ಬೆಂಗಳೂರು: ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಶನಿವಾರ ರಾತ್ರಿ ಮೃತಪಟ್ಟಿದ್ದರು. ತನ್ನ ಆತ್ಮೀಯರಾಗಿದ್ದ ಅಂಬರೀಶ್ ಅವರನ್ನು ಕಳೆದುಕೊಂಡು ಕಿಚ್ಚ ಸುದೀಪ್ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ರಾತ್ರಿ ಮಲಗಿರುವ ಸಮಯದಲ್ಲಿ ನಿಮಗೆ ಕೆಟ್ಟ ಕನಸು ಬಿದ್ದಾಗ ಆ ಕನಸು ಕಾಣಲು ಇಷ್ಟವಿಲ್ಲದಿದ್ದಾಗ, ನೀವು ಕೆಟ್ಟ ಕನಸು ಬರದಿರಲಿ ಎಂದು ಎಚ್ಚರವಾಗುತ್ತಿರಾ.
Advertisement
ಈಗ ಅಂಬರೀಶ್ ಅವರದ್ದು ಸಾವಿನ ಕನಸು. ಸಿನಿಮಾ ಜಗತ್ತಿಗೆ ಮತ್ತೊಂದು ದೊಡ್ಡ ಆಘಾತವಾಗಿದ್ದು, ಯಾರೂ ಬಯಸದಂತಹ ಅತ್ಯಂತ ಕೆಟ್ಟ ಘಟನೆಯೊಂದು ನಡೆದಿದೆ. ನಾವು ಮತ್ತೊಬ್ಬ ಲೆಜೆಂಡ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅಂಬರೀಶ್ ಅವರ ಜೊತೆ ನಾವು ನಾಯಕ, ಒಬ್ಬ ಪೋಷಕ, ಒಬ್ಬ ಮಾರ್ಗದರ್ಶಕ, ಹರಸಿ ಆಶೀರ್ವಾದಿಸುವ ಕೈ, ಶಕ್ತಿ, ಒಂದು ಧ್ವನಿ, ಒಂದು ಹೆಗಲು, ಒಬ್ಬ ಸ್ನೇಹಿತನನ್ನು, ಒಂದು ಸುಂದರವಾದ ಆತ್ಮವನ್ನು ಕಳೆದುಕೊಂಡಿದ್ದೇವೆ. ಇದನ್ನೂ ಓದಿ:ಬೆಂಗ್ಳೂರಿಗರೇ ಗಮನಿಸಿ, ಅಂಬಿ ಅಂತಿಮ ಯಾನ – ಯಾವ ಸಮಯಕ್ಕೆ ಏನು ನಿಗದಿಯಾಗಿದೆ?
Advertisement
— Kichcha Sudeepa (@KicchaSudeep) November 25, 2018
Advertisement
ಅಂಬಿ ಸಾವಿನ ಸುದ್ದಿ ಕೇಳಿ ಹಾಗೂ ಈ ರೀತಿ ಮಲಗಿರುವುದು ನೋಡಿ ನನ್ನ ಹೃದಯ ಛಿದ್ರವಾಗಿದೆ. ಅವರು ಹೋಗಿ ಬಂದ ಕಡೆಯಲ್ಲೆಲ್ಲಾ ಜನರ ಅವರಿಗೆ ಗೌರವಿಸುತ್ತಿದ್ದ ರತ್ನ ಅವರು. ಜೀವನದಲ್ಲಿ ಯಾವುದೇ ಎಲ್ಲೆಗಳಿಲ್ಲದೇ ರಾಜನಂತೆ ಬದುಕಿದ್ದಾರೆ. ಅಂಬಿ ದೇವರ ಮಗ ಎಂದು ಅವರನ್ನು ನೋಡಿ ನನಗೆ ಯಾವಾಗಲೂ ಎನಿಸುತ್ತಿತ್ತು. ಅಂಬಿಯಂತಹ ಮತ್ತೊಬ್ಬ ವ್ಯಕ್ತಿಯನ್ನು