ಅಭಿಮಾನಿ ಬಳಗವೇ ನಮ್ಮ ಆನೆ ಬಲ – ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಕಿಚ್ಚ ಸುದೀಪ್‌ ಮನವಿ

Public TV
1 Min Read
Kichcha Sudeepa

ಬೆಳಗಾವಿ: ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಪರ ನಟ ಕಿಚ್ಚ ಸುದೀಪ್‌ (Kichcha Sudeepa) ಅದ್ಧೂರಿ ಪ್ರಚಾರ ನಡೆಸಿದರು. ನಟ ಕಿಚ್ಚ ಸುದೀಪ್‌ ನೋಡಲು ಅಭಿಮಾನಿಗಳು ರಸ್ತೆಯುದ್ಧಕ್ಕೂ ಮುಗಿಬೀಳುತ್ತಿದ್ದರು.  ಕಿತ್ತೂರು ಕ್ಷೇತ್ರದ (Kittur Constituency) ನೇಸರಗಿ ಗ್ರಾಮದಲ್ಲಿ ರೋಡ್‌ಶೋ (Sudeepa RoadShow) ಬಳಿಕ ಮಾತನಾಡಿದ ಕಿಚ್ಚ ಸುದೀಪ್‌, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಪ್ರಚಾರಕ್ಕೆ ಬಂದಿರುವುದು ನನಗೂ ಖುಷಿಯಿದೆ. ಸಲವೂ ಅವರಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Kichcha Sudeepa 1

ಕಿತ್ತೂರು ರಾಣಿ ಚೆನ್ನಮ್ಮನ ಊರಿಗೆ ಪ್ರೀತಿಯಿಂದ ಸ್ವಾಗತಿಸಿದ್ದಕ್ಕೆ ಥ್ಯಾಂಕ್ ಯೂ. ಜನರು, ಅಭಿಮಾನಿ ಬಳಗವೇ ನಮ್ಮ ಆನೆ ಬಲ. ನೀವು ಪ್ರೀತಿ ತೋರಿದ ರೀತಿ ನಾನು ಯಾವತ್ತೂ ಮರೆಯಲ್ಲ. ಕಿತ್ತೂರು ಅಭಿವೃದ್ದಿಯಲ್ಲಿ 5ನೇ ಸ್ಥಾನದಲ್ಲಿದೆ ಅಂದ್ರೆ ಅದು ಸುಮ್ನೆ ಅಲ್ಲ. ಅಭಿವೃದ್ಧಿ ಮಾಡಲು ಸಾಕಷ್ಟು ಅಡೆತಡೆಗಳು ಇರುತ್ತವೆ, ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮಹಾಂತೇಶ ದೊಡ್ಡಗೌಡರ ಅವರ ಪ್ರಚಾರಕ್ಕೆ ಬಂದಿದ್ದು ನನಗೂ ಖುಷಿಯಿದೆ. ಈ ಸಲವೂ ಅವರಿಗೇ ಬೆಂಬಲಿಸಿ ಎಂದು ಕೋರಿದರು.

Kichcha Sudeepa 2

ಇದೇ ವೇಳೆ ʻಗೆದ್ದೆ ಗೆಲ್ಲುವೇ ಒಂದು ದಿನ ಗೆಲ್ಲಲೇಬೇಕು ಒಳ್ಳೆತನʼಎನ್ನುವ ʻಸ್ವಾತಿಮುತ್ತುʼ ಚಿತ್ರದ ಗೀತೆಯ ಸಾಲನ್ನು ಹೇಳುತ್ತಾ ನಿಮ್ಮೆಲ್ಲರಲ್ಲೂ ಒಂದು ಒಳ್ಳೆತನವಿದೆ. ಆ ಒಳ್ಳೆತನ ಸದಾ ಗೆಲ್ಲಲಿ ಎಂದು ನುಡಿದರು.

Share This Article