ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

sudeep 2

ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದ ಮೊದಲ ಶೋ ವಿಳಂಬವಾಗಿದ್ದಕ್ಕೆ ನಟ ತನ್ನ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಿಚ್ಚ, ಕೆಲವೊಂದು ವಿಚಾರಗಳಿಂದ ಸಿನಿಮಾದ ಮೊದಲ ಶೋ ವಿಳಂಬವಾಗಿದೆ. ಈ ಬಗ್ಗೆ ಮಾಹಿತಿ ನೀಡುವುದು ನನ್ನ ಕರ್ತವ್ಯವಾಗಿದೆ. ನಾನು ವೈಯಕ್ತಿವಾಗಿ ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ಇದರಲ್ಲಿ ಥಿಯೇಟರ್ ಮಾಲೀಕ ತಪ್ಪಿಲ್ಲ. ಹೀಗಾಗಿ ಅಲ್ಲಿ ಅಹಿತರ ಘಟನೆಗಳನ್ನು ನಡೆಸಬೇಡಿ. ಚಿತ್ರಮಂದಿರಗಳಿಗೆ ಹಾನಿ ಮಾಡಬೇಡಿ.

ಇದು ಅತ್ಯಂತ ವಿಚಿತ್ರ ಸನ್ನಿವೇಶವಾಗಿದೆ. ನಿರ್ಲಕ್ಷ್ಯಕ್ಕಾಗಿ ಕ್ಷಮೆಯಾಚಿಸುತ್ತೇನೆ. ಅಭಿಮಾನಿಗಳು ಕೆಟ್ಟ ರೀತಿಯಲ್ಲಿ ವರ್ತಿಸಬಾರದು. ಸಿನಿಮಾ ಬಿಡಗಡೆಯ ಸಮಯವನ್ನು ನಾನೇ ನೀಡುವೆ, ಕೆಲ ಸಮಸ್ಯೆಗಳಿಂದ ರಿಲೀಸ್ ವಿಳಂಬವಾಗಿದೆ. ಚಿತ್ರ ಬಿಡುಗಡೆಗೆ ನಾನು ಕೂಡ ಉತ್ಸುಕನಾಗಿರುವೆ. ಅಭಿಮಾನಿಗಳು ಶಾಂತಿಯಿಂದ ಇರಿ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಸಲ್ಮಾನ್ ಸಿನಿಮಾಗೆ ರವಿ ಬಸ್ರೂರ್ ಸಂಗೀತ ಸಂಯೋಜನೆ

sudeep 2 2

ರಾಜ್ಯಾದ್ಯಂತ ಇಂದು 300 ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ- 3 ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಶೋ ರದ್ದಾಗಿದ್ದು, ರಾಜ್ಯಾದ್ಯಂತ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ತಮ್ಮ ನೆಚ್ಚಿನ ನಟನ ಚಿತ್ರಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.

Comments

Leave a Reply

Your email address will not be published. Required fields are marked *