– ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚು ಹಚ್ಚಿದ ನಟನ ಮಾತು
ಡಿಸೆಂಬರ್ 25ಕ್ಕೆ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ (Mark Cinema) ವರ್ಲ್ಡ್‌ವೈಡ್ ರಿಲೀಸ್ ಆಗ್ತಿದೆ. ಆದ್ರೆ ರಿಲೀಸ್‌ಗೂ ಮುನ್ನವೇ ಮಾರ್ಕ್ ಫುಲ್ ಸೌಂಡ್ ಮಾಡಿದೆ. ಹುಬ್ಬಳ್ಳಿಯಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಸುದೀಪ್ ಆಡಿದ ಮಾತುಗಳು, ಇಡೀ ಸ್ಯಾಂಡಲ್‌ವುಡ್‌ಗೆ ಕಿಚ್ಚುಹಚ್ಚಿದೆ.
…….. All set??#MarkTheFilm 🔥 wth you in just Three days. Select ua screen now. ❤️ pic.twitter.com/g8ytETVMMT
— Kichcha Sudeepa (@KicchaSudeep) December 22, 2025
ಹುಬ್ಬಳಿಯ (Hubballi) ಬೃಹತ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಚ್ಚನ ಮಾತಿಗಾಗಿ ಎಲ್ಲರೂ ಕಾದಿದ್ದರು. ಸುದೀಪ್ ಆಡಿದ ಒಂದು ಮಾತು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಪರೋಕ್ಷವಾಗಿ ಫ್ಯಾನ್ಸ್‌ವಾರ್ (Fans War) ಮಾತಿನ ಯುದ್ಧಭೂಮಿಯಾಗಿ ಬದಲಾಗಿದೆ. ʻಯುದ್ಧಕ್ಕೆ ಸಿದ್ಧ..ಯಾಕಂದ್ರೆ ನಾವು ನಮ್ಮ ಮಾತಿಗೆ ಬದ್ಧʼ ಎಂದಿದ್ದು, ಫ್ಯಾನ್ಸ್ ಫೈಟ್‌ನಲ್ಲಿ ಕಿಚ್ಚನ ಕಿಚ್ಚು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಚಿತ್ರರಂಗದಲ್ಲಿ ಫ್ಯಾನ್ ವಾರ್ ಜೋರಾಗಿದೆ. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ್ದು ಎಂದು ಚರ್ಚೆ ಶುರುವಾಗಿದೆ.
ಸುದೀಪ್ ಏಟು.. ವಿಜಯಲಕ್ಷ್ಮಿ ತಿರುಗೇಟು
ಸುದೀಪ್ ಹೇಳಿಕೆ ಪೈರಸಿ ಮಾಡೋರಿಗೆ ಖಡಕ್ ವಾರ್ನಿಂಗ್ ಕೊಟ್ಟಂತಿದ್ದರೂ ಅದು ದರ್ಶನ್ ಫ್ಯಾನ್ಸನ್ನೇ ಉದ್ದೇಶಿಸಿ ಹೇಳಿದ್ರಾ ಅನ್ನೋ ವಾದ ಶುರುವಾಗಿದೆ. ಕಿಚ್ಚನ ಯುದ್ಧದ ಮಾತಿಗೆ ನಾನಾ ಆಯಾಮ ಪಡೆದುಕೊಂಡಿದೆ. ಇದಕ್ಕೆ ನಿನ್ನೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಸುದೀಪ್ ಮಾತಿಗೆ ಕೌಂಟ್ರ ಕೊಟ್ಟಿದ್ದು ಹೇಳಿಕೆ ಹಾಗೂ ಪ್ರತಿ ಹೇಳಿಕೆಗಳು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆ ಹುಟ್ಟುಹಾಕಿವೆ.
