ನಿನ್ನ ನೋಡ್ಬೇಕು ಬಾ ಅಂತ ಕರೆಸಿ ಪ್ರಿಯತಮೆಯಿಂದ್ಲೇ ಪ್ರಿಯಕರನ ಕಿಡ್ನ್ಯಾಪ್‌, 5 ಲಕ್ಷ ಸುಲಿಗೆ!

Public TV
3 Min Read
Kormangal 3

– ಚಿನ್ನಾಭರಣ ಹಾಕ್ಕೊಂಡು ಇನ್ನೋವಾ ಕಾರಿನಲ್ಲಿ ಬಾ ಎಂದಿದ್ದ ಪ್ರಿಯತಮೆ

ಬೆಂಗಳೂರು: ಪ್ರಿಯತಮೆ (Lover) ಮೀಟ್‌ ಮಾಡೋಕೆ ಬಂದಿದ್ದವನನ್ನ ಕಿಡ್ನ್ಯಾಪ್‌ ಮಾಡಿ ಸುಲಿಗೆ ಮಾಡಿ ಸಿನಿಮೀಯ ರೀತಿಯಲ್ಲಿ ತಗಲಾಕ್ಕೊಂಡ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್‌ ಠಾಣಾ (Koramangala Police Station) ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯತಮೆಯೇ ಸುಲಿಗೆ ಹಿಂದಿನ ಕಿಂಗ್‌ಪಿನ್‌ ಎಂದು ತಿಳಿದು ಪ್ರಿಯಕರ ಬೆಚ್ಚಿಬಿದ್ದಿದ್ದಾನೆ.

Kormangal 4

ಪ್ರಿಯತಮೆ ಸ್ಕೆಚ್‌ ಹಾಕಿದ್ದು ಹೇಗೆ?
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಶಿವ ಮತ್ತು ಮೋನಿಕಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಹೀಗಿರುವಾಗ ಶಿವನಿಗೆ ಕರೆ ಮಾಡಿ ನನ್ನ ಸ್ನೇಹಿತರು ನಿನ್ನ ನೋಡಬೇಕಂತೆ, ನಿನ್ನ ಹತ್ರ ಇರುವ ಚಿನ್ನಾಭರಣ ಹಾಕ್ಕೊಂಡು, ಇನ್ನೋವಾ ಕಾರಿನಲ್ಲಿ ಬಾ ಅಂತಾ ಫೋನ್‌ ಮಾಡಿದ್ಲು. ಮೋನಿಕಾ ಮಾತು ನಂಬಿದ ಪ್ರಿಯಕರ 60 ಗ್ರಾಂ ಚಿನ್ನಾಭರಣದ ಜೊತೆಗೆ ಇನ್ನೋವಾ ಕಾರಿನಲ್ಲಿ ಬಂದಿದ್ದಾನೆ.

Kormangal 22

ಈ ವೇಳೆ ಮೋನಿಕಾ ಅಂಡ್ ಗ್ಯಾಂಗ್ ಶಿವನನ್ನ ಕಿಡ್ನ್ಯಾಪ್ ಮಾಡಿ ಮೈಮೇಲಿದ್ದ ಚಿನ್ನಾಭರಣ ದೋಚಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದ್ರೆ ಪ್ರಿಯತಮೆ ಶಿವನಿಗೆ 5 ಲಕ್ಷ ರೂ. ಕೊಡೋಕೆ ಒಪ್ಪಿಸಿದ್ದಳು. ಎಟಿಎಂ ಕಾರ್ಡ್ ಬೆಂಗಳೂರಿನ ಮೆಜೆಸ್ಟಿಕ್ ಅಡ್ರೆಸ್‌ಗೆ ಕೋರಿಯರ್ ಮಾಡಿಸಿಕೊಡು ಕೋರಮಂಗಲಕ್ಕೆ ಹಣ ಡ್ರಾ ಮಾಡಿಕೊಳ್ಳೋಕೆ ಬಂದಿದ್ದರು. ಆದ್ರೆ ಕೋರಮಂಗಲದ ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಆರೋಪಿಗಳ ಮಧ್ಯೆ ಗಲಾಟೆ ನಡೆದಿದೆ. ಇದೇ ವೇಳೆ ರೌಂಡ್ಸ್‌ನಲ್ಲಿದ್ದ ಪಿಎಸ್‌ಐ ಮಾದೇಶ್‌ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್ ಮತ್ತು ಸುಲಿಗೆ ಪ್ರಕರಣ ಬೆಳಕಿಗೆ ಬಂದಿದೆ.

