`ಕಾಂತಾರ’ (Kantara Film) ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ರಿಷಬ್ ಶೆಟ್ಟಿ(Rishab Shetty) ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪರಭಾಷಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಈ ಸಿನಿಮಾವನ್ನ ಇದೀಗ ಕಿಚ್ಚ ಸುದೀಪ್ ಕೂಡ ನೋಡಿದ್ದಾರೆ. ಸಿನಿಮಾ ಬಗ್ಗೆ ಪತ್ರವನ್ನ ಕೂಡ ಬರೆದಿದ್ದಾರೆ.
View this post on Instagram
ರಿಷಬ್ ಮತ್ತು ಸಪ್ತಮಿ ಗೌಡ (Saptami Gowda) ನಟನೆಯ `ಕಾಂತಾರಾ’ ದೈವಾರಾಧನೆಯ ಕುರಿತ ಕಥೆಯಾಗಿದೆ. ಈ ಚೆಂದದ ಕಥೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಎಲ್ಲಾ ಕಡೆ `ಕಾಂತಾರ’ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಪ್ಯಾನ್ ಇಂಡಿಯಾ ಚಿತ್ರವನ್ನಾಗಿ ಮಾಡಲು ಪ್ರೇಕ್ಷಕರಿಂದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈ ಬೆನ್ನಲ್ಲೇ ಕಿಚ್ಚ ಸುದೀಪ್ (Kiccha Sudeep) ಕೂಡ ಈ ಚಿತ್ರ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.
KAANTHARA
❤️❤️????@shetty_rishab @hombalefilms @AJANEESHB pic.twitter.com/cBcVFZsi71
— Kichcha Sudeepa (@KicchaSudeep) October 8, 2022
ನಾನು ಫೆಂಟಾಸ್ಟಿಕ್ ಎನಿಸುವ ಸಿನಿಮಾಗಳನ್ನು ನೋಡುತ್ತೇನೆ. ಆದರೆ ಅಪರೂಪಕ್ಕೆ ನಮ್ಮನ್ನು ಮಂತ್ರಮುಗ್ಧಗೊಳಿಸುವ ಸಿನಿಮಾ ನೋಡುತ್ತೇವೆ. ಅಂತಹ ಒಂದು ಸಿನಿಮಾ ಆಗಿರುವ ಕಾಂತಾರ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ. ರಿಷಬ್ ಫ್ಯಾಬುಲಸ್ ಆಗಿ ನಟಿಸಿದ್ದು ಸಂಪೂರ್ಣ ಶ್ರಮ ಹಾಕಿದ್ದಾರೆ. ಸುಮ್ಮನೆ ಆರಾಮವಾಗಿ ಕುಳಿತು ಅಚ್ಚರಿಪಟ್ಟು ವ್ಯಕ್ತಿಯೊಬ್ಬರು ಈ ರೀತಿಯಾಗಿ ಏನಾದರೂ ಹೇಗೆ ಯೋಚಿಸಲು ಸಾಧ್ಯ ಎಂದು ಆಲೋಚಿಸುವುದಷ್ಟೇ ನಿಮ್ಮ ಕೆಲಸ.
ಈ ಕಥೆ ಪೇಪರ್ನಲ್ಲಿದ್ದರೆ ಅರ್ಧ ಕೂಡಾ ಮುಗಿಯದು. ಕ್ಲೈಮ್ಯಾಕ್ಸ್ ಪೇಪರ್ನಲ್ಲಿದ್ದರೆ ಅದೊಂದು ಸಾಮಾನ್ಯ ಎಂಡಿಂಗ್ ಆಗಿರುತ್ತಿತ್ತು. ಇದು ನಿರ್ದೇಶಕರ ದೃಷ್ಟಿ. ನಿರ್ದೇಶಕ ಕಲ್ಪಿಸಿಕೊಂಡಂತೆ ಸಿನಿಮಾ ಸಿದ್ಧವಾಗಿದೆ. ಅವರ ದೃಷ್ಟಿಕೋನದಲ್ಲಿ ಕಂಡಂತೆ ಸಿನಿಮಾ ಬಂದಿದೆ. ಇದು ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ. ಇಂಥ ಕಥೆಯಲ್ಲಿ ನಂಬಿಕೆ ಇರಿಸಿದ ತಂಡಕ್ಕೆ ಮೆಚ್ಚುಗೆ. ಈ ಸಿನಿಮಾವನ್ನು ಇಷ್ಟೊಂದು ಪರಿಣಾಮಕಾರಿಯಾಗಿ ನಿರ್ಮಿಸಿದ ಈ ಕ್ರಿಯಾಶೀಲ ತಂಡಕ್ಕೆ ದೊಡ್ಡ ಅಪ್ಪುಗೆ. ಅಜನೀತ್ ಹ್ಯಾಟ್ಸಾಫ್. ನೀವು ಮಾಸ್ಟರ್. ಹೊಂಬಾಳೆ ಫಿಲ್ಮ್ಸ್ ಕಂಗ್ರಾಟ್ಸ್. ಇಂಥದ್ದರಲ್ಲಿ ನಂಬಿಕೆ ಇಟ್ಟು ಜೊತೆ ನಿಂತದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಇಡೀ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ʻಕಾಂತಾರʼ ಸಿನಿಮಾ ಮತ್ತು ರಿಷಬ್ ನಟನೆ ನೋಡಿ ಮನಸಾರೆ ಸುದೀಪ್ ಹೊಗಳಿದ್ದಾರೆ. ಇದನ್ನೂ ಓದಿ:ಹಾಲಿವುಡ್ಗೆ ಯಶ್ ಎಂಟ್ರಿ? ವಿಶ್ವದ ಟಾಪ್ ರೇಸರ್ ಲೇವಿಸ್ ಹ್ಯಾಮಿಲ್ಟನ್ ಭೇಟಿ
View this post on Instagram
ಸುದೀಪ್ಗಾಗಿ ಹೊಂಬಾಳೆ ಬ್ಯಾನರ್( Homabale Films) ಹೊಸ ಸಿನಿಮಾ ಮಾಡಲು ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಧಿಕೃತ ಅಪ್ಡೇಟ್ಗಾಗಿ ಕಾದುನೋಡಬೇಕಿದೆ.