ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ನಟನೆಯ 46ನೇ ಸಿನಿಮಾದ ಬಿಗ್ ಅಪ್‌ಡೇಟ್‌ವೊಂದು ಹೊರ ಬಿದ್ದಿದೆ. ಅದೆಷ್ಟೋ ತಿಂಗಳುಗಳಿಂದ ಕಿಚ್ಚನ ಮುಂದಿನ ಸಿನಿಮಾ ಬಗ್ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ರಗಡ್ ಲುಕ್, ಖಡಕ್ ಡೈಲಾಗ್ ಹೇಳುವ ಮೂಲಕ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಸಾರಥ್ಯದಲ್ಲಿ ಪ್ಯಾನ್ ಇಂಡಿಯಾದತ್ತ ಗಣೇಶ್ ಗೋಲ್ಡನ್ ಹೆಜ್ಜೆ
ಸುದೀಪ್ ನಟನೆಯ 46ನೇ ಸಿನಿಮಾಗೆ ತಮಿಳಿನ ಯುವ ನಿರ್ದೇಶಕ ವಿಜಯ್ ಕಾರ್ತಿಕೇಯ (Vijay Karthikeya) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾದ ಸೂಪರ್ ಸಕ್ಸಸ್ ನಂತರ ಎಂದೂ ಕಾಣಿಸಿಕೊಂಡಿರದ ಹೊಸ ಅವತಾರದಲ್ಲಿ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಸದ್ಯ Kiccha 46 ಸಿನಿಮಾ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ.
ದೊಡ್ಡ ಕಥೆದು ಚಿಕ್ಕ ಸಂದರ್ಭ ಹೇಳೋದಾ ಎಂದು ಹೇಳುವ ಡೈಲಾಗ್ ಮೂಲಕ ಕಿಚ್ಚ ಸುದೀಪ್ ರಾ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಒಬ್ಬನನ್ನ ಮುಗಿಸೋಕೆ ಅಷ್ಟು ಜನ ಹೋಗಿದ್ದಾರಾ. ಇನ್ನೂ ಅವನನ್ನ ಸಾಯಿಸಿಲ್ವ ಅನ್ನೋ ಕೆಡಿ ಖಡಕ್ ಮಾತಿಗೆ ಗನ್ ಹಿಡಿದು ಸುದೀಪ್ ರಗಡ್ ಆಗಿ ಎಂಟ್ರಿ ನೀಡಿದ್ದಾರೆ. ಯುದ್ಧ ನಾ ಹುಟ್ಟು ಹಾಕೋರನ್ನ ಕಂಡರೆ ಆಗಲ್ಲ. ಯುದ್ಧಕ್ಕೆ ಹೆದರಿಕೊಂಡು ಓಡಿಹೋಗೋರನ್ನ ಕಂಡರೂ ನನಗೆ ಆಗಲ್ಲ. ಅಖಾಡಕ್ಕೆ ಇಳಿದು ಎದುರಾಳಿಗಳ ಎದೆ ಬಗೆದು ರಕ್ತ ಚೆಲ್ಲಾಡಿ, ಆ ರಕ್ತ ಸುರಿಸಿಕೊಂಡು ಓಡಿ ಹೋಗೋದನ್ನ ನೋಡೋನು ನಾನು. ಇಳಿದ ಮೇಲೆ ದಯೆ, ಕ್ಷಮೆ, ಸಂಧಾನ ಇದ್ಯಾವುದು ಇರೋದಿಲ್ಲ ಎಂದು ಎದುರಾಳಿಗಳಿಗೆ ಸುದೀಪ್ ಖಡಕ್ ಡೈಲಾಗ್‌ನಿಂದ ವಾರ್ನಿಂಗ್ ನೀಡಿದ್ದಾರೆ. ಚಿತ್ರದ ಮೊದಲ ಟೀಸರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಾನು ಮನುಷ್ಯನಲ್ಲ, ರಾಕ್ಷಸ ಎಂದು ಹೇಳುವ ಕಿಚ್ಚನ ಖಡಕ್ ಮಾತು ಅಭಿಮಾನಿಗಳ ಗಮನ ಸೆಳೆದಿದೆ.
𝐓𝐇𝐄 𝐃𝐄𝐌𝐎𝐍 𝐖𝐀𝐑 𝐁𝐄𝐆𝐈𝐍𝐒😈#Kichcha46Teaser out now!
🔗 https://t.co/nuVPnwIhJ3#Kichcha46 @theVcreations @Kichchacreatiin @saregamasouth @TSrirammt @shivakumarart @vijaykartikeyaa @shekarchandra71 @AJANEESHB @ganeshbaabu21 #SaregamaMusic @KRG_Connects #Kiccha46 pic.twitter.com/YW5NN9n4TQ
— Kichcha Sudeepa (@KicchaSudeep) July 2, 2023
ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಷನ್ಸ್’ ಜೊತೆ ಕಿಚ್ಚ ಸುದೀಪ್ ಕೈ ಜೋಡಿಸಿದ್ದಾರೆ. ಕಿಚ್ಚನ 46ನೇ ಚಿತ್ರಕ್ಕೆ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಕಬಾಲಿ, ತುಪಾಕಿ, ಅಸುರನ್, ಸಿನಿಮಾಗಳಂತಹ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಕಲೈಪುಲಿ ಎಸ್. ಧಾನು ಅವರು ಸುದೀಪ್ ಅವರ ಈ ಚಿತ್ರಕ್ಕೆ ಸಾಥ್ ನೀಡ್ತಿದ್ದಾರೆ.
ಕಿಚ್ಚ ಸುದೀಪ್ ಸಿನಿಮಾಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಖುಷಿ ಪಡೋವಂತಹ ರಗಡ್ ಟೀಸರ್ ಸಿಕ್ಕಿದೆ. ಸುದೀಪ್ ರಣ ರಣ ರಕ್ತ ಸಿಕ್ತ ಅವತಾರ ನೋಡಿ ಕಿಚ್ಚ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.



