ತುಮಕೂರು: ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಯೋರ್ವ ಶುಭಾಶಯ ಕೋರಲು ಸೈಕಲ್ ಯಾತ್ರೆ ಮೂಲಕ ಬೆಂಗಳೂರು ಹೊರವಲಯದ ನೆಲಮಂಗಲ ತಲುಪಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯಲ್ಲಪ್ಪ ಎಂಬ ಅಭಿಮಾನಿ ಸೈಕಲ್ ಯಾತ್ರೆ ಬಂದಿದ್ದಾರೆ. ಕಳೆದ 8 ದಿನದಿಂದ ಸೈಕಲ್‍ನಲ್ಲಿಯೇ ಬೆಂಗಳೂರಿಗೆ ಬಂದಿದ್ದಾರೆ. ಈ ನಡುವೆ ತುಮಕೂರಿಗೆ ಬಂದಿದ್ದ ಅವರನ್ನು ಕಿಚ್ಚ ಸುದೀಪ್ ಅಭಿಮಾನಿಗಳು ಯಲ್ಲಪ್ಪರಿಗೆ ಹಣ್ಣು-ಹಂಪಲು, ಆಹಾರ ಪದಾರ್ಥ ನೀಡಿ ಅಭಿನಂದಿಸಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಣ್ಣನನ್ನು ಬೇಟಿ ಮಾಡಲು ಸುಮಾರು 550 ದೂರದಿಂದ ಬಂದ ಕಿಚ್ಚ ಯಲ್ಲಪ್ಪ ರವರನ್ನು ನೆಲಮಂಗಲ ತಾಲೂಕು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿಯ ಅಧ್ಯಕ್ಷರಾದ ಜೀವ ರವರು ಆತ್ಹ್ಮಿಯವಾಗಿ ಬರಮಾಡಿಕೊಂಡು ಉಳಿಯಲು ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟ ಕ್ಷಣ @KicchaSudeep#BaadshahSudeepBdayCDP pic.twitter.com/Jd7LImzbYY
— NELAMANGALA TALUK KSSS ® (@NKSSSOFFICIAL) August 31, 2019
ಶನಿವಾರ ಸಂಜೆ ನೆಲಮಂಗಲಕ್ಕೆ ಬಂದ ಯಲ್ಲಪ್ಪರನ್ನು ಅಲ್ಲಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ ಅವರು ಅತ್ಮೀಯವಾಗಿ ಬರಮಾಡಿಕೊಂಡು ರಾತ್ರಿ ಉಳಿಯಲು ವ್ಯವಸ್ಥೆ ಮಾಡಿದ್ದರು. ಈ ವಿಚಾರವನ್ನು ನೆಲಮಂಗಲದ ಅಭಿಮಾನಿಗಳು ಟ್ವಿಟ್ಟರ್ ಗೆ ಹಾಕಿದ್ದು ಇದನ್ನು ಕಂಡ ಕಿಚ್ಚ ಕೂಡ ರೀಟ್ವೀಟ್ ಮಾಡುವ ಮೂಲಕ ಅಭಿನಂದನೆ ತಿಳಿಸಿದ್ದರು.
ನಾಳೆ ಅಂದರೆ ಸೆಪ್ಟೆಂಬರ್ 02 ರಂದು ನಡೆಯಲಿರುವ ಕಿಚ್ಚ ಸುದೀಪ್ ಬರ್ತ್ ಡೇ ಸಂಭ್ರಮದಲ್ಲಿ ಯಲ್ಲಪ್ಪ ಪಾಲ್ಗೊಳ್ಳಲಿದ್ದಾರೆ. ಸುಮಾರು 550 ಕಿ.ಮೀ ದೂರ ಸೈಕಲ್ ಮೂಲಕ ಪ್ರಯಾಣಿಸಿ ಬೆಂಗಳೂರಿಗೆ ಬಂದಿರುವ ಯಲ್ಲಪ್ಪ ಅಭಿಮಾನ ಮೆರೆದಿದ್ದಾರೆ.