ತಮಿಳಿನ ನಟ ವಿಜಯ್ ಆಂಟೋನಿ ಚಿತ್ರಕ್ಕೆ ಕಿಚ್ಚನ ಬೆಂಬಲ

Public TV
2 Min Read
kiccha sudeep

ಮಿಳು ಚಿತ್ರರಂಗದ ಖ್ಯಾತ ನಟ – ಸಂಗೀತ ನಿರ್ದೇಶಕರು ಆಗಿರುವ ವಿಜಯ್ ಆಂಟೋನಿ (Vijay Antony) ಭಿಕ್ಷುಕ-2 (Pichaikkaran 2) ಸಿನಿಮಾ ಮೂಲಕ ನಿರ್ದೇಶನದ ಅಖಾಡಕ್ಕಿಳಿದಿರುವುದು ಗೊತ್ತೇ ಇದೆ. ಪಿಕೈಕ್ಕಾರನ್ ಸಿನಿಮಾದ ಸೀಕ್ವೆಲ್ ಆಗಿರುವ ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗಿದೆ. ಕನ್ನಡದಲ್ಲಿ ಭಿಕ್ಷುಕ-2 ಎಂಬ ಟೈಟಲ್ ನಡಿ ಮೂಡಿ ಬರ್ತಿದ್ದು, ಈ ಸಿನಿಮಾದ ಕನ್ನಡದ ಟ್ರೇಲರ್ ನ್ನು ಕಿಚ್ಚ ಸುದೀಪ್ (Kiccha Sudeep) ಬಿಡುಗಡೆ ಮಾಡಿ ನೆಚ್ಚಿನ ಗೆಳೆಯ ವಿಜಯ್ ಆಂಥೋನಿಗೆ ಶುಭ ಕೋರಿದ್ದಾರೆ.

sudeep 1 4

ಪಿಚೈಕ್ಕರನ್ ಮೊದಲ ಭಾಗ ಅಭೂತಪೂರ್ವ ಯಶಸ್ಸು ಕಂಡಿತ್ತು. ಈ ಚಿತ್ರ ವಿಜಯ್ ಅಂಥೋನಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಈಗ ಪಿಚೈಕ್ಕರನ್ ಸೀಕ್ವೆಲ್ ಮೂಲಕ ವಿಜಯ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ವಿಜಯ್ ಆಂಟೋನಿ ಫಿಲ್ಮಂ ಕಾರ್ಪೊರೇಷನ್ ನಡಿ ಅವರೇ ನಿರ್ಮಿಸಿದ್ದು, ಪತ್ನಿ ಫಾತೀಮಾ ವಿಜಯ್ ಆಂಟೋನಿ ಭಿಕ್ಷುಕ-2 ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಲಂಕೆಯಲ್ಲಿ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ

 

View this post on Instagram

 

A post shared by Vijay Antony (@vijayantony)

ಮಲೇಷ್ಯಾದಲ್ಲಿ ಭಿಕ್ಷುಕ-2 ಶೂಟಿಂಗ್ ನಡೆಯುತ್ತಿದ್ದ ವೇಳೆ ವಿಜಯ್ ಆಂಟೋನಿ ಗಂಭೀರ ಗಾಯಗೊಂಡಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಕೆ ಕಂಡಿರುವ ಅವರೀಗ ಪ್ರಮೋಷನ್ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಅದರ ಮೊದಲ ಭಾಗವಾಗಿ ಭಿಕ್ಷುಕ-2 ಟ್ರೇಲರ್ ರಿಲೀಸ್ ಆಗಿದೆ. ಖ್ಯಾತ ಉದ್ಯಮಿ ವಿಜಯ್ ಮೂರ್ತಿಯನ್ನು ಸತ್ಯ ಕೊಲೆ ಮಾಡ್ತಾನೆ. ಕೊಲೆ ನಂತರ ಮುಂದೇನಾಗುತ್ತದೆ ಎಂಬ ಒಂದಷ್ಟು ಟ್ವಿಸ್ಟ್ ಅಂಡ್ ಟರ್ನ್ ಅಂಶಗಳು ಟ್ರೇಲರ್ ನ ಹೈಲೆಟ್ಸ್.

ವಿಜಯ್ ಆಂಟೋನಿ ನಿರ್ದೇಶನದ ಈ ಚಿತ್ರದಲ್ಲಿ ದೇವ್ ಗಿಲ್, ಹರೀಶ್ ಪೆರಾಡಿ, ಜಾನ್ ವಿಜಯ್, ರಾಧಾ ರವಿ, ಮನ್ಸೂರ್ ಅಲಿ ಖಾನ್, ವೈ ಜಿ ಮಹೇಂದ್ರನ್, ರಾಜಾ ಕೃಷ್ಣಮೂರ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾವ್ಯ ಥಾಪರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಿಜಯ್ ಆಂಟೋನಿ ನಟನೆ ನಿರ್ದೇಶನದ ಜೊತೆಗೆ ಸಂಗೀತ, ಸಂಕಲನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮೇ 19 ರಂದು ಕನ್ನಡ ಸೇರಿ ಪಂಚ ಭಾಷೆಯಲ್ಲಿ ಭಿಕ್ಷುಕ-2 ರಿಲೀಸ್ ಆಗಲಿದೆ.

Share This Article