ಬೆಂಗಳೂರು: ಬಹಳಷ್ಟು ಜನರಿಗೆ ಲ್ಯಾಂಬೋರ್ಗಿನಿ ಕಾರು ಇಷ್ಟ. ಆದರೆ ಕಿಚ್ಚ ಸುದೀಪ್, ಲ್ಯಾಂಬೋರ್ಗಿನಿ ವೇಸ್ಟು ಎಂದು ಹೇಳಿ ಸಂಚಲನ ಸೃಷ್ಟಿಸಿದ್ದಾರೆ.
`ಹೀರೋ ಲೈಫ್ ಹತ್ತು ವರ್ಷ ಇರುತ್ತೆ, ನಾವು ರಾಜ್ಕುಮಾರ್ ಥರ ಇರೋಕೆ ಆಗಲ್ಲ’ ಎಂದು ಹಿಂದೊಮ್ಮೆ ಸುದೀಪ್ ಹೇಳಿಕೊಂಡಿದ್ದರು. ಈ ಮಾತಿಗೆ ಖಾಸಗಿ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕ್ಲ್ಯಾರಿಫಿಕೇಷನ್ ಕೊಟ್ಟಿದ್ದಾರೆ.
`ನಾವು ಪರಿಶ್ರಮ ಹಾಕಿದ್ರೆ ಮಾತ್ರ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿಯಲು ಸಾಧ್ಯ. ಇಲ್ಲವಾದರೆ ಬೇರೆಯವರು ನಮ್ಮನ್ನು ಹಿಂದೆ ಹಾಕುತ್ತಾರೆ. ನಮ್ಮ ಬಳಿ ಫೆರಾರಿ, ಲ್ಯಾಂಬೋರ್ಗಿನಿ ಇದ್ದರೇನು? ನಾವು 70 ಕಿ.ಮೀ ಸ್ಪೀಡ್ನಲ್ಲಿ ಸಾಗಿದರೆ ಒಂದು ಸೈಕಲ್ ಕೂಡ ನಮ್ಮನ್ನು ಹಿಂದೆ ಹಾಕುವ ತಾಕತ್ತು ಹೊಂದಿರುತ್ತದೆ. ಸರಾಸರಿ ಸ್ಪೀಡನ್ನಾದರೂ ನಾವು ಕಾಪಾಡಿಕೊಳ್ಳಲೇಬೇಕು ಎಂದು ಸುದೀಪ್ ಹೇಳಿದ್ದಾರೆ.
ದುಬಾರಿ ಫೆರಾರಿ ಹಾಗೂ ಲ್ಯಾಂಬೋರ್ಗಿಯನ್ನ ಎಕ್ಸಾಂಪಲ್ ಕೊಟ್ಟು ಚಿತ್ರರಂಗದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಕಿಚ್ಚ ಸಿಂಪಲ್ ಆಗಿ ಹೇಳಿದ್ದಾರೆ.
ಈ ಸಂದರ್ಶನದಲ್ಲಿ ನೀವು ಬ್ಯುಸಿ ಇದ್ದೀರಿ ಎನ್ನುವ ಪ್ರಶ್ನೆಗೆ ಉದ್ದೇಶ ಸರಿಯಾಗಿದ್ದರೆ ನಾನು ಸಿಕ್ಕೇ ಸಿಗುತ್ತೇನೆ ಎಂದು ಉತ್ತರಿಸಿದರು.