ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kiccha Sudeep) ಅವರ ಸಹೋದರಿಯ ಪುತ್ರ ಸಂಚಿತ್ (Sanchit Sanjeev) ನಟಿಸಿ, ನಿರ್ದೇಶನ ಮಾಡುತ್ತಿರುವ ಸಿನಿಮಾದ ಟೀಸರ್ (Teaser) ಇಂದು ಬೆಂಗಳೂರಿನಲ್ಲಿ ರಿಲೀಸ್ ಆಗುತ್ತಿದೆ. ಈ ವರ್ಣರಂಜಿತ ಸಮಾರಂಭಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ 7ಕ್ಕೆ ಟೀಸರ್ ಬಿಡುಗಡೆ ಆಗಲಿದೆ.
ಸಕಲ ತಯಾರಿಯೊಂದಿಗೆ ಸಂಚಿತ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ವಿಶೇಷ ಅಂದ್ರೆ ತಾವು ನಟಿಸುವ ಚೊಚ್ಚಲ ಚಿತ್ರವನ್ನು ತಾವೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಜೊತೆ ಕೆ.ಪಿ ಶ್ರೀಕಾಂತ್, ಮನೋಹರ್ ನಾಯ್ಡು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಶ್ರೀಕಾಂತ್ ಮಾಹಿತಿ ನೀಡಿದ್ದರು. ಸಂಚಿತ್ ಸಿನಿಮಾ ಬಗ್ಗೆ ಅಧಿಕೃತವಾಗಿ ಜೂನ್ 14ರಂದು ಘೋಷಣೆ ಮಾಡಿದ್ದರು.
ತಮ್ಮ ಮೊದಲ ಸಿನಿಮಾದಲ್ಲೇ ನಟನೆಯ ಜೊತೆ ನಿರ್ದೇಶನ (Direction) ಕೂಡ ಸಂಚಿತ್ ಮಾಡ್ತಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಯುವನಟ ಸಂಚಿತ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದೊಂದು ಕ್ರೈಂ ಡ್ರಾಮಾ ಆಧರಿಸಿದ ಸಿನಿಮಾವಾಗಿದ್ದು, ತಂದೆ-ಮಗನ ಬಾಂಧವ್ಯವನ್ನು ಸಾರುವ ಕಥೆಯನ್ನು ಈ ಚಿತ್ರದ ಮೂಲಕ ತೋರಿಸಲಿದ್ದಾರೆ. ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ
ಲಹರಿ ಸಂಸ್ಥೆಯ (Lahari Films) ಮನೋಹರ್ ನಾಯ್ಡು, ವೀನಸ್ ಮೂವಿಸ್‌ನ ಕೆ. ಪಿ ಶ್ರೀಕಾಂತ್ ಈಗಾಗಲೇ 2 ಸಿನಿಮಾ ನಿರ್ಮಿಸ್ತಿದ್ದಾರೆ. ಉಪೇಂದ್ರ ನಟನೆಯ ‘ಯುಐ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಸೆಟ್ಟೇರಿ ನಿಂತೇ ಹೋಗಿದ್ದ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಮರುಜೀವ ಕೊಟ್ಟಿದ್ದಾರೆ. ನಂತರ ಸಂಚಿತ್ ನಟನೆಯ ಚಿತ್ರಕ್ಕೆ ಈ ಜೋಡಿ ಬಂಡವಾಳ ಹೂಡಿದೆ.
ಸಂಚಿತ್ ಸಂಜೀವ್ ನಿರ್ದೇಶನ ಹಾಗೂ ನಾಯಕನಾದ ಜಿಮ್ಮಿ (Jimmy) ಚಿತ್ರದ ಟೀಸರ್ ಇಂದು ಅನಾವರಣವಾಗಲಿದೆ. ಇದಾದ ಎರಡು ದಿನಕ್ಕೆ ಕಿಚ್ಚ 46 ಧಗಧಗಿಸಲಿದೆ. ಆ ದಿನವೇ ಕಿಚ್ಚನ ಹೊಸ ಸಿನಿಮಾದ ವಿವರಗಳು ಹೊರ ಬೀಳಲಿವೆ. ಟೈಟಲ್ ಹೇಳ್ತಾರಾ? ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರಾ? ಟೀಸರ್ ಬಿಡ್ತಾರಾ? ಯಾವುದೂ ಗೊತ್ತಿಲ್ಲ. ಏನಾದರಾಗಲಿ. ಕೊನೆಗೂ ಸುದೀಪ್ ಮತ್ತೆ ಅಖಾಡಕ್ಕೆ ಇಳಿದರಲ್ಲ ಅಷ್ಟು ಸಾಕು ಅಂತಿದ್ದಾರೆ ಅಭಿಮಾನಿ ಬಳಗ.
ಸುದೀಪ್ ಕೊನೆಗೂ ಸಿಹಿ ಸುದ್ದಿ ಕೊಟ್ಟಿದ್ದಾರೆ. ನಲವತ್ತಾರನೇ ಸಿನಿಮಾದ ಬಗ್ಗೆ ಅಪ್‌ಡೇಟ್ ಕೊಡಲು ಒಂದು ದಿನಾಂಕ ಫೀಕ್ಸ್ ಮಾಡಿದ್ದಾರೆ. ಮೂರು ಚಿತ್ರಗಳನ್ನು ಒಪ್ಪಿಕೊಂಡಿರುವ ಕಿಚ್ಚ ಮೊದಲಿಗೆ ಇದಕ್ಕೆ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ. ಯಾವುದು ಸಿನಿಮಾ ? ರಿಲೀಸ್ ಯಾವಾಗ ? ಟೈಟಲ್ ಏನು ? ಕಿಚ್ಚನ ಮೆರವಣಿಗೆ ಇಲ್ಲಿದೆ..
ವಿಕ್ರಾಂತ್ ರೋಣ. ಅದೇ ಕೊನೆ. ಮತ್ತೆ ಬಣ್ಣ ಹಚ್ಚಿಲ್ಲ ಸುದೀಪ್. ಅದು ಬಿಟ್ಟು ಇದು ಬಿಟ್ಟು ಮತ್ಯಾವುದು? ಫ್ಯಾನ್ಸ್ ಪ್ರಶ್ನೆ ಕೇಳುತ್ತಿದ್ದರು. ಸುದೀಪ್ ಮಾತ್ರ ಮೌನಂ ಶರಣ ಗಚ್ಚಾಮಿ. ಕೆಲವು ದಿನಗಳ ಹಿಂದೆ ಕೊನೆಗೂ ಸಿನಿಮಾ ವಿಷಯ ಹರವಿಟ್ಟಿದ್ದರು. ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಅದರಲ್ಲಿ ಮೊದಲಿಗೆ ನಟಿಸುವ ಸಿನಿಮಾದ ವಿವರ ಹೇಳುತ್ತೇನೆ ಎಂದಿದ್ದರು. ಅದಕ್ಕೀಗ ಡೇಟ್ ಫಿಕ್ಸ್ ಮಾಡಿದ್ದಾರೆ. ಇದೇ 27ರಂದು ಟ್ವೀಟರ್‌ನಲ್ಲಿ ಸಕಲ ಮಾಹಿತಿ ಕೊಡಲಿದ್ದಾರೆ.