ನವದೆಹಲಿ: ಕಳೆದ ವಾರ ಕಿಡ್ನಾಪ್ ಆಗಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುರುವಾರ ರಾತ್ರಿ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದ್ದಾನೆ.
ಮೃತ ವಿದ್ಯಾರ್ಥಿಯನ್ನು 21 ವರ್ಷದ ಆಯುಷ್ ನೌಟಿಯಾಲ್ ಎಂಬುದಾಗಿ ಗುರುತಿಸಲಾಗಿದೆ. ಈತ ದೆಹಲಿಯ ರಾಮ್ ಲಾಲ್ ಆನಂದ್ ಕಾಲೇಜಿನಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿಯಾಗಿದ್ದನು.
Advertisement
ಏನಿದು ಘಟನೆ?: ಆಯುಷ್ ಕಳೆದ ವಾರ ದ್ವಾರಕಾದಲ್ಲಿರೋ ಕಾಲೇಜಿನಿಂದ ತನ್ನ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ಅಪಹರಣವಾಗಿದ್ದನು. ಅಲ್ಲದೇ ಬಳಿಕ ದುಷ್ಕರ್ಮಿಗಳು 50 ಲಕ್ಷ ರೂ. ನೀಡುವಂತೆ ಆಯುಷ್ ಪೋಷಕರಿಗೆ ಬೇಡಿಕೆ ಇಟ್ಟಿದ್ದರು.
Advertisement
Advertisement
ಇತ್ತ ಕಾಲೇಜಿಗೆಂದು ತೆರಳಿದ ತಮ್ಮ ಮಗ ವಾಪಾಸ್ಸಾಗದಿರುವುದರಿಂದ ಆತಂಕಗೊಂಡ ಗುರುವಾರ ಆಯುಷ್ ಪೋಷಕರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ದೂರಿನಲ್ಲಿ ಮಗ ನಾಪತ್ತೆಯಾಗಿರುವುದರಿಂದ ನಮಗೆ ಆತಂಕವಾಗಿದೆ. ಮಗನಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಆತನ ತಂದೆಯ ಮೊಬೈಲ್ ಗೆ ಮೆಸೇಜ್ ಬಂದಿದೆ. ಅದರಲ್ಲಿ ಆಯುಷ್ ಮೇಲೆ ಹಲ್ಲೆ ನಡೆಸಿರುವ ಫೋಟೋ ಹಾಗೂ 50 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂಬುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
Advertisement
ಕಿಡ್ನಾಪರ್ಸ್ ಬೇಡಿಕೆ ಒಪ್ಪಿದ ಆಯುಷ್ ಪೋಷಕರು 10 ಲಕ್ಷ ರೂ. ನೀಡುತ್ತೇವೆ. ನಮ್ಮ ಮಗನನ್ನು ನಮಗೆ ಒಪ್ಪಿಸಿ ಅಂತ ಪರಿಪರಿಯಾಗಿ ಕೇಳಿದ್ದಾರೆ. ಆದ್ರೆ ಗುರುವಾರ ರಾತ್ರಿ ಆಯುಷ್ ದ್ವಾರಕಾದ ಚರಂಡಿಯಲ್ಲಿ ಕೊಲೆಯಾಗಿ ಪತ್ತೆಯಾಗಿದ್ದಾನೆ ಎಂಬುದಾಗಿ ವರದಿಯಾಗಿದೆ.
ಪೊಲೀಸರ ವಿರುದ್ಧ ಪೋಷಕರು ಕಿಡಿ: ಮಗ ಕಿಡ್ನಾಪ್ ಆದ ಬಳಿಕ ಕೂಡಲೇ ನಾವು ಪೊಲೀಸರಿಗೆ ದೂರು ನಿಡಿದ್ದೇವೆ. ಆದ್ರೆ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಗನನ್ನು ಹುಡುಕುವಲ್ಲಿ ನಿರಾಕರಿಸಿದ್ದಾರೆ. ನಾವು ಕೈಯಲ್ಲಿ ಹಣ ಹಿಡಿದುಕೊಂಡು ಕಿಡ್ನಾಪರ್ಸ್ ಇರೋ ಪ್ರದೇಶವೆಲ್ಲ ಹುಡುಕಾಡಿದ್ದೇವೆ. ಆದ್ರೆ ಮಗ ಕಿಡ್ನಾಪ್ ಆಗಿ 2 ದಿನವಾದ್ರೂ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಆಯುಷ್ ಕೊಲೆಯಾಗಿ ಪತ್ತೆಯಾಗಿದ್ದಾನೆ ಅಂತ ಆತನ ಸಂಬಂಧಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.