ವಿನಯ್‌ ವಿರುದ್ಧ ಧ್ವನಿ ಎತ್ತದ ನಮ್ರತಾಗೆ ಕಿಚ್ಚನ ಖಡಕ್‌ ಕ್ಲಾಸ್‌

Public TV
1 Min Read
namratha gowda

ದೊಡ್ಮನೆಯ ಆಟ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ವಿನಯ್ (Vinay Gowda) ವಿರುದ್ಧ ಧ್ವನಿ ಎತ್ತದ ನಮ್ರತಾಗೆ (Namratha Gowda) ಕಿಚ್ಚ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ದೊಡ್ಮನೆಯಲ್ಲಿ ಚಮಚಾ ಅಷ್ಟೇ ನಮಗೆ ಕಾಣ್ತಿದೆ ಎಂದು ಸುದೀಪ್ (Sudeep) ನಟಿಗೆ ಖಡಕ್ ಆಗಿ ಹೇಳಿದ್ದಾರೆ.

sudeep 5

ಈ ವಾರ ಬಿಗ್ ಬಾಸ್ ಮನೆ ರಣರಂಗವಾಗಿತ್ತು. ವಿನಯ್- ಸಂಗೀತಾ (Sangeetha Sringeri) ನಡುವೆ ಜಟಾಪಟಿ ಜೋರಾಗಿತ್ತು. ಆಟ ಆಡುವ ಮತ್ತು ಮಾತಿನ ಭರದಲ್ಲಿ ಕೆಲ ಕೆಟ್ಟ ಪದಗಳನ್ನ ವಿನಯ್ ಉಪಯೋಗಿಸಿದ್ದರು. ಮೈಕಲ್‌ಗೆ ಹೆಣ್ಣು ಮಕ್ಕಳಿಗೆ ಮೊದಲು ಗೌರವ ಕೊಡಿ ಎಂದು ಹೇಳುವ ನೀವು, ವಿನಯ್ ಇತರೆ ಮಹಿಳಾ ಸ್ಪರ್ಧಿಗಳಿಗೆ ಕೆಟ್ಟ ಪದಗಳನ್ನ ಬಳುಸುವಾಗ ಎಲ್ಲಿಗೆ ಹೋಗಿದ್ರಿ ನಮ್ರತಾ ಎಂದು ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ. ಮನೆ ಮಂದಿಗೆ ನಟ ನೀತಿ ಪಾಠ ಮಾಡ್ತಿದ್ದಾರೆ. ಇದನ್ನೂ ಓದಿ:Breaking: ಬಿಗ್ ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಔಟ್

namratha

ಕಳೆದ ವಾರ ನಮ್ರತಾ ಗೌಡಗೆ ವೀಕ್ಷಕರ ಕಡೆಯಿಂದ ಉಡುಗೊರೆಯಾಗಿ ಚಮಚ ಲಭಿಸಿತ್ತು. ನೀವು ದಾದಾಗಿರಿ ಮಾಡಲಿಲ್ಲ ಅಂದರೂ ಪರ್ವಾಗಿಲ್ಲ. ಚಮಚಾಗಿರಿ ಮಾಡಿಕೊಂಡು ಇರಬೇಡಿ. ನಮ್ಮ ಕೈಯಲ್ಲಿ ಅದನ್ನ ನೋಡೋಕೆ ಆಗ್ತಿಲ್ಲ ಎಂಬ ಸಂದೇಶ ಕೂಡ ನಮ್ರತಾಗೆ ಲಭಿಸಿತ್ತು. ಆದರೆ, ಪ್ರೇಕ್ಷಕ ಪ್ರಭುಗಳ ಸಂದೇಶವನ್ನ ನಮ್ರತಾ ಗೌಡ ಗಂಭೀರವಾಗಿ ಪರಿಗಣಿಸಲಿಲ್ಲ.

ವಿನಯ್ ಗೌಡ ತಪ್ಪು ಮಾಡುತ್ತಿದ್ದರೂ ನಮ್ರತಾ ಗೌಡ ಪ್ರಶ್ನಿಸಲಿಲ್ಲ. ವಿನಯ್ ಗೌಡ ಬಾಯಿಂದ ಆಕ್ಷೇಪಾರ್ಹ ಶಬ್ದಗಳು ಬಂದರೂ ನಮ್ರತಾ ಗೌಡ ಸುಮ್ಮನಿದ್ದರು. ಆದರೆ, ಎದುರಾಳಿ ತಂಡದವರ ವಿರುದ್ಧ ಮಾತ್ರ ನಮ್ರತಾ ಗೌಡ ಧ್ವನಿ ಎತ್ತಿದ್ದರು. ಹೀಗಾಗಿ, ಇಡೀ ವಾರ ನಮಗೆ ಕಾಣಿಸಿದ್ದು ನಿಮ್ಮ ಕೈಯಲ್ಲಿರುವ ಚಮಚ ಮಾತ್ರ ಎಂದು ನಮ್ರತಾ ಗೌಡಗೆ ಕಿಚ್ಚ ಸುದೀಪ್ ಹೇಳಿದ್ದಾರೆ. ಆ ಮೂಲಕ ನಮ್ರತಾ ಗೌಡಗೆ ಕಿಚ್ಚ ಸುದೀಪ್ ಗುಂಡ್ ಪಿನ್ ಚುಚ್ಚಿದ್ದಾರೆ. ಇನ್ನಾದರೂ ಅರಿತು ನಮ್ರತಾ, ಗೆಲ್ಲಲು ತಮ್ಮ ಆಟ ಸ್ವಂತಿಕೆಯಿಂದ ಆಡ್ತಾರಾ ಕಾದುನೋಡಬೇಕಿದೆ.

Share This Article