ರಾಹುಲ್ ದ್ರಾವಿಡ್, ಕುಂಬ್ಳೆ ಬಯೋಪಿಕ್‍ನಲ್ಲಿ ನಟಿಸಲು ಇಷ್ಟ ಅಂದ್ರು ಕಿಚ್ಚ

Public TV
1 Min Read
Sudeep

ಮುಂಬೈ: ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಚಿತ್ರ ಪ್ರಚಾರ ಕಾರ್ಯದಲ್ಲಿ ಸುದೀಪ್ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಟ್ವಿಟ್ಟರಿನ ಭಾರತದ ಕೇಂದ್ರ ಕಚೇರಿಯ ಬ್ಲೂ ರೂಮ್‍ನಿಂದ ಲೈವ್‍ಗೆ ಬಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಅಂದಹಾಗೇ ಮುಂಬೈನಲ್ಲಿರುವ ಟ್ವಿಟ್ಟರಿನ ಕೇಂದ್ರ ಕಚೇರಿಯಲ್ಲಿರುವ ‘ಬ್ಲೂ ರೂಮ್’ ನಿಂದ ಲೈವ್ ಬಂದ ಕರ್ನಾಟಕದ ಮೊದಲ ನಟ ಎಂಬ ಹೆಗ್ಗಳಿಕೆಯನ್ನು ನಟ ಕಿಚ್ಚ ಸುದೀಪ್ ಅವರು ಇದೇ ಸಂದರ್ಭದಲ್ಲಿ ಪಡೆದುಕೊಂಡರು. #AskPailwaan ಮೂಲಕ ಅಭಿಮಾನಿಗಳು ಸುದೀಪ್ ಅವರಿಗೆ ತಮ್ಮ ಪ್ರಶ್ನೆಗಳನ್ನು ಮುಂದಿಟ್ಟರು.

ಸಂದರ್ಶನದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಉತ್ತರ ನೀಡಿದರು. ಈ ವೇಳೆ ಅಭಿಮಾನಿಯೊಬ್ಬರು ಕ್ರಿಕೆಟ್ ಬಗ್ಗೆ ಕೇಳಿದ ಪ್ರಶ್ನೆಗೆ ಆಸ್ತಕಿ ಕೆರಳಿಸುವ ಉತ್ತರ ನೀಡಿದ ಸುದೀಪ್, ನನಗೆ ಕ್ರಿಕೆಟ್‍ನ ಇಷ್ಟ ಆದ್ದರಿಂದ ಎಲ್ಲಾ ಆಟಗಾರರ ಬಯೋಪಿಕ್‍ನಲ್ಲಿ ನಟಿಸಲು ಇಷ್ಟ ಪಡುತ್ತೆನೆ. ಆದರೆ ನನ್ನ ಎತ್ತರ ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ ಅವರಿಗೆ ಸೂಕ್ತವಾಗಿದೆ. ಆದ್ದರಿಂದ ನಾನು ಅವರ ಬಯೋಪಿಕ್ ನಟಿಸಲು ಇಷ್ಟ ಪಡುತ್ತೇನೆ ಎಂದರು.

ಫೈಲ್ವಾನ್ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕ್ರೀಡೆ ದೇಶದ ಎಲ್ಲ ಕಡೆಯೂ ಒಂದೇ ಆಗಿರುವುದರಿಂದ ಎಲ್ಲರಿಗೂ ಸಿನಿಮಾದ ಕಥೆ ಅನ್ವಯವಾಗುತ್ತದೆ. ಆದ್ದರಿಂದಲೇ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ. ಮೊದಲು ನಾನು ನಿರ್ದೇಶಕರಿಗಾಗಿ ಸಿನಿಮಾ ಮಾಡಲು ಮನಸ್ಸು ಮಾಡಿದ್ದೆ. ಆದರೆ ಆ ಬಳಿಕ ಪೈಲ್ವಾನ್ ನಮ್ಮನ್ನು ಈ ಮಟ್ಟಕ್ಕೆ ತಯಾರಿ ನಡೆಸಲು ಕಾರಣವಾಯಿತು ಎಂದರು.

ಈ ಸಂದರ್ಭದಲ್ಲಿ ಕಿಚ್ಚನ ಹುಟ್ಟುಹಬ್ಬದ ಸಂಭ್ರಮಕ್ಕೆ ಒಂದೇ ಡಿಪಿ ಹಾಕುವಂತೆ ಹ್ಯಾಶ್ ಟ್ಯಾಗ್ ಕೇವಲ 24 ಗಂಟೆಗಳಲ್ಲಿ 15 ಲಕ್ಷ ಟ್ವೀಟ್ ದಾಖಲೆ ಬರೆದಿದ್ದನು ಸ್ಮರಿಸಿದ ಸುದೀಪ್ ಅವರು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

Share This Article