ಕಿಚ್ಚ ಸುದೀಪ್ (Kiccha Sudeep) ಅಭಿನಯದ ಮಾರ್ಕ್ ಸಿನಿಮಾ (Mark Movie) ಇದೇ ಡಿ.25 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಾರ್ಕ್ ಸಿನಿಮಾಗೆ ಪೈರಸಿ ಮಹಾಮಾರಿ ಕಂಟಕವಾಗಿ ಪರಿಣಮಿಸುತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ತೆರೆಕಂಡು ಎರಡೇ ದಿನಕ್ಕೆ ಬರೋಬ್ಬರಿ 9 ಸಾವಿರಕ್ಕೂ ಹೆಚ್ಚು ಲಿಂಕ್‌ಗಳನ್ನ ತೆಗೆಸಿದ್ದಾರಂತೆ. ಹೀಗಾದ್ರೆ ಕಷ್ಟಪಟ್ಟು, ಕೋಟಿ ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡಿದವ್ರ ಗತಿ ಏನು ಅನ್ನೋ ಆತಂಕ ಕಾಡುತ್ತಿದೆ.
ಕಳೆದ ಬಾರಿ ಮ್ಯಾಕ್ಸ್ ಸಿನಿಮಾಗೂ ಇದೇ ಪರಿಸ್ಥಿತಿ ಎದುರಾಗಿತ್ತು. ಕೆಲವರನ್ನು ಪೊಲೀಸರು ಹಿಡಿದಿದ್ದರು. ಆಗ ಸುಮ್ಮನೆ ಬಿಟ್ಟು ಕಳುಹಿಸಿದ್ದೆವು. ಈ ಬಾರಿ ಮುಲಾಜೇ ಇಲ್ಲ ಸಿಕ್ಕರೇ ಕಠಿಣ ಕ್ರಮ ಜರುಗಿಸ್ತೀವಿ ಎಂದಿದ್ದಾರೆ ಕಿಚ್ಚ ಸುದೀಪ್. 45 ಸಿನಿಮಾ ನಿರ್ಮಾಪಕರ ಮಾತು ಕೇಳಿ ಬೇಜಾರಾಯ್ತು, ಶಿವಣ್ಣ ಆರೋಗ್ಯ ಸರಿ ಇಲ್ಲದಾಗಲೂ ಬಂದು ಸಿನಿಮಾ ಮಾಡಿದ್ದಾರೆ. ಮೂರು ವರ್ಷ ಶ್ರಮ ಹಾಕಿ ಮಾಡಿದ ಸಿನಿಮಾಗೆ ಹೀಗಾದ್ರೆ ಬೇಜಾರಾಗುತ್ತೆ ಎಂದಿದ್ದಾರೆ ಸುದೀಪ್. ಇದನ್ನೂ ಓದಿ: Most Eligible Bachelor ಸಲ್ಮಾನ್ ಖಾನ್ ಈಗ ಸೀನಿಯರ್ ಸಿಟಿಜನ್
ಟೀಕೆಗಳಿಗೆಲ್ಲ ಉತ್ತರ ಕೊಡೋಕೆ ಬಂದಿಲ್ಲ ಎಂದಿರುವ ಸುದೀಪ್, ಇಂಟಲಿಜೆನ್ಸ್ ಅಂದ ತಕ್ಷಣ ಸಿಲ್ಲಿ ಆಗಿ ಮಾತಾಡೋಣ ಅಲ್ಲ. ನಮ್ದು ಒಂದು ಇಂಟಲಿಜೆನ್ಸ್ ಇರುತ್ತೆ, ಸಿನಿಮಾ ಕಾಪಾಡಿಕೊಳ್ಳಿ ಅಂತ ಮಾಹಿತಿ ಬಂದಾಗ ನಾನು 48ಗಂಟೆಯ ಮುಂಚೆನೇ ಪೈರಸಿ ಬಗ್ಗೆ ವಾರ್ನ್ ಮಾಡಿದ್ದೆ. ಆದ್ರೆ ಆ ಮಾತು ಎಲ್ಲೆಲ್ಲೋ ಹೋಗಿತ್ತು ಎಂದಿದ್ದಾರೆ ಸುದೀಪ್.