ಕಿಚ್ಚ ಸುದೀಪ್ ಯುದ್ಧ ಮಾತಿಗೆ ದರ್ಶನ್ ಪತ್ನಿ ಟಾಂಗ್ ಕೊಟ್ರೆ, ದರ್ಶನ್ ಆಪ್ತ, ನಟ ಧನ್ವೀರ್ ಇನ್‌ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಫ್ಯಾನ್ಸ್ ವಾರ್ ಮತ್ತಷ್ಟು ಹೆಚ್ಚಿಸಿದೆ. ಮೊದಲಿನಿಂದಲೂ ದರ್ಶನ್ ಪರ ನಿಂತಿರುವ ಧನ್ವೀರ್, ದರ್ಶನ್ ಜೊತೆಗಿರುವ ಮತ್ತೊಂದು ಫೋಟೊ ಹಾಕಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ. ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಇರುತ್ತದೆ. ಆದರೆ ಸಿಂಹನೇ ರಾಜ ಎಂದು ತಮಿಳು ಸಿನಿಮಾ ಡೈಲಾಗ್ ಅನ್ನು ಧನ್ವೀರ್ ಗೌಡ ಪೋಸ್ಟ್ ಮಾಡಿದ್ದಾರೆ. ಅಷ್ಟೆ ಅಲ್ಲ ಮತ್ತೊಂದು ಸ್ಟೋರಿಯಲ್ಲಿ ವಿಜಯಲಕ್ಷ್ಮಿ ಬೆಂಕಿ ಮಾತಿಗೆ ಶಹಬ್ಬಾಶ್ ಎಂದು ಬರೆದುಕೊಂಡಿದ್ದಾರೆ. ಇದು ದರ್ಶನ್- ಸುದೀಪ್ ಫ್ಯಾನ್ಸ್ ವಾರ್‌ಗೆ ಮತ್ತಷ್ಟು ತುಪ್ಪ ಸುರಿದಂತೆ ಕಾಣುತ್ತಿದೆ.
ಫ್ಯಾನ್ಸ್ ಫೈಟ್ ಮಧ್ಯೆ ಪೈರಸಿ ವಾರ್!
ಕಿಚ್ಚನ ಕಿಚ್ಚಿಗೆ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಫ್ಯಾನ್ಸ್ ವಾರ್ ಜೋರಾಗಿದೆ. ದರ್ಶನ್ ಫ್ಯಾನ್ಸ್ ಹಾಗೂ ಸುದೀಪ್ ಫ್ಯಾನ್ಸ್ ವಾಕ್ಸಮರ ತಾರಕಕ್ಕೇರಿದೆ. ಸೋಷಿಯಲ್ ಮೀಡಿಯಾದಲ್ಲಿ ಒಬ್ಬರನ್ನ ಒಬ್ಬರು ಕೆಣಕಿ ಪೋಸ್ಟ್ ಮಾಡುತ್ತಿದ್ದಾರೆ. ಫ್ಯಾನ್ಸ್ ವಾರ್ ಮಧ್ಯೆ.. ಪೈರಸಿ ವಾರ್ ಶುರುವಾಗಿದೆ. ಸ್ಯಾಂಡಲ್‌ವುಡ್ ಸಿನಿಮಾಗಳಿಗೆ ಪೈರಸಿ ಪಿಡುಗು ವಕ್ಕರಿಸಿದೆ. ಕನ್ನಡ ಸಿನಿಮಾಗಳಿಗೆ ಪೈರಸಿ ಮಾರಕವಾಗ್ತಿದೆ. ಪೈರಸಿ ಪಿಶಾಚಿ ವಿರುದ್ಧ ಡೆವಿಲ್ ಚಿತ್ರತಂಡ ಗರಂ ಆಗಿದೆ. ಡೆವಿಲ್‌ಗೂ ಪೈರಸಿ ಕಾಟ ತಾಗಿದ್ದು, ಈವರೆಗೂ 10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲೀಟ್ ಮಾಡಲಾಗಿದ್ಯಂತೆ. ಪ್ಲೀಸ್ ಪೈರಸಿ ಬೇಡ.. ಚಿತ್ರಮಂದಿರಕ್ಕೆ ಬನ್ನಿ ಎಂದು ಮನವಿ ಮಾಡಿ ಡೆವಿಲ್ ಚಿತ್ರತಂಡ ಅಧಿಕೃತ ಪೋಸ್ಟ್ ಮಾಡಿದೆ.
ಕಿಚ್ಚನ ʻಆಲ್ ಸೆಟ್ʼ ಪೋಸ್ಟ್ ಅರ್ಥ ಏನು?
