ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೆ ಚಿತ್ರದಲ್ಲಿ ಅಭಿನಯಿಸ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಬಹಳ ವರ್ಷದಿಂದ ಕಾಡುತ್ತಲೇ ಇದೆ. ಈ ಪ್ರಶ್ನೆಗೆ ಸುದೀಪ್ ಈಗ ಜಾಣ್ಮೆಯ ಉತ್ತರ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಫೆಸ್ಟ್ ನಲ್ಲಿ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು, ಬಾಸ್ ಸ್ಟ್ರೇಟ್ ಆಗಿ ಕೇಳ್ತಾ ಇದ್ದೀನಿ, ದರ್ಶನ್ ಅವರನ್ನ ನಿಮ್ಮನ್ನ ಒಂದೇ ಮೂವಿಯಲ್ಲಿ ನೋಡೋಕೆ ತುಂಬಾ ಆಸೆ ಇದೆ ಇಸ್ ಇಟ್ ಪಾಸಿಬಲ್ ಎಂದು ಪ್ರಶ್ನೆ ಹಾಕಿದ್ರು.
Advertisement
ಈ ಪ್ರಶ್ನೆಗೆ ಸುದೀಪ್, ನಾನು ಚಿಕ್ಕವನಾಗಿರಬೇಕಾದ್ರೆ ನನಗೆ ನಮ್ಮಮ್ಮ ಏನೂ ಇಲ್ಲ ಅಂತ ಹೇಳೇ ಇಲ್ಲ. ನಾನು ಏನ್ ಕೇಳಿದ್ರೂ ನಮ್ ತಾಯಿ ಕೊಡ್ಸೋರು. ಆಗ ನಮ್ಮ ತಾಯಿಗೆ , ಅಮ್ಮ ಸೂರ್ಯ, ಚಂದ್ರ ಯಾಕೆ ಒಟ್ಟಿಗೆ ಕಾಣಿಸಿಕೊಳ್ಳೊಲ್ಲ ಅಂತ ಕೇಳ್ದೆ. ಆವಾಗ ನಮ್ ತಾಯಿ ಹೇಳಿದ್ರು, ಏನ್ಮಾಡ್ಲಿ ಕಂದಾ, ಸೂರ್ಯ ಬಂದಾಗ ಬೆಳಕಾಗುತ್ತೆ, ಚಂದ್ರ ಬಂದಾಗ ಕತ್ತಲಾಗುತ್ತೆ. ಅದು ಅಲ್ಲೇ ಸರಿ, ಇದು ಇಲ್ಲೇ ಸರಿ ಅಂತ ಥ್ಯಾಂಕ್ಯೂ ಹೇಳಿ ಮಾತು ಮುಗಿಸಿದ್ರು.
Advertisement
ಈ ಫೆಸ್ಟ್ ನಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್, ಸಂಗೀತ ಗಾಯಕ ವಿಜಯ್ ಪ್ರಕಾಶ್, ಸಂಸದ ಡಿಕೆ ಸುರೇಶ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಮತ್ತು ಸುದೀಪ್ ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.