ನಟಿ, ಸಂಸದೆ ಸುಮಲತಾ (Sumalatha) ಬರ್ತ್ಡೇ (Birthday) ಪಾರ್ಟಿಯಲ್ಲಿ ಕಿಚ್ಚ ಸುದೀಪ್- ದರ್ಶನ್ (Darshan) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. 6 ವರ್ಷಗಳ ನಂತರ ಮುಖಾಮುಖಿಯಾದರು. ಈ ಬೆನ್ನಲ್ಲೇ ರಾತ್ರಿ ಪಾರ್ಟಿ (ಆಗಸ್ಟ್ 26) ಮಾಡಿ, ಬೆಳಿಗ್ಗೆ ಸುದೀಪ್ ದೇಹ ದಂಡಿಸಿದ್ದಾರೆ. ಕಟು ಮಸ್ತಾದ ಫೋಟೋವನ್ನ ಕಿಚ್ಚ (Kichcha Sudeep) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದರ್ಶನ್- ಸುದೀಪ್ ಇಬ್ಬರನ್ನು ಒಟ್ಟಿಗೆ ನೋಡಬೇಕು ಎಂಬ ಅಭಿಮಾನಿಗಳ ಆಸೆ ಇದೀಗ ಸುಮಲತಾ ಬರ್ತ್ಡೇ ಪಾರ್ಟಿ ಮೂಲಕ ನೆರವೇರಿದೆ. ಇಷ್ಟು ಹತ್ತಿರ ಆಗಿರುವವರು ಕೈ ಜೋಡಿಸುವ ಕಾಲ ಇನ್ನೂ ದೂರ ಇಲ್ಲ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಇನ್ನು ಇದೆಲ್ಲದರ ನಡುವೆ ಸುದೀಪ್ ಮತ್ತೆ ಸಿಕ್ಸ್ಪ್ಯಾಕ್ನಲ್ಲಿ ದರ್ಶನ ಕೊಟ್ಟಿದ್ದಾರೆ. K 46 ಚಿತ್ರಕ್ಕಾಗಿ ಮತ್ತೆ ದೇಹ ದಂಡಿಸುತ್ತಿದ್ದಾರೆ. ಕಟು ಮಸ್ತಾದ ದೇಹ ಪ್ರದರ್ಶಿಸಿ (Workout) ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದಾರೆ. ದೇಹ ಹುರಿಗೊಳಿಸಿ ಸ್ನಾಯುಗಳನ್ನ ಬೆಳೆಸಿ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೊಗಳು ಸಖತ್ ವೈರಲ್ ಆಗ್ತಿದೆ. ಇದನ್ನೂ ಓದಿ:‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಚಿತ್ರದ ಪೋಸ್ಟರ್ ರಿಲೀಸ್: ವಿ.ನಾಗೇಂದ್ರ ಪ್ರಸಾದ್ ಸಾಥ್
View this post on Instagram
ರಾತ್ರಿಯಷ್ಟೇ (ಆಗಸ್ಟ್ 26) ಸುಮಲತಾ ಅಂಬರೀಶ್ (Sumalatha Ambareesh) ಬರ್ತ್ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸುದೀಪ್, ಬೆಳಗ್ಗೆ ಮತ್ತೆ ಜಿಮ್ನಲ್ಲಿ ಬೆವರಿಳಿಸಿದ್ದಾರೆ. ಸಿಕ್ಸ್ ಪ್ಯಾಕ್ ಫೋಟೊಗಳನ್ನು ಶೇರ್ ಮಾಡಿ ವರ್ಕೌಟ್ ನನ್ನ ಹೊಸ ಹ್ಯಾಪಿ ಸ್ಪೇಸ್ ಆಗಿದೆ. ಈ ದಿನಚರಿ ನನ್ನನ್ನು ಶಾಂತವಾಗಿ ಮತ್ತು ಫೋಕಸ್ಡ್ ಆಗಿ ಇಡುತ್ತದೆ. K 46 ಕ್ಲೈಮ್ಯಾಕ್ಸ್ ಫೈಟ್ ಸೀಕ್ವೆನ್ಸ್ಗೆ ಇನ್ನೊಂದು ತಿಂಗಳು ಬಾಕಿಯಿದೆ. ನನ್ನ ವರ್ಕೌಟ್ ಸ್ಟೇಷನ್ನಲ್ಲಿ ಮತ್ತಷ್ಟು ಸಾಧಿಸುವುದಿದೆ ಎಂದು ಸುದೀಪ್ ಬರೆದುಕೊಂಡಿದ್ದಾರೆ. ಈ ಮೂಲಕ ಕಿಚ್ಚ ತಮ್ಮ ಸಿನಿಮಾ ಬಗ್ಗೆ ಅಪ್ಡೇಟ್ ಹಂಚಿಕೊಂಡಿದ್ದಾರೆ.
ತಮಿಳುನಾಡಿದ ಮಹಾಬಲಿಪುರಂ K 46 ಸಿನಿಮಾ ಚಿತ್ರೀಕರಣ ನಡೀತಿದೆ. ಒಂದು ದೊಡ್ಡ ಶೆಡ್ಯೂಲ್ ಮುಗಿಸಿ ಬಂದಿರುವ ಕಿಚ್ಚ ಮುಂದಿನ ಶೆಡ್ಯೂಲ್ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.ತಮಿಳಿನ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. K 46 ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನ್ನಲಾಗ್ತಿದ್ದು ಈಗಾಗಲೇ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನ ಮಾಡ್ತಿದ್ದಾರೆ. ಇನ್ನೂ ಸುದೀಪ್ ಹುಟ್ಟುಹಬ್ಬದಂದು (ಸೆಪ್ಟೆಂಬರ್ 2) ಕಿಚ್ಚನ ಸಿನಿಮಾದ ಟೈಟಲ್, ಹೆಚ್ಚಿನ ಅಪ್ಡೇಟ್ ಹೊರಬೀಳಲಿದೆ.