ಫ್ಯಾನ್ಸ್ ವಾರ್ ನಡುವೆ ಕಿಚ್ಚ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಆಲ್ ಸೆಟ್…? ಎಂದು ಟ್ವೀಟ್ ಮಾಡಿದ್ದಾರೆ. ಯುದ್ಧಕ್ಕೆ ಸಜ್ಜು ಎಂಬ ಸುಳಿವು ಕೊಟ್ಟಂತೆ ಪೋಸ್ಟ್ ಮಾಡಿದ್ದಾರೆ. ಈ ಒಂದು ಪೋಸ್ಟ್ ನಾನಾ ಅರ್ಥ ಕೊಡ್ತಿದೆ. ಏಟಿಗೆ ಎದಿರೇಟು ಕೊಡಲು ಕಿಚ್ಚ ಸಿದ್ಧರಾದ್ರಾ? ಅನ್ನೊ ಚರ್ಚೆ ಹುಟ್ಟು ಹಾಕಿದೆ.
ಯುದ್ಧಕ್ಕೆ ಸಿದ್ಧ.. ಸುದೀಪ್ ಆಪ್ತರ ಕ್ಲಾರಿಟಿ
ಸುದೀಪ್ ಕಿಚ್ಚು ಒಂದ್ಕಡೆಯಾದ್ರೆ, ಅವರ ಆಪ್ತ ಚಂದ್ರಚೂಡ್ ಫೇಸ್ಬುಕ್‌ನಲ್ಲಿ ಸುದೀಪ್ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾಗಳನ್ನ ಹಾಳು ಮಾಡುವ ಒಂದು ಪಡೆ ಇದೆ. ಪೈರಸಿ ಮಾಡುವವರ ವಿರುದ್ಧ ನಮ್ಮ ಹೋರಾಟ. ಮ್ಯಾಕ್ಸ್ ರಿಲೀಸ್ ಆಗಿದ್ದಾಗ 11 ಸಾವಿರ ಲಿಂಕ್ಸ್‌ಗಳನ್ನ ನಾವು ಡಿಲೀಟ್ ಮಾಡ್ದಿದ್ವಿ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳುವುದು ಯಾಕೆ? ಅಂತ ದರ್ಶನ್ ಫ್ಯಾನ್ಸ್‌ಗೆ ಕೌಂಟರ್ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಪ್ರಚಾರ ಕಾರ್ಯಕ್ರಮದಲ್ಲಿ ಸುದೀಪ್ ಆಪ್ತ, ಮಾಜಿ ಸಚಿವ ರಾಜೂ ಗೌಡ ಸುದೀಪ್ ಫ್ಯಾನ್ಸ್ ಕಾಂಜಿ ಪೀಂಜಿ ಅಲ್ಲ. ಕ್ಲಾಸ್ ಫ್ಯಾನ್ಸ್ ಅಂತ ಹೇಳಿದ್ದರು. ಈ ಮಾತು ಕೂಡ ಪರೋಕ್ಷವಾಗಿ ದರ್ಶನ್ ಫ್ಯಾನ್ಸ್ ಗುರಿಯಾಗಿಸಿ ಹೇಳುವಂತಿತ್ತು. ಸುದೀಪ್ ಹೇಳಿಕೆ ತಮ್ಮ ಮಾತಿಗೆ ಇವತ್ತು ʻಪಬ್ಲಿಕ್ ಟಿವಿʼಗೆ ಕ್ಲ್ಯಾರಿಟಿ ಕೊಟ್ಟ ರಾಜೂ ಗೌಡ, ಸುದೀಪ್ ಯುದ್ಧಕ್ಕೆ ಸಿದ್ಧ ಅನ್ನೋದು ಪೈರಸಿ ವಿರುದ್ಧ ಮಾತ್ರ. ಇನ್ನೊಬ್ಬರನ್ನು ದೃಷ್ಟಿಯಲ್ಲಿ ಇಟ್ಕೊಂಡು ಹೇಳಿಲ್ಲ ಅಂತ ಸಮಜಾಯಿಷಿ ಕೊಟ್ರು. ಅಲ್ದೆ ತಮ್ಮ ಹೇಳಿಕೆಗೂ ಸ್ಪಷ್ಟನೆ ಕೊಟ್ಟಿದ್ದಾರೆ.

