ಮಂಡ್ಯ: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಅವರ ತಾಯಿ ವಿಧಿವಶರಾಗಿ ಇಂದಿಗೆ ಮೂರು ದಿನಗಳಾಗಿದೆ. ಈ ಹಿನ್ನೆಲೆ ಕಾವೇರಿ ನದಿಯಲ್ಲಿ (Cauvery River) ತಾಯಿ ಸರೋಜಾ ಅಸ್ತಿಯನ್ನು ಸುದೀಪ್ ವಿಸರ್ಜನೆ ಮಾಡಿದ್ದಾರೆ.
ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣದ (Srirangapatna) ಗೋಸಾಯಿಘಾಟ್ ಬಳಿಯ ಕಾವೇರಿ ನದಿಯಲ್ಲಿ ಸರೋಜಮ್ಮನ ಅಸ್ತಿ ವಿಸರ್ಜಿಸಿ ಸದ್ಗತಿಗಾಗಿ ಸುದೀಪ್ ಪ್ರಾರ್ಥಿಸಿದ್ದಾರೆ. ವಿಧಿ ವಿಧಾನ ಕಾರ್ಯದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದಾರೆ. ಅಸ್ತಿ ವಿಸರ್ಜನೆ ಕಾರ್ಯ ಚಿತ್ರೀಕರಿಸದಂತೆ ಮಾಧ್ಯಮಗಳಿಗೆ ಸುದೀಪ್ ಮನವಿ ಮಾಡಿದ್ದರು. ಅಸ್ತಿ ವಿಸರ್ಜನೆ ವೇಳೆ ಸುದೀಪ್ ಕಣ್ಣೀರಿಟ್ಟಿದ್ದಾರೆ. ವಿಧಿ ವಿಧಾನ ಕಾರ್ಯದ ಬಳಿಕ ಬೆಂಗಳೂರಿನತ್ತ ಸುದೀಪ್ ತೆರಳಿದ್ದಾರೆ. ಇದನ್ನೂ ಓದಿ: ಅಜ್ಜಿಯ ನೆನೆದು ಭಾವನಾತ್ಮಕ ಪತ್ರ ಬರೆದ ಸುದೀಪ್ ಪುತ್ರಿ
ನ್ಯುಮೋನಿಯಾದಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ತಾಯಿ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಭಾನುವಾರ ಮುಂಜಾನೆ 07:04ಕ್ಕೆ ಸರೋಜಾ ಇಹಲೋಕ ತ್ಯಜಿಸಿದ್ದರು. ಸರೋಜಾ ಅವರ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿತ್ತು. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಹಿಂದೂ ಸಂಪ್ರದಾಯದಂತೆ ಸುದೀಪ್ ತಾಯಿಯ ಅಂತ್ಯಕ್ರಿಯೆ ನಡೆದಿದೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿ ಆಸ್ಪತ್ರೆಗೆ ಬಂದಿದ್ದೆ, ಕೊನೆಯ ಬಾರಿಗೆ ಪ್ರಜ್ಞೆಯಲ್ಲಿದ್ದಾಗ ನೋಡಲಾಗಲಿಲ್ಲ: ತಾಯಿಯ ಅಗಲಿಕೆಗೆ ಕಿಚ್ಚ ಭಾವುಕ