ನಾನು ಕಂಡಿಲ್ಲ. ಅವರು ಹೋದ ಜಾಗಗಳೆಲ್ಲಾ ಸ್ನೇಹಿತರೇ. ಅವರನ್ನು ನೋಡಿ ನೋಡದಂತೆ ಹೋದ ಒಬ್ಬ ವ್ಯಕ್ತಿಯನ್ನು ನಾನು ಇದುವರೆಗೂ ಕಂಡಿಲ್ಲ. ಅವರಿಗೆ ಎಲ್ಲ ಕ್ಷೇತ್ರದಲ್ಲೂ ಸ್ನೇಹಿತರು ಮಾತ್ರ ಇದ್ದರು ಹೊರತು ಒಬ್ಬ ವೈರಿ ಕೂಡ ಇರಲಿಲ್ಲ ಎನ್ನುವುದು ತಿಳಿದು ಬಂತು. ಇದನ್ನೂ ಓದಿ: ಕರ್ಮಭೂಮಿಯಲ್ಲಿ ಕರ್ಣನಿಗೆ ನಮನ – ಅಭಿಮಾನಿಗಳನ್ನು ನಿಯಂತ್ರಿಸಲು ವೇದಿಕೆ ಏರಿದ ಯಶ್
Advertisement
ಚಿಕ್ಕದಾಗಿ ಹೇಳಬೇಕೆಂದರೆ ಅಂಬಿ ಒಬ್ಬ ಸಂಪೂರ್ಣ ಸರಳ ಜೀವಿ ಹಾಗೂ ಕರುಣಾಮಯಿ. ಕೆಲವೊಂದು ಕಥೆಗಳು ಹಾಗೂ ಕೆಲ ವ್ಯಕ್ತಿಗಳ ಜೀವನ ಎಂದು ಕೊನೆಯಾಗಬಾರದು ಎಂದು ನಾವು ಇಷ್ಟಪಡುತ್ತೇವೆ. ಅಂಬಿ ಕೂಡ ಇದೇ ರೀತಿ ಬದುಕುತ್ತಿದ್ದರು. ಅವರು ನಮ್ಮಿಂದ ದೂರ ಆಗಿರುವುದು ಎಲ್ಲರಿಗೂ ಒಂದು ದುಃಸ್ವಪ್ನವಾಗಿದೆ.
ನಾನು ಈ ಹಿಂದೆ ನಡೆದ ಕೆಲವು ಸಂದರ್ಭಗಳನ್ನು ರಿವೈಂಡ್ ಮಾಡಲು ಇಷ್ಟಪಡುತ್ತೇನೆ. ಸಮಯವನ್ನು ಹಾಗೇ ಒಮ್ಮೆ ಹಿಂದಕ್ಕೆ ತಿರುಗಿಸಬೇಕು. ನನ್ನ ಸಿನಿ ಬದುಕಿನಲ್ಲಿ ನಾನು ಮೊಟ್ಟ ಮೊದಲ ಬಾರಿ ಕ್ಯಾಮೆರಾ ಮುಂದೆ ನಿಂತಾಗ ನಾನು ಅಂಬಿ ಮಾಮನ ಕಾಲಿಗೆ ಬಿದ್ದ ಆ ಕ್ಷಣ ಮತ್ತೆ ಬರಬೇಕು. ಅಲ್ಲದೇ ಶಿವಮೊಗ್ಗದ ಮನೆಯ ಬಳಿ ಬೆಲ್ ಸದ್ದು ಕೇಳಿ ಬಾಗಿಲ ಬಳಿ ಬಂದಾಗ ಬಿಳಿ ಜುಬ್ಬಾ ಧರಿಸಿ, ಜೋಳಿಗೆ ರೀತಿಯ ಬ್ಯಾಗ್ ನೇತಾಕಿಕೊಂಡು ನನ್ನ ಎದುರಿದ್ದರು. ನಾನು ಅಂಬಿಯನ್ನು ನೋಡಿದ ಮೊದಲ ಘಳಿಗೆ ಅದು. ನನ್ನ ಹಿಂದ ಅಪ್ಪ ನಿಂತಿದ್ದರು ಒಳಗೆ ಬಾರಯ್ಯಾ ಅಂಬಿ ಎಂದು ಕರೆದ ಆ ಕ್ಷಣ ಮತ್ತೆ ಬರಬೇಕು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಮಾಮ ಎಂದು ಕಿಚ್ಚ ಸುದೀಪ್ ಪತ್ರ ಬರೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv