ಬಿಗ್ ಬಾಸ್ ಮನೆ ಇದೀಗ ಸಖತ್ ಸೌಂಡ್ ಮಾಡುತ್ತಿದೆ. ದಿನದಿಂದ ದಿನಕ್ಕೆ ಮನೆಯ ರಂಗು ಹೆಚ್ಚುತ್ತಿದೆ. ಇನ್ನು ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಸೋಮಣ್ಣ, ಕ್ಯಾಪ್ಟನ್ಸಿ ಟಾಸ್ಕ್ ವಿಚಾರಕ್ಕೆ ಸಾನ್ಯಾ ಯಾಕೆ ಅರ್ಹರಲ್ಲ ಎಂಬ ವಿಚಾರ ಚರ್ಚೆಗೆ ಬಂದಾಗ ಸಾನ್ಯಾ ಹಾಗೂ ರೂಪೇಶ್ ಸದಾ ಕಚ್ಚಿಕೊಂಡೇ ಇರುತ್ತಾರೆ ಎಂಬ ಮಾತನ್ನು ಸೋಮಣ್ಣ ಹೇಳಿದ್ದರು. ಈಗ ವೀಕೆಂಡ್ ಶೋನಲ್ಲೂ ಕಿಚ್ಚನ ಎದುರಲ್ಲೂ ಇವರಿಬ್ಬರ ವಿಚಾರ ಸಿಕ್ಕಾಪಟ್ಟೆ ಚರ್ಚೆ ಆಗಿದೆ.
ಇತ್ತಿಚೆಗೆ ರೂಪೇಶ್ ಶೆಟ್ಟಿ ಮತ್ತು ಸೋಮಣ್ಣ ನಡುವೆ ಮಾತೆತ್ತಿದರೆ ಮನಸ್ತಾಪ ಸೃಷ್ಟಿಯಾಗುತ್ತಿದೆ. ರೂಪೇಶ್ ಯಾವಾಗಲೂ ಸಾನ್ಯಾ ಜೊತೆ ಇರುವುದಕ್ಕೆ ಸೋಮಣ್ಣ ಆ ವಿಚಾರ ಹೇಳುತ್ತಾ ಇರುತ್ತಾರೆ. ಇದು ಇಬ್ಬರಿಗೂ ಆಗುತ್ತಿಲ್ಲ. ಇದೀಗ ಮತ್ತೊಮ್ಮೆ ಮನದ ಕೋಪ ಬ್ಲಾಸ್ಟ್ ಆಗಿದೆ. ನನ್ನ ಪ್ರಕಾರ ಸೋಮಣ್ಣ ತಮ್ಮದೇ ಆದ ಜೋನ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಅದನ್ನಷ್ಟೇ ಅವರು ನೋಡುತ್ತಾರೆ. ರಾತ್ರಿ ಹೊತ್ತು ಗುಂಪು ಅಂತ ಹೇಳಿ ಕೆಲವರನ್ನಷ್ಟೇ ಹೆಸರಿಸುತ್ತಾರೆ.

ಪಾತ್ರೆಯೆಲ್ಲಾ ತೊಳೆದು ಕೊನೆಯಲ್ಲಿ ಮಲಗಬೇಕು ಸರ್. ನಮಗೂ ಸ್ವಲ್ಪ ಹೆಲ್ತ್ ಸಮಸ್ಯೆ ಇದೆ. ಬೆಳಗ್ಗೆ ಟ್ಯಾಲೆಟ್‌ಗೆ ಹೋಗೋದಕ್ಕೆಲ್ಲ ಕಷ್ಟ ಆಗುತ್ತೆ. ಜೀರಿಗೆ ನೀರೆಲ್ಲಾ ಕುಡಿಯಬೇಕಾಗುತ್ತದೆ. ಹಾಗೇ ಸ್ವಲ್ಪ ಮಾತಾಡ್ತಾ ಇರುತ್ತೇವೆ. ಎಲ್ಲರ ಹೆಸರನ್ನು ಅವರು ಹೇಳಲ್ಲ. ಕೆಲವರ ಹೆಸರನ್ನಷ್ಟೇ ತೆಗೆಯುತ್ತಾರೆ. ಆಗಿರಬಹುದು, ಅನ್ನಿಸುತ್ತೆ ಎಂಬ ಊಹೆಯಿಂದ ಅದೇ ಸತ್ಯ ಅಂತ ಅಂದುಕೊಳ್ಳುತ್ತಾರೆ. ಅವರ ಮೇಲಿನ ಗೌರವಕ್ಕಾಗಿ ನಾನು ಹೋಗಿ ಕ್ಲಿಯರ್ ಮಾಡಿದರು ಅಹ ಕೇಳಿಸಿಕೊಳ್ಳುವುದಿಲ್ಲ.
ಸೋಮಣ್ಣ ಅವರಿಂದಾಗಿ ಸಾನ್ಯಾ ಜೊತೆ ಮಾತಾಡುವುದಕ್ಕೆ ಭಯ ಆಗುತ್ತಾ ಇದೆ. ಅವರು ನೋಡುತ್ತಾರಾ ಅಂತ ಭಯ ಆಗುತ್ತೆ. ರಾಕಿ ಮತ್ತು ಸೋನು ಮಾತಾಡ್ತಾರೆ ಅವರ ಬಗ್ಗೆ ಏನು ಹೇಳಲ್ಲ ಎಂದು ಕಿಚ್ಚನ ಮುಂದೆ ರೂಪೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ದಿನದಿಂದ ದಿನಕ್ಕೆ ಸ್ಪರ್ಧಿಗಳ ಜಟಾಪಟಿ ಇದೀಗ ಜೋರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ತಿರುವು ಪಡೆದುಕೊಳ್ಳುತ್ತೇ ಎಂಬುದನ್ನ ಕಾದುನೋಡಬೇಕಿದೆ.




