– 6 ಕೋಟಿ ಹಣಕ್ಕಾಗಿ ಕಿಡ್ನ್ಯಾಪ್ ಆಗಿದ್ದ ವೈದ್ಯ
ಬಳ್ಳಾರಿ: ಜಿಲ್ಲಾಸ್ಪತ್ರೆಯ ವೈದ್ಯರನ್ನು (Docter Kidnap) ಅಪಹರಿಸಿ 6 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಅಪಹರಣಕಾರರೇ ಬಸ್ ಚಾರ್ಜ್‌ಗೆ ಅಂತ ವೈದ್ಯನಿಗೆ 300 ರೂ. ಕೊಟ್ಟು ವಾಪಸ್ ಮನೆಗೆ ಕಳುಹಿಸಿದ್ದಾರೆ.
Advertisement
ಹೌದು, ಶನಿವಾರ ಬೆಳಗ್ಗೆ ಎಂದಿನಂತೆ ವೈದ್ಯ ಸುನೀಲ್ ವಾಕಿಂಗ್ ಮಾಡ್ತಿದ್ದರು. ಈ ವೇಳೆ ಏಕಾಏಕಿ ಸತ್ಯನಾರಾಯಣ ಪೇಟೆಯ ಒಂದನೇ ಕ್ರಾಸ್ ಬಳಿ ಕಾರಿನಲ್ಲಿ ಬಂದಿದ್ದ ನಾಲ್ವರು, ಹಲ್ಲೆ ಮಾಡಿ ಚಾರ್ಜ್‌ಗೆ ಮಾಡಿದ್ದರು. ಸುನೀಲ್ ಸಹೋದರ ವೇಣುಗೋಪಾಲಗೆ ಕರೆ ಮಾಡಿ 2 ಕೋಟಿ ರೂ., 3 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿ ಸೇರಿ 5 ಕೋಟಿ ರೂ. ಬೇಡಿಕೆಯಿಟ್ಟು, ಊರೂರು ಸುತ್ತಿಸಿ ಚೆನ್ನಾಗಿ ಥಳಿಸಿದ್ದರು.ಇದನ್ನೂ ಓದಿ: ಸಿಎಂ ಆಗಿರೋರಿಗೆ ಮೂರ‍್ನಾಲ್ಕು ಸೈಟ್ ಯಾವ ಲೆಕ್ಕ – ಮುಡಾ ಕೇಸ್ ಬಗ್ಗೆ ಕೆ.ಎನ್ ರಾಜಣ್ಣ ರಿಯಾಕ್ಷನ್
Advertisement
Advertisement
ಕೂಡಲೇ ಗಾಬರಿಗೊಂಡು ವೇಣುಗೋಪಾಲ ಬಳ್ಳಾರಿ ಎಸ್ಪಿ ಡಾ. ಶೋಭಾರಾಣಿ ಅವರಿಗೆ ಕರೆ ಮಾಡಿ, ಮಾಹಿತಿ ಕೊಟ್ಟಿದ್ದರು. ಬಳಿಕ ಎಸ್ಪಿ ಅಕ್ಕಪಕ್ಕದ ಜಿಲ್ಲೆಯ ಪೊಲೀಸರಿಗೂ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸರು ಅಲರ್ಟ್ ಆಗಿದ್ದಾರೆ ಎನ್ನುವ ಮಾಹಿತಿ ಆರೋಪಿಗಳಿಗೆ ಗೊತ್ತಾದ ಕೂಡಲೇ ಸಿರಗುಪ್ಪ ತಾಲೂಕಿನ ಸೋಮಸಮುದ್ರದ ಜಮೀನೊಂದರಲ್ಲಿ ಬಿಟ್ಟು ಹೋಗಿದ್ದಾರೆ. ಆದರೆ ಸಂಜೆಯವರೆಗೆ ಕಾದು ನೋಡಿದರೂ ನಮಗೆ ಇನ್ನೇನೂ ಸಿಗುವುದಿಲ್ಲ ಎಂದು ತಿಳಿದು ಆತನ ಕೈಗೆ 300 ರೂ. ಕೊಟ್ಟು ಸುರಕ್ಷಿತವಾಗಿ ಮನೆಗೆ ಹೋಗು ಎಂದು ಹೇಳಿದ್ದಾರೆ.
