ಬೆಂಗಳೂರು: ಮನೆಯವರ ಜೊತೆ ಜಗಳವಾಡಿ ಊರು ಬಿಟ್ಟು ಹೋದ ಅಭಿಮಾನಿಯನ್ನು ಪತ್ತೆ ಮಾಡುವಂತೆ ಸ್ವತಃ ಕಿಚ್ಚ ಸುದೀಪ್ ವಿಡಿಯೋವನ್ನು ಬಿಡುಗಡೆ ಮಾಡಿ ಮನವಿ ಮಾಡಿದ್ದಾರೆ.
ಮಣಿಕಂಠ ಊರು ಬಿಟ್ಟು ಹೋದ ಸುದೀಪ್ ಅಭಿಮಾನಿ. ಗಿರಿನಗರದ ಸೆಂಟ್ ಫಿಲೋಮಿನಾ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಮಣಿಕಂಠ ಟ್ಯೂಷನ್ ಗೆ ಹೋಗು ಎಂದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದಾನೆ.
ಮೇ 20 ರಂದು ಮನೆ ಬಿಟ್ಟು ಹೋಗಿದ್ದು, ಅಂದಿನಿಂದ ಮಣಿಕಂಠನಿಗಾಗಿ ಆತನ ಹೆತ್ತವರು ಹುಡುಕಾಟ ನಡೆಸುತ್ತಿದ್ದು, ಪೋಷಕರಿಗೆ ಈಗ ಕಿಚ್ಚ ಸುದೀಪ್ ಕೂಡ ಸಹಕಾರ ನೀಡಿದ್ದಾರೆ.
ತಂದೆ ತಾಯಿಗಿಂತ ಶ್ರೇಷ್ಠ ಪ್ರೀತಿ ಯಾರಿಂದಲೂ ನೀಡಲು ಸಾಧ್ಯವಿಲ್ಲ. ನೀನು ನನ್ನ ಅಭಿಮಾನಿ ಎಂದು ತಿಳಿಯಿತು. ಎಲ್ಲಿದ್ದರೂ ಮನೆಗೆ ಹೋಗು. ಮನೆಗೆ ವಾಪಸ್ ಬಂದಾಗ ನಾನೇ ಬಂದು ನಿನ್ನನ್ನು ಭೇಟಿ ಮಾಡ್ತೀನಿ ಎಂದು ಸುದೀಪ್ ವಿಡಿಯೋದಲ್ಲಿ ಹೇಳಿದ್ದಾರೆ. ಒಂದು ನಿಮಿಷದ ವಿಡಿಯೋವನ್ನು ಮಾಡಿ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
https://www.youtube.com/watch?v=hPzZmsa94Gw