ನನ್ನ ವಿರುದ್ಧ ಯಾರೆಲ್ಲ ಆರೋಪ ಮಾಡಿದ್ದಾರೋ ಅವರಿಗೆ ಕಾನೂನು ಮೂಲಕ ಉತ್ತರ ಕೊಡಬೇಕಿದೆ. ಹಾಗಾಗಿ ಕೋರ್ಟಿಗೆ ಹಾಜರಾಗುತ್ತಿರುವುದಾಗಿ ಕಿಚ್ಚ ಸುದೀಪ್ (Kiccha Sudeep) ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನಾನು ಕಷ್ಟಪಟ್ಟು ಹೆಸರು ಸಂಪಾದಿಸಿದ್ದೇನೆ. ಅದನ್ನು ಹಾಳು ಮಾಡಿಕೊಳ್ಳಲು ನಾನು ಸಿದ್ದನಿಲ್ಲ. ಜನರಿಗೆ ತಪ್ಪು ಸಂದೇಶ ಹೋಗಬಾರದು ಎನ್ನುವ ಕಾರಣಕ್ಕಾಗಿ ಕೋರ್ಟಿಗೆ ಬಂದಿರುವೆ. ಅಲ್ಲಿಯೇ ಅವರಿಗೆಲ್ಲ ಉತ್ತರ ನೀಡುತ್ತೇನೆ’ ಎಂದರು ಕಿಚ್ಚ.
Advertisement
ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಬೆಂಗಳೂರಿನ ಕಾರ್ಪೊರೇಷನ್ ಹತ್ತಿರದ ಎಸಿಎಂಎಂ ನ್ಯಾಯಾಲಯಕ್ಕೆ ಕಿಚ್ಚ ಸುದೀಪ್ ಆಗಮಿಸಿ, ನಿರ್ಮಾಪಕ ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ (Defamation) ಹೂಡಿದ್ದಾರೆ. ಕೋರ್ಟ್ (Court) ಹಾಲ್ 13 ರಲ್ಲಿ ಸುದೀಪ್ ಹಾಜರಾಗಿದ್ದರು. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು 17.08.2023ಕ್ಕೆ ನಿಗದಿ ಮಾಡಿದೆ.
Advertisement
Advertisement
ಈ ಹಿಂದೆ ಕುಮಾರ್ (N. Kumar) ಅವರಿಗೆ ಸುದೀಪ್ ಲೀಗಲ್ ನೋಟಿಸ್ (Notice) ನೀಡಿದ್ದರು. ಹತ್ತು ದಿನಗಳ ಗಡುವು ಕೂಡ ನೀಡಿದ್ದರು. ಕುಮಾರ್ ಬಹಿರಂಗ ಕ್ಷಮೆ ಕೇಳದೇ ಇದ್ದರೆ, ಕ್ರಿಮಿನಲ್ ಡಿಪಾಮೇಷನ್ ಹಾಕುವುದಾಗಿಯೂ ನೋಟಿಸ್ ನಲ್ಲಿ ತಿಳಿಸಿದ್ದರು. ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೇ ಇರುವ ಕಾರಣಕ್ಕಾಗಿ ಕಾನೂನು ಹೋರಾಟ ನಡೆಸಲು ಸುದೀಪ್ ಮುಂದಾಗಿದ್ದಾರೆ.
Advertisement
ಸುದೀಪ್ ಅವರು ತಮ್ಮಿಂದ ಹಣ ಪಡೆದು, ವಂಚಿಸಿದ್ದಾರೆ ಎಂದು ಕುಮಾರ್ ಈ ಹಿಂದೆ ಆರೋಪ ಮಾಡಿದ್ದರು. ಕಾಲ್ ಶೀಟ್ ಕೊಡದೇ ತಮಗೆ ಸತಾಯಿಸುತ್ತಿದ್ದಾರೆ ಎಂದು ಅವರು ಸುದೀಪ್ ಮೇಲೆ ಆರೋಪ ಮಾಡಿದ್ದರು. ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಮಾತಿನ ಹಿನ್ನೆಲೆಯಾಗಿ ಸುದೀಪ್ ಕಾನೂನು ಮೊರೆ ಹೋಗಿದ್ದಾರೆ.
Web Stories