Advertisement
ಈ ಕುರಿತು ವೈದ್ಯ ಸುನೀಲ್ ಮಾತನಾಡಿ, ಅಪಹರಣದ ವೇಳೆ ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ ಹಾಕಿದ್ದರು. ಅಲ್ಲದೇ ಕಿಡ್ನ್ಯಾಪ್ ಮಾಡುವಾಗಲೇ ಹಲ್ಲೆ ಮಾಡಿದ್ದರಿಂದ ಗಾಬರಿಗೊಂಡಿದ್ದೆ. ಆದರೆ ಅವರ ಕುಟುಂಬಸ್ಥರಿಂದ ಯಾವುದೇ ರೆಸ್ಪಾನ್ಸ್ ಬರದಿದ್ದಾಗ ಸ್ವತಃ ಕಿಡ್ನ್ಯಾಪರ್ಸ್ ಭೀತಿಗೆ ಒಳಗಾಗಿದ್ದರು. ಜೊತೆಗೆ ಪೊಲೀಸರಿಗೆ ಮಾಹಿತಿ ತಿಳಿದಿದ್ದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಬಿಟ್ಟು ಬೇರೆಡೆ ಹೋಗಲು ಸಾಧ್ಯವಾಗದೇ ಕೊನೆಗೆ ಜಮೀನೊಂದರಲ್ಲಿ ಬಿಟ್ಟು ಹೋಗಿದ್ದಾರೆ ಎಂದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಸ್ಪಿ ಶೋಭಾರಾಣಿ, ಡಾ ಸುನೀಲ್ ಅವರು ಸ್ವಲ್ಪ ಗಾಬರಿಯಲ್ಲಿದ್ದರು. ಹೀಗಾಗಿ ನಾವು ಹೆಚ್ಚಿನ ವಿಚಾರಣೆ ಮಾಡಿಲ್ಲ. ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ಕೊಡಿಸಿದ್ದು, ಮಾಹಿತಿ ಪಡೆದು ತನಿಖೆ ಮಾಡುತ್ತೇವೆ. ಸುನೀಲ್ ಸಹೋದರ ವೇಣು ಮದ್ಯ ಮಾರಾಟಗಾರರ ಅಧ್ಯಕ್ಷರಿದ್ದಾರೆ. ಇದಕ್ಕೂ ಅದಕ್ಕೆ ಏನಾದರೂ ಲಿಂಕ್ ಇದ್ಯಾ? ಎನ್ನುವುದನ್ನು ಪರಿಶೀಲಿಸ್ತೇವೆ ಎಂದು ಹೇಳಿದರು.
ಇನ್ನೂ ವೈದ್ಯರನ್ನು ಅಪಹರಿಸಿದ್ದ ಕಿಡ್ನ್ಯಾಪರ್ಸ್ ಖರ್ಚಿಗೆ ಹಣ ಕೊಟ್ಟು, ಕಳಿಸಿದ್ದಾರೆ ಎನ್ನುವ ವಿಚಾರ ಇದೀಗ ಇಡೀ ಪ್ರಕರಣದಲ್ಲಿ ಅನುಮಾನಗಳನ್ನು ಹುಟ್ಟಿಸಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಳ್ಳಾರಿ ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.ಇದನ್ನೂ ಓದಿ: ಹರಿಹರ ಶಾಸಕರಿಗೆ ತಲೆ ಕೆಟ್ಟಿರಬೇಕು – ಬಿ.ಪಿ ಹರೀಶ್ ವಿರುದ್ಧ ಎಸ್.ಎಸ್ ಮಲ್ಲಿಕಾರ್ಜುನ್ ಕಿಡಿ