Kormangal

ಪ್ರಿಯತಮೆ ಮೋನಿಕಾಳೇ ಕಿಂಗ್ ಪಿನ್ ಅನ್ನೋದನ್ನು ಕೇಳಿ ಪ್ರಿಯಕರ ಶಿವ ಶಾಕ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಆರೋಪಿಗಳಾದ ಮೋನಿಕಾ, ಹರೀಶ್, ಹರಿಕೃಷ್ಣ, ನರೇಶ್, ರಾಜ್ ಕುಮಾರ್, ನರಸಿಂಹ, ಅಂಜನೀಲ್‌ನನ್ನ ಬಂಧಿಸಿದ್ದಾರೆ. ಬಂಧಿತ ಏಳು ಮಂದಿಯೂ ಆಂಧ್ರದ ನೆಲ್ಲೂರು ಮೂಲದವರು ಎಂದು ತಿಳಿಸಿದ್ದಾರೆ.

ಸೌತ್ ಈಸ್ಟ್ ಡಿಸಿಪಿ ಹೇಳಿದ್ದೇನು?
ಇನ್ನೂ ಪ್ರಕರಣದ ಕುರಿತು ಮಾತನಾಡಿದ ಸೌತ್ ಈಸ್ಟ್ ಡಿಸಿಪಿ ಸಾರಾ ಫಾತಿಮಾ, ಪ್ರಕರಣದಲ್ಲಿ ಯುವತಿ ಸೇರಿ 7 ಆರೋಪಿಗಳ ಬಂಧನವಾಗಿದೆ. 7 ಜನ ಆರೋಪಿಗಳಲ್ಲಿ ಇಬ್ಬರ ಮೇಲೆ 5ಕ್ಕೂ ಹೆಚ್ಚು ಪ್ರಕರಣಗಳಿವೆ. ದೂರುದಾರ, ಆರೋಪಿ ಯುವತಿಗೆ 3-4 ವರ್ಷದಿಂದ ಪರಿಚಯದಲ್ಲಿದ್ದ, ನೆಲ್ಲೂರಿನಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ. ಕೋರಮಂಗಲ ಎಸ್‌ಐ ರಾತ್ರಿ ರೌಂಡ್ಸ್‌ನಲ್ಲಿದ್ದಾ ಗ ಎಟಿಎಂ ಬಳಿ ಆರೋಪಿಗಳ ನಡುವೆ ಗಲಾಟೆ ನಡೆದಿದೆ. 3 ಜನ ಕಿತ್ತಾಡಿಕೊಳ್ಳೋದು ಕಂಡು ಬಂದಾಗ ಅದನ್ನ ಗಮನಿಸಿದ್ದಾರೆ. ಅವರ ಮೇಲೆ ಸಂದೇಹ ಬಂದು ಸ್ಟೇಷನ್‌ಗೆ ಕರೆದುಕೊಂಡು ಬಂದಿದ್ದಾರೆ. ವಿಚಾರಣೆ ಮಾಡಿದಾಗ ಕಿಡ್ನಾಪ್ ಆಗಿರೋದು ಬೆಳಕಿಗೆ ಬಂದಿದೆ. ಹಣ ಡ್ರಾ ಮಾಡ್ತಾ ಇರೋದು ಸುಲಿಗೆ ಹಣ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.

ಆರೋಪಿ ಮೋನಿಕಾ ಅವಳೇ ಶಿವನನ್ನ ಆಂಧ್ರದಿಂದ ಹಿಂದೂಪುರದ ಬಳಿಯ ಪೆನುಕೊಂಡ ಪಾವಗಡ ಹತ್ರ ಕರೆಸಿದ್ದಾಳೆ. ಬಳಿಕ 4 ಆರೋಪಿಗಳು ಕಿಡ್ನ್ಯಾಪ್‌ ಮಾಡಿ ಪಾವಗಡದ ಒಂದು ಖಾಸಗಿ ಹೋಟೇಲ್‌ನಲ್ಲಿ 3 ದಿನ ಕೂಡಿ ಹಾಕಿದ್ದಾರೆ. ಅವನ ಬಳಿ ಇರುವ ಚಿನ್ನಾಭರಣ ಪಡೆದು ಅಡವಿಟ್ಟಿದ್ದಾರೆ. ಮತ್ತೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ದೂರುದಾರ ತನ್ನ ಸ್ನೇಹಿತರಿಂದ ಬ್ಯಾಂಕ್‌ಗೆ 5 ಲಕ್ಷ ಹಾಕಿಸಿಕೊಂಡಿದ್ದಾನೆ. ನಂತರ ಡೆಬಿಟ್ ಕಾರ್ಡ್ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಅದನ್ನ ಬೆಂಗಳೂರು ಅಡ್ರೆಸ್‌ಗೆ ಕೋರಿಯರ್ ಮಾಡಿ ಎಂದು ಹೇಳಿದ್ದಾನೆ. ಹಣವನ್ನ ವಿತ್‌ಡ್ರಾ ಮಾಡುವ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. 5 ಲಕ್ಷ ರೂ. ನೀಡಿರುವುದಾಗಿ ದೂರುದಾರ ಹೇಳಿದ್ದಾನೆ, ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ತಿಳಿದಿದ್ದಾರೆ.

Share This Article