ಕಿಡ್ನಾಪ್ ಕೇಸ್- ಸಂತ್ರಸ್ತೆಯ ರಕ್ಷಿಸಿ ಬೆಂಗಳೂರಿಗೆ ಕರೆತರುತ್ತಿರುವ ಎಸ್‍ಐಟಿ

Public TV
1 Min Read
KIDNAP WOMAN

ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕಿಡ್ನಾಪ್ ಮಾಡಿದ್ದಾರೆ ಎನ್ನಲಾದ ಮೈಸೂರಿನ ಕೆ.ಆರ್‌ ನಗರದ ಸಂತ್ರಸ್ತೆಯನ್ನು (K.R Nagar Victim Woman) ಇದೀಗ ರಕ್ಷಿಸಲಾಗಿದೆ.

ಮೈಸೂರು ಜಿಲ್ಲೆ ಹುಣಸೂರು ಬಳಿಯ ರೇವಣ್ಣ ಆಪ್ತನ ಕಾಳೇನಹಳ್ಳಿ ತೋಟದ ಮನೆಯಿಂದ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಎಸ್‍ಪಿ ಸೀಮಾ ಲಾಠ್ಕರ್ ತಂಡದಿಂದ ಮಹಿಳೆಯನ್ನು ರಕ್ಷಿಸಲಾಗಿದ್ದು, ಸದ್ಯ ಎಸ್‍ಐಟಿ ತಂಡ ಬೆಂಗಳೂರಿಗೆ ಕರೆತರುತ್ತಿದೆ.

ಪ್ರಕರಣ ಸಂಬಂಧ ಹೆಚ್.ಡಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡುವೆಯೇ ಕೆ.ಆರ್.ನಗರದ ಮಹಿಳೆಯ ಹುಡುಕಾಟ ಚುರುಕಾಗಿತ್ತು. ಮಹಿಳೆಯನ್ನು ಅಪಹರಿಸಿ ಎಲ್ಲಿ ಇಟ್ಟಿರಬಹುದು ಎಂಬ ವಿಚಾರದಲ್ಲಿ ತನಿಖೆ ಚುರುಕುಗೊಂಡಿತ್ತು. ಇದೀಗ ಸಂತ್ರಸ್ತೆ ಹಲ್ಲೆಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿವರೆಗೂ ಶಿರಾದಲ್ಲಿದ್ದು, ಅಲ್ಲಿಂದ ಹಣಸೂರಿಗೆ ಶಿಫ್ಟ್ ಮಾಡಲಾಗಿದೆ. ಇಂದು ಎಸ್‌ಐಟಿ ಅಧಿಕಾರಿಗಳು ತೋಟದ ಮನೆಗೆ ದಾಳಿ ಮಾಡುತ್ತಿದ್ದಂತೆಯೇ ಆರೋಪಿಗಳು ಎಸ್ಕೇಪ್‌ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article