ಬೆಳಗ್ಗೆ, ಸಂಜೆ ಯಾವ ಹೊತ್ತಿನಲ್ಲಿ ಬೇಕಾದರೂ ಸವಿಯಬಹುದಾದ ರೆಸಿಪಿ ಹುಡುಕುತ್ತಿದ್ದೀರಾ? ಪೌಷ್ಠಿಕಾಂಶದ ಆಹಾರ, ತಿನ್ನಲು ರುಚಿಕರವಾಗಿರುವ ಮತ್ತು ಮಕ್ಕಳಿಗೆ ತುಂಬಾನೇ ಇಷ್ಟವಾಗುವುದು ಕಿಚಡಿಯಾಗಿದೆ. ಈ ಅಡುಗೆಯನ್ನು ಮಾಡುವುದು ತುಂಬಾ ಸುಲಭ ಮತ್ತು ನಾಲಿಗೆಗೆ ರುಚಿ ನೀಡುವ ಅಡುಗೆಯಾಗಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಹೆಸರು ಬೇಳೆ- ಅರ್ಧ ಕಪ್
* ತೋಗರಿ ಬೇಳೆ- ಅರ್ಧ ಕಪ್
* ಅಕ್ಕಿ – 2 ಕಪ್
* ಕಾಳು ಮೆಣಸು- ಸ್ವಲ್ಪ
* ಈರುಳ್ಳಿ 2
* ಟೊಮೆಟೋ- 2
* ಒಣ ಮೆಣಸು- 3
* ಬಾದಾಮಿ/ಪಿಸ್ತಾ ಪುಡಿ- 1 ಚಮಚ
* ಜೀರಿಗೆ ಪುಡಿ- 1 ಚಮಚ
* ದನಿಯಾ ಪುಡಿ- 1 ಚಮಚ
* ಅರಿಶಿಣ ಪುಡಿ- 1 ಚಮಚ
* ಲವಂಗ- 2
* ತುಪ್ಪ- 3
* ಕರಿಬೇವು-
* ಪಲಾವ್ ಎಲೆ
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಕುಕ್ಕರಿನಲ್ಲಿ ಹೆಸರು ಬೇಳೆ, ತೋಗರಿ ಬೇಳೆ, ಅಕ್ಕಿ, ಟೊಮೆಟೊ, ಈರುಳ್ಳಿ, ಕಾಳು ಮೆಣಸು, ರುಚಿಗೆ ತಕ್ಕ ಉಪ್ಪು, ಅರಿಶಿಣ ಹಾಕಿ 4 ಲೋಟ ನೀರು ಹಾಕಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ: ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟ್ರಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್
Advertisement
* ಈಗ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಸ್ವಲ್ಪ ಜೀರಿಗೆ, ಒಣ ಮೆಣಸು ಮುರಿದು ಹಾಕಿ, ನಂತರ ಪಲಾವ್ ಎಲೆ ಅಥವಾ ಸ್ವಲ್ಪ ಕರಿಬೇವು ಹಾಕಿ ಲವಂಗ ಸೇರಿಸಿ ಫ್ರೈ ಮಾಡಬೇಕು.
* ನಂತರ ಬೇಯಿಸಿದ ಅಕ್ಕಿ- ಬೇಳೆ ಸೇರಿಸಿ, ಅದಕ್ಕೆ ಸ್ವಲ್ಪ ಖಾರ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಡ್ರೈಫ್ರೂಟ್ಸ್ ಪುಡಿ ಸೇರಿಸಿ ಕುದಿಸಿದರೆ ಆರೊಗ್ಯಕರವಾದ ಕಿಚಡಿ ಸಿದ್ಧವಾಗುತ್ತದೆ. ಇದನ್ನೂ ಓದಿ: ಆಫ್ರಿಕಾದಲ್ಲಿ ರೂಪಾಂತರ ಕೋವಿಡ್ ತಳಿ ಪತ್ತೆ – ಕಟ್ಟೆಚ್ಚರಕ್ಕೆ ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