ್ಗವೇ ಇವರ ಟಾರ್ಗೆಟ್
ಬೆಂಗಳೂರು: ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಹೆಸರು ಹೇಳಿಕೊಂಡು ರಾಜಧಾನಿಯಲ್ಲಿ ಕಿಡ್ನಿ ದಂಧೆ ನಡೆಯುತ್ತಿದ್ದು, ಅಮಾಯಕರಿಗೆ ಕೋಟಿ ಆಸೆ ತೋರಿಸಿ ಕಿಡ್ನಿ ಕೊಡಿ ಎಂದು ಖದೀಮರು ಯಾಮಾರಿಸುತ್ತಾರೆ.
ಹೌದು, ಒಂದು ಕಿಡ್ನಿ ಕೊಟ್ರೆ 3 ಕೋಟಿ ಕೊಡ್ತೀವಿ ಅಂತ ಅಮಾಯಕರನ್ನು ಇವರು ಟಾರ್ಗೆಟ್ ಮಾಡುತ್ತಾರೆ. ದೆಹಲಿಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ಹೆಸರಲ್ಲಿ ನಡೆಯುತ್ತಿರುವ ಮೋಸ ಇದಾಗಿದ್ದು, ಈ ದಂಧೆಕೋರರು ಹಣದ ಆಸೆ ತೋರಿಸಿ ಮಧ್ಯಮ ವರ್ಗದವರನ್ನೇ ಟಾರ್ಗೆಟ್ ಮಾಡ್ತಾರೆ. ಮೊದಲು ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಪರಿಚಯ ಮಾಡಿಕೊಂಡು, ಬಳಿಕ ಕಿಡ್ನಿ ಕೊಟ್ರೆ 3 ಕೋಟಿ ಕೋಡ್ತೀವಿ ಅಂತ ಕರೆ ಮಾಡ್ತಾರೆ. ಕೋಟಿ ಅಂತ ನಂಬಿ ಸ್ವಲ್ಪ ಯಾಮಾರಿದ್ರೂ ನಿಮ್ಮ ಜೇಬಿಗೆ ಕತ್ತರಿ ಹಾಕಿಬಿಡ್ತಾರೆ.
Advertisement
Advertisement
ಈ ಕಿಡ್ನಿ ದಂಧೆಯಿಂದ ಬೆಂಗಳೂರಿನ ನಿವಾಸಿಯಾದ ಸೂರಿ ಅನ್ನೋ ಅಮಾಯಕ ಮೋಸ ಹೋಗಿದ್ದಾರೆ. ಖದೀಮನ ಮಾತು ನಂಬಿ ಆತನ ಅಕೌಂಟಿಗೆ 9,700 ರೂ. ಹಣ ಕೂಡ ಹಾಕಿದ್ದಾರೆ. ಕೂಡಲೇ ಆತ ಮತ್ತೆ 23 ಸಾವಿರ ಕಳುಹಿಸಿ ಅಂದಿದಕ್ಕೆ ಎಚ್ಚೆತ್ತುಕೊಂಡ ಸೂರಿಗೆ ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹಣ ವರ್ಗಾವಣೆ ಆದ ಬಳಿಕ ಆತನ ಫೋನ್ ನಂಬರ್ ನಾಟ್ ರೀಚೆಬಲ್ ಬಂದಿತ್ತು. ಹೀಗಾಗಿ ತನಗಾದ ಮೋಸದ ಬಗ್ಗೆ ಸೂರಿಗೆ ಅರಿವಾಗಿದೆ.
Advertisement
Advertisement
ಆರೋಪಿಯು ಫೇಸ್‍ಬುಕ್ ಮುಖಾಂತರ ಮೊದಲು ಸೂರಿಯನ್ನು ಪರಿಚಯ ಮಾಡ್ಕೊಂಡು ಅವನೊಂದಿಗೆ ಆತ್ಮೀಯತೆಯಿಂದ ಇದ್ದನು. ಖದೀಮ ಹೇಳಿಕೊಳ್ಳೋದು ತನ್ನ ಮೂಲ ಊರು ಮೈಸೂರು ಎಂದು, ಆದ್ರೆ ಅವನ ಮಾತು ಕೇಳಿದರೆ ಆತ ಬೆಂಗಳೂರಿನಲ್ಲೇ ಇರುವ ವಿದೇಶಿ ಎಂಬುದು ಅನುಮಾನವಿದೆ. ನಾನಿರೋದು ದೆಹಲಿ ಅನ್ನೋ ಖದೀಮ ಹಣ ಕಟ್ಟಲು ಮಾತ್ರ ಯಲಹಂಕದ ಆಂಧ್ರ ಬ್ಯಾಂಕ್ ಬ್ರ್ಯಾಂಚ್ ಅಕೌಂಟ್ ನಂಬರ್ ಕೊಟ್ಟಿದ್ದನು ಎಂದು ಸೂರಿ ಹೇಳಿದ್ದಾರೆ.
ದೆಹಲಿಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ನೆಫ್ರೋಲಜಿಸ್ಟ್, ನನ್ನ ಹೆಸರು ಡಾ. ರಾಬರ್ಟ್ ವಿಲಿಯಂ ಎಂದು ಜನರನ್ನು ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಳ್ಳುತ್ತಾನೆ. ಆಮೇಲೆ ಜನರು ನಿಮ್ಮನ್ನು ಭೇಟಿ ಮಾಡಬೇಕು ಅಂದರೆ ಮೊದಲು 9700 ಕಟ್ಟಿ ರಿಜಿಸ್ಟರ್ ಮಾಡಿ ಅಂತ ನಂಬಿಸ್ತಾನೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ಈ ಕಿಡ್ನಿ ಖದೀಮ ಬಕ್ರ ಮಾಡ್ತಾನೆ. ಫೇಸ್ ಬುಕ್‍ನಲ್ಲಿ ಯಾರದ್ದೋ ಫೋಟೋ ಹಾಕಿ ನಂಬಿಸಿ ತಾನು ಮೈಸೂರಿನವನು ಅಂತ ಸುಳ್ಳು ಹೇಳಿ ಅಮಾಯಕರನ್ನು ನಂಬಿಸಿ ಮೋಸ ಮಾಡ್ತಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv