ವಿಡಿಯೋ ಮೂಲಕ ಪಬ್ಲಿಕ್ ಮ್ಯೂಸಿಕ್‍ಗೆ ಶುಭ ಕೋರಿ ಬೇಡಿಕೆ ಇಟ್ಟ ಕಿಚ್ಚ

Public TV
1 Min Read
sudeep wish

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪಬ್ಲಿಕ್ ಮ್ಯೂಸಿಕ್‍ನ 5ನೇ ವರ್ಷದ ಸಂಭ್ರಮಕ್ಕೆ ವಿಡಿಯೋ ಮೂಲಕ ಶುಭ ಕೋರಿದ್ದಾರೆ.

ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋವೊಂದನ್ನು ಹಾಕಿ ಅದಕ್ಕೆ, “5ನೇ ವರ್ಷ ಪೂರ್ಣಗೊಳಿಸಿ 6ನೇ ವರ್ಷಕ್ಕೆ ಕಾಲಿಡುತ್ತಿರುವ ಪಬ್ಲಿಕ್ ಮ್ಯೂಸಿಕ್ ಚಾನೆಲ್‍ಗೆ ಆಲ್ ದಿ ಬೆಸ್ಟ್. 5 ವರ್ಷ ಪೂರ್ಣಗೊಳಿಸಿದ್ದಕ್ಕೆ ಶುಭಾಶಯಗಳು ಹಾಗೂ 6ನೇ ವರ್ಷಕ್ಕೆ ಕಾಲಿಟ್ಟಿದ್ದಕ್ಕೆ ಆಲ್ ದಿ ಬೆಸ್ಟ್. ಪಬ್ಲಿಕ್ ಮ್ಯೂಸಿಕ್ ಹುಟ್ಟುಹಬ್ಬದ ಶುಭಾಶಯಗಳು” ಎಂದು ಹೇಳಿದ್ದಾರೆ.

Public music e1569655348434

ಇದೇ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್. ಆರ್. ರಂಗನಾಥ್ ಅವರಲ್ಲಿ ಒಂದು ಪ್ರಶ್ನೆಯನ್ನು ಕೇಳಿದ್ದಾರೆ. “ರಂಗನಾಥ್ ಅವರೇ ನೀವು ಪಬ್ಲಿಕ್ ಟಿವಿ ಚಾನೆಲ್‍ನಲ್ಲೂ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೀರಾ. ನಿಮಗೆ ಸಂಗೀತದ ಮೇಲೆ ಒಲವು ಜಾಸ್ತಿ ಎಂದು ಕೇಳ್ ಪಟ್ಟೆ. ಅದು ನಿಜವಾದರೆ ಸ್ವಲ್ಪ ಬಿಡುವು ಮಾಡಿಕೊಟ್ಟು ಈ ಚಾನೆಲ್‍ನಲ್ಲೂ ಕಾರ್ಯಕ್ರಮ ನಡೆಸಿಕೊಡಬಹುದಲ್ವಾ. ನನಗೆ ಕೇಳಬೇಕು ಎಂದು ಎನಿಸಿತು. ಹಾಗಾಗಿ ಕೇಳಿದೆ” ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ವಿಡಿಯೋ ಟ್ವೀಟ್ ಮಾಡಿದಲ್ಲದೇ ಸುದೀಪ್ ಅವರು, ಪಬ್ಲಿಕ್ ಮ್ಯೂಸಿಕ್ ಚಾನೆಲ್ ಹಾಗೂ 5 ವರ್ಷ ಪೂರ್ಣಗಳಿಸಲು ಕಾರಣರಾದ ಎಲ್ಲರಿಗೂ ಶುಭಾಶಯಗಳು. ಮುಂದಿನ ವರ್ಷಗಳಲ್ಲಿ ಶುಭವಾಗಲಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಮ್ಯೂಸಿಕ್ 5ನೇ ವರ್ಷದ ಸಂಭ್ರಮವನ್ನು ದೀಪ ಬೆಳಗುವ ಮೂಲಕ ಶುಭಾರಂಭ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್ ರಂಗನಾಥ್, ಸಿನಿ ತಾರೆಯರಾದ ಶರಣ್, ಶ್ರೀಮುರಳಿ, ರಾಗಿಣಿ, ಚಂದನ್ ಶೆಟ್ಟಿ, ಶ್ರೀಲೀಲಾ, ಲಹರಿ ಆಡಿಯೋ ಸಂಸ್ಥೆ ಮುಖ್ಯಸ್ಥರಾದ ಮನೋಹರ್ ನಾಯ್ಡು, ಲಹರಿ ವೇಲು, ಅಶ್ವಿನಿ ಆಡಿಯೋ ಸಂಸ್ಥೆ ಮುಖ್ಯಸ್ಥರಾದ ರಾಮ್‍ಪ್ರಸಾದ್, ಅಕ್ಷಯ್ ಆಡಿಯೋ ಸಂಸ್ಥೆ ಮುಖ್ಯಸ್ಥರಾದ ಸಿದ್ದರಾಜು, ಆನಂದ್ ಆಡಿಯೋ ಮುಖ್ಯಸ್ಥರಾದ ಶ್ಯಾಮ್ ಉಪಸ್ಥಿತರಿದ್ದರು.

https://www.youtube.com/watch?v=lS51uEJbwgI

Share This Article
Leave a Comment

Leave a Reply

Your email address will not be published. Required fields are